Daily GK Quiz: ಭಾರತೀಯ ಜೀವ ವಿಮಾ ನಿಗಮದ (LIC) ಪ್ರಧಾನ ಕಛೇರಿ ಎಲ್ಲಿದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Nov 10, 2024, 09:35 PM IST
  • ವಿಂಧ್ಯಾ ಮತ್ತು ಸಾತ್ಪುರ ಶ್ರೇಣಿಗಳ ನಡುವೆ ಯಾವ ನದಿ ಹರಿಯುತ್ತದೆ?
  • ಜೀವಮಾನದಲ್ಲಿ ಒಮ್ಮೆ ಮಾತ್ರ ಜನ್ಮ ನೀಡುವ ಪ್ರಾಣಿ ಯಾವುದು?
  • ಪ್ರಪಂಚದಲ್ಲಿ ಅತಿ ಹೆಚ್ಚು ರಕ್ತದೊತ್ತಡ ಹೊಂದಿರುವ ಪ್ರಾಣಿ ಯಾವುದು?
Daily GK Quiz: ಭಾರತೀಯ ಜೀವ ವಿಮಾ ನಿಗಮದ (LIC) ಪ್ರಧಾನ ಕಛೇರಿ ಎಲ್ಲಿದೆ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಪ್ರಸಿದ್ಧ ಮದುಮಲೈ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?

ಉತ್ತರ: ತಮಿಳುನಾಡು

ಪ್ರಶ್ನೆ 2: ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

ಉತ್ತರ: ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ (1936ರಲ್ಲಿ ಸ್ಥಾಪನೆ)  

ಪ್ರಶ್ನೆ 3: ಭಾರತದ ಅತಿ ದೊಡ್ಡ ಅಣೆಕಟ್ಟು ಯಾವುದು?

ಉತ್ತರ: ಭಾಕ್ರಾ ನಂಗಲ್ ಅಣೆಕಟ್ಟು, ಹಿಮಾಚಲ ಪ್ರದೇಶ

ಪ್ರಶ್ನೆ 4: ಯಾವ ನದಿಯ ಮೇಲೆ ಸರ್ದಾರ್ ಸರೋವರ ಅಣೆಕಟ್ಟನ್ನು ನಿರ್ಮಿಸಲಾಗಿದೆ?

ಉತ್ತರ: ನರ್ಮದಾ ನದಿ

ಪ್ರಶ್ನೆ 5: ವಿಂಧ್ಯಾ ಮತ್ತು ಸಾತ್ಪುರ ಶ್ರೇಣಿಗಳ ನಡುವೆ ಯಾವ ನದಿ ಹರಿಯುತ್ತದೆ?

ಉತ್ತರ: ನರ್ಮದಾ ನದಿ

ಇದನ್ನೂ ಓದಿ: 2025ರಲ್ಲಿ ಭರ್ಜರಿ ರಜಾ-ಮಜಾ... ಒಟ್ಟು 51 ದಿನಗಳ ರಜೆ ಘೋಷಣೆ ಮಾಡಿದ ಕೇಂದ್ರ ಸರ್ಕಾರ: ಇಲ್ಲಿದೆ ನೋಡಿ ರಜೆಯ ಸಂಪೂರ್ಣ ಪಟ್ಟಿ

ಪ್ರಶ್ನೆ 6: ಸೋಮನಾಥ ದೇವಾಲಯವು ಭಾರತದ ಯಾವ ರಾಜ್ಯದ ಕರಾವಳಿಯಲ್ಲಿದೆ?

ಉತ್ತರ: ಗುಜರಾತ್

ಪ್ರಶ್ನೆ 7: ಜೀವಮಾನದಲ್ಲಿ ಒಮ್ಮೆ ಮಾತ್ರ ಜನ್ಮ ನೀಡುವ ಪ್ರಾಣಿ ಯಾವುದು?

ಉತ್ತರ: ಹೆಣ್ಣು ಆಕ್ಟೋಪಸ್

ಪ್ರಶ್ನೆ 8: ಪ್ರಪಂಚದಲ್ಲಿ ಅತಿ ಹೆಚ್ಚು ರಕ್ತದೊತ್ತಡ ಹೊಂದಿರುವ ಪ್ರಾಣಿ ಯಾವುದು?

ಉತ್ತರ: ಜಿರಾಫೆ

ಪ್ರಶ್ನೆ 9: ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಯಾವುದು?

ಉತ್ತರ: ಐಐಟಿ ಖರಗ್‌ಪುರ

ಪ್ರಶ್ನೆ 10: ಭಾರತೀಯ ಜೀವ ವಿಮಾ ನಿಗಮದ (LIC) ಪ್ರಧಾನ ಕಛೇರಿ ಎಲ್ಲಿದೆ?

ಉತ್ತರ: ಮುಂಬೈ

ಇದನ್ನೂ ಓದಿ: Daily GK Quiz: ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಭಾರತದ ಯಾವ ರಾಜ್ಯದಲ್ಲಿದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News