ಈ ದಿನದಿಂದ UPI ವ್ಯವಹಾರ ದುಬಾರಿಯಾಗಲಿದೆ, Extra Charge ನೀಡಬೇಕಾಗಲಿದೆ

ನೋಟು ಅಪನಗದೀಕರಣದ ನಂತರ, ಆಪ್ ಮೂಲಕ ಹಣ ಪಾವತಿಸುವ ಜನರ ಸಂಖ್ಯೆ ಗಮನೀಯವಾಗಿ ಹೆಚ್ಚಾಗಿದೆ. ಇದರ ನಂತರ, ಜನರು ಲಾಕ್‌ಡೌನ್ ಸಮಯದಲ್ಲಿ ಕ್ಯಾಶ್ ಲೆಸ್ ಪೇಮೆಂಟ್ ಅನ್ನು ಸಹ ಅಳವಡಿಸಿಕೊಂಡರು. ಆದರೆ ಈಗ ವಿವಿಧ ಅಪ್ಲಿಕೇಶನ್‌ಗಳ ಮೂಲಕ ಹಣ ಪಾವತಿಸುವ ಜನರಿಗೆ ದೊಡ್ಡ ಸುದ್ದಿಯೊಂದು ಹೊರಬಂದಿದೆ.

Last Updated : Dec 5, 2020, 05:58 PM IST
  • UPI ಮೂಲಕ ಹಣ ಪಾವತಿಗೆ ಹೆಚ್ಚುವರಿ ಶುಲ್ಕ.
  • ಥರ್ಡ್ ಪಾರ್ಟಿ ಆಪ್ ಗಳ ಮೇಲೆ ಶೇ.30ರಷ್ಟು ಕ್ಯಾಪ್ ವಿಧಿಸಲಾಗಿದೆ.
  • ಪ್ರತಿ ತಿಂಗಳು ದೇಶಾದ್ಯಂತ 200 ಕೋಟಿ ರೂ.ಗಳ ವ್ಯವಹಾರ UPI ಮೂಲಕ ನಡೆಯುತ್ತದೆ.
ಈ ದಿನದಿಂದ UPI ವ್ಯವಹಾರ ದುಬಾರಿಯಾಗಲಿದೆ, Extra Charge ನೀಡಬೇಕಾಗಲಿದೆ title=

ನವದೆಹಲಿ: ಮುಂಬರುವ ಜನವರಿ 1 ರಿಂದ ಸಂಪೂರ್ಣ ದೇಶಾದ್ಯಂತ ಯುನಿಫೈಡ್ ಪೇಮೆಂಟ್ ಇಂಟರ್ಫೆಸ್ (Unified Payment Interface) ಮೂಲಕ ಯಾರಿಗೆ ಆಗಲಿ ಪೇಮೆಂಟ್ ಮಾಡುವುದು ದುಬಾರಿಯಾಗಲಿದೆ. ಇದಕ್ಕಾಗಿ ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಲಿದೆ. 

ಇದನ್ನು ಓದಿ- ತನ್ನ ಭಾರತೀಯ ಬಳಕೆದಾರರಿಗೆ UPI PAYMENT ವೈಶಿಷ್ಟ್ಯ ಒದಗಿಸಿದ YouTube

NPCI ನಿರ್ಧಾರ
ರಾಷ್ಟ್ರೀಯ ಹಣ ಪಾವತಿ ನಿಗಮ (NPCI) ಯುಪಿಐ ಮೂಲಕ ಮಾಡಲಾಗುವ  ಪಾವತಿ ಸೇವೆಗೆ ಜನವರಿ 1 ರಿಂದ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಿದೆ. NPCI ನೂತನ ವರ್ಷದಲ್ಲಿ ದೇಶಾದ್ಯಂತ ಇರುವ ಥರ್ಡ್ ಪಾರ್ಟಿ ಆಪ್ ಗಳಿಗೆ ಶೇ.30 ರಷ್ಟು ಮಿತಿ ವಿಧಿಸಿದೆ. ಭವಿಷ್ಯದಲ್ಲಿ ಯಾವುದೇ ಒಂದು ಥರ್ಡ್ ಪಾರ್ಟಿ ಆಪ್ ನ ಏಕಸ್ವಾಮ್ಯವನ್ನು ತಡೆಗಟ್ಟಲು ಮತ್ತು ಗಾತ್ರಕ್ಕೆ ಅನುಗುಣವಾಗಿ ವಿಶೇಷ ಪ್ರಾಯೋಜನೆ ಘೋಷಿಸುವುದನ್ನು ತಪ್ಪಿಸಲು ಎನ್‌ಪಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನು ಓದಿ- RBI ನ ಈ ಸೇವೆಯಿಂದ ಇನ್ಮುಂದೆ ಬಿಲ್ ಪಾವತಿ ಇನ್ನಷ್ಟು ಸುಲಭವಾಗಲಿದೆ

ಈ ಪೇಮೆಂಟ್ ಅಪ್ಪ್ಸ್ ಗಳ ಮೂಲಕ ಹಣಪಾವತಿಯ ಮೇಲೆ ಪ್ರಭಾವ ಉಂಟಾಗಲಿದೆ
ಫೋನ್‌ಪೆ (Phonepe), ಗೂಗಲ್ ಪೇ (Google Pay), ಅಮೆಜಾನ್ ಪೇ (Amazon Pay) ಗಳಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿಂದ ಹಣ ಪಾವತಿಸಲು ಜನರು  ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಲಿದೆ. ಇದೇ ವೇಳೆ  ಎನ್‌ಪಿಸಿಐ Paytm ನಂತಹ ಅಪ್ಲಿಕೇಶನ್‌ ಗಳಿಗೆ ಹೆಚ್ಚುವರಿ ಕ್ಯಾಪ್ ಅನ್ನು ವಿಧಿಸಲಾಗಿಲ್ಲ.

ಇದನ್ನು ಓದಿ- Google Payನಿಂದ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆಯೇ? ಇದು ಎಷ್ಟು ಸತ್ಯ..!

ಏಕಸ್ವಾಮ್ಯತೆಗೆ ಅವಕಾಶವಿರುವುದಿಲ್ಲ
ದೇಶದಲ್ಲಿ ಪ್ರತಿ ತಿಂಗಳು ಸುಮಾರು 200 ಕೋಟಿ ಯುಪಿಐ ವಹಿವಾಟು ನಡೆಯುತ್ತಿದೆ. ಈ ಯುಪಿಐ ವಹಿವಾಟುಗಳನ್ನು ವಿವಿಧ ಹಣ ಪಾವತಿ ಆಪ್ ಗಳ  ಮೂಲಕ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಯುಪಿಐ ವಹಿವಾಟಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಸರ್ಕಾರ ಹೇಳಿದೆ. ಡಿಜಿಟಲ್ ಇಂಡಿಯಾ ದೃಷ್ಟಿಯಿಂದ  ಇದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಇಂತಹ  ಸಂದರ್ಭದಲ್ಲಿ ಯಾವುದೇ ಥರ್ಡ್ ಪಾರ್ಟಿ ಆಪ್  ಏಕಸ್ವಾಮ್ಯ ಸಾಧಿಸುವ ಅವಕಾಶವೂ ಇದ್ದು, ಇದು ಈ ನಿಟ್ಟಿನಲ್ಲಿ ಸರಿಯಾಗಿಲ್ಲ ಎನ್ನಲಾಗಿದೆ.

ಇದನ್ನು ಓದಿ- Google Pay ಇನ್ಮುಂದೆ Tap To Pay ವೈಶಿಷ್ಟ್ಯವನ್ನು ಸಪೋರ್ಟ್ ಮಾಡಲಿದೆ... ಏನಿದು?

Trending News