ಸ್ನೇಹಿತೆಯ ಆತ್ಮಹತ್ಯೆಗೆ ಕಾರಣರಾಗಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಜೈಲು ಶಿಕ್ಷೆ

ಭೋಪಾಲ್‌ನ ಫಾರ್ಮಸಿ ಕಾಲೇಜೊಂದರಲ್ಲಿ ತಮ್ಮ ಸಹವರ್ತಿ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣಕರ್ತರಾದ ನಾಲ್ಕು ಮಹಿಳೆಯರಿಗೆ ಮಧ್ಯಪ್ರದೇಶದ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Last Updated : Feb 6, 2021, 08:18 PM IST
  • 'ಭರವಸೆಯ ಕನಸುಗಳೊಂದಿಗೆ, ಪ್ರತಿಭಾವಂತ ಮತ್ತು ಸಮರ್ಥ ಮಕ್ಕಳು ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಾಲೆಗಳಿಗೆ ಹೋಗುತ್ತಾರೆ.
  • ಆದರೆ ರ‍್ಯಾಗಿಂಗ್ (Ragging) ಚಿತ್ರಹಿಂಸೆ ಕಾರಣ ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ.
  • ಅಂತಹ ಸಂದರ್ಭಗಳಲ್ಲಿ, ಅವರ ಪೋಷಕರೊಂದಿಗೆ ವಿದ್ಯಾರ್ಥಿಗಳ ಕನಸುಗಳು ಚೂರುಚೂರಾಗುತ್ತವೆ"
ಸ್ನೇಹಿತೆಯ ಆತ್ಮಹತ್ಯೆಗೆ ಕಾರಣರಾಗಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಜೈಲು ಶಿಕ್ಷೆ  title=

ನವದೆಹಲಿ: ಭೋಪಾಲ್‌ನ ಫಾರ್ಮಸಿ ಕಾಲೇಜೊಂದರಲ್ಲಿ ತಮ್ಮ ಸಹವರ್ತಿ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣಕರ್ತರಾದ ನಾಲ್ಕು ಮಹಿಳೆಯರಿಗೆ ಮಧ್ಯಪ್ರದೇಶದ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಸ್ ಕಂಡಕ್ಟರ್ ನಿಂದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ

18 ವರ್ಷದ ಯುವತಿಯನ್ನು ಕಾಲೇಜಿನಲ್ಲಿ ತನ್ನ ಹಿರಿಯರಾಗಿದ್ದ ಆರೋಪಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ, ನಂತರ ಅವರು ಆಗಸ್ಟ್ 6, 2013 ರಂದು ಭೋಪಾಲ್‌ (Bhopal) ನ ಪಿಎನ್‌ಟಿ ಕ್ರಾಸಿಂಗ್ ಬಳಿಯಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಆಕೆಯ ಆತ್ಮಹತ್ಯೆ ಟಿಪ್ಪಣಿಯಲ್ಲಿರುವ ನಾಲ್ಕು ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮಿತ್ ರಂಜನ್ ಸಮಾಧಿಯಾ ಅವರ ನ್ಯಾಯಾಲಯವು ದೇವಂಶಿ ಶರ್ಮಾ, ಕೀರ್ತಿ ಗೌರ್, ದೀಪ್ತಿ ಸೋಲಂಕಿ ಮತ್ತು ನಿಧಿ ಮ್ಯಾಗ್ರೆ ಎಂಬ ನಾಲ್ವರು ಮಹಿಳೆಯರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹ 2,000 ದಂಡ ವಿಧಿಸಿತು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು, ಮನೆಯಲ್ಲಿ ಶವ ಕಂಡ ಅಕ್ಕ-ಪಕ್ಕದವರಿಗೆ ಶಾಕ್!

'ಭರವಸೆಯ ಕನಸುಗಳೊಂದಿಗೆ, ಪ್ರತಿಭಾವಂತ ಮತ್ತು ಸಮರ್ಥ ಮಕ್ಕಳು ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಾಲೆಗಳಿಗೆ ಹೋಗುತ್ತಾರೆ. ಆದರೆ ರ‍್ಯಾಗಿಂಗ್ (Ragging) ಚಿತ್ರಹಿಂಸೆ ಕಾರಣ ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರ ಪೋಷಕರೊಂದಿಗೆ ವಿದ್ಯಾರ್ಥಿಗಳ ಕನಸುಗಳು ಚೂರುಚೂರಾಗುತ್ತವೆ" ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಈ ಪ್ರಕರಣದ ಮತ್ತೊಬ್ಬ ಆರೋಪಿ ಫಾರ್ಮಸಿ ಕಾಲೇಜಿನ ಅಧ್ಯಾಪಕ ಸದಸ್ಯ ಮನೀಶ್ ಗುಪ್ತಾ ಅವರ ವಿರುದ್ಧ ಅಸಮಂಜಸ ಸಾಕ್ಷ್ಯಗಳ ಕಾರಣ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News