ನವದೆಹಲಿ: ಅಕ್ಟೋಬರ್ 29 ರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಬಹುದಾಗಿದೆ. ಆ ಮೂಲಕ ಕೇಜ್ರಿವಾಲ್ ಸರ್ಕಾರ ಈಗ ಮಹಿಳೆಯರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದಂತಾಗಿದೆ.
ಬಸ್ ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಾಗಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ' ಮಹಿಳೆಯರ ಸುರಕ್ಷತೆಗಾಗಿ ನಾಳೆಯಿಂದ ದೆಹಲಿಯ ಎಲ್ಲಾ ಬಸ್ಗಳಲ್ಲಿ ಬಸ್ ಮಾರ್ಷಲ್ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್ಗಳನ್ನು ನೇಮಕ ಮಾಡಲಾಗಿದೆ' ಎಂದು ತಿಳಿಸಿದರು.
Delhi Chief Minister Arvind Kejriwal: Bus marshals will be deployed in all buses in Delhi from tomorrow for safety of public, specially women. About 13,000 bus marshals have been recruited for this. pic.twitter.com/p8JZjWErC0
— ANI (@ANI) October 28, 2019
ಆಗಸ್ಟ್ 29 ರಂದು ದೆಹಲಿಯ ರಾಜ್ಯ ವಿಧಾನಸಭಾ ಚುನಾವಣೆಗೆ ಹಲವು ತಿಂಗಳುಗಳ ಮೊದಲು ವಿಧಾನಸಭೆ ಅಧಿವೇಶನದಲ್ಲಿ ದೆಹಲಿ ಸಚಿವ ಸಂಪುಟ ರಾಜಧಾನಿಯಲ್ಲಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಅನುಮೋದನೆ ನೀಡಿತ್ತು. ಇದಕ್ಕೆ ಪೂರಕವಾಗಿ ಸರ್ಕಾರ ಸಾರಿಗೆ ಇಲಾಖೆಗೆ 9 479 ಕೋಟಿ ಪೂರಕ ಅನುದಾನ ಅನುಮೋದಿಸಿತ್ತು. ಇದರಲ್ಲಿ ದೆಹಲಿ ಮೆಟ್ರೊದಲ್ಲಿ ಮತ್ತು ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಕ್ರಮವಾಗಿ 140 ಕೋಟಿ ರೂ. ಮತ್ತು 150 ಕೋಟಿ ರೂ. ಸಹಾಯಧನಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.