ನವದೆಹಲಿ: ಆಂಧ್ರಪ್ರದೇಶ(Andhra Pradesh)ದ ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಮಾಜಿ ರಾಜ್ಯಪಾಲ ಕೆ.ರೋಸಯ್ಯ(Konijeti Rosaiah) ಇಂದು(ನವೆಂಬರ್ 4) ಬೆಳಗ್ಗೆ ಹೈದರಾಬಾದ್‌ನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ರೋಸಯ್ಯನವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವರದಿಗಳ ಪ್ರಕಾರ ಕುಟುಂಬದ ಸದಸ್ಯರು ಹಿರಿಯ ನಾಯಕನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ್ದರು. ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆತಂದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರೋಸಯ್ಯ ಅವರು ತಮ್ಮ 5 ದಶಕಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರೋಸಯ್ಯ ಅವರು ಶಾಸಕ, ಎಂಎಲ್‌ಸಿ, ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಕೋಟ್ಲಾ ವಿಜಯಭಾಸ್ಕರ ರೆಡ್ಡಿ, ಚನ್ನಾ ರೆಡ್ಡಿ ಮತ್ತು ವೈ.ಎಸ್.ರಾಜಶೇಖರ ರೆಡ್ಡಿ ನೇತೃತ್ವದ ಸರ್ಕಾರದ ಸಂಪುಟಗಳಲ್ಲಿ ಹಣಕಾಸು, ಸಾರಿಗೆ, ಇಂಧನ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು.
Saddened by the passing away of Shri K. Rosaiah Garu. I recall my interactions with him when we both served as Chief Ministers and later when he was Tamil Nadu Governor. His contributions to public service will be remembered. Condolences to his family and supporters. Om Shanti. pic.twitter.com/zTWyh3C8u1
— Narendra Modi (@narendramodi) December 4, 2021
ಇದನ್ನೂ ಓದಿ: ಸಫಾಯಿ ಕರ್ಮಚಾರಿಗಳಿಗೊಸ್ಕರ ವಿವಿಧ ಯೋಜನೆಗಳಿಗಾಗಿ ಅರ್ಜಿ ಅಹ್ವಾನ
2009ರಲ್ಲಿ ಅಂದಿನ ಆಂಧ್ರಪ್ರದೇಶದ ಸಿಎಂ ಆಗಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ(YS Rajasekhara Reddy) ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ರೋಸಯ್ಯನವರು 2009ರ ಸೆ.3ರಿಂದ 2010ರ ನ.24ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ರೋಸಯ್ಯ 2011 ರಿಂದ 2016ರವರೆಗೆ ತಮಿಳುನಾಡಿನ 13ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ 2014ರ ಜೂನ್ 28ರಿಂದ ಆಗಸ್ಟ್ 31ರವರೆಗೆ ಕೇವಲ 2 ತಿಂಗಳುಗಳ ಕಾಲ ಕರ್ನಾಟಕದ 17ನೇ ರಾಜ್ಯಪಾಲ(Karnataka Governor)ರಾಗಿದ್ದರು.
ಗುಂಟೂರು ಜಿಲ್ಲೆಯ ವೇಮುರು ಗ್ರಾಮದಲ್ಲಿ 1933ರಲ್ಲಿ ಜನಿಸಿದ್ದ ರೋಸಯ್ಯ ಗುಂಟೂರು ನಗರದ ಹಿಂದೂ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಆಂಧ್ರದ ಚಿರಾಲ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯಾವುದೇ ವಿಷಯದ ಬಗ್ಗೆ ಅಧಿಕಾರಯುತ ವಾಗ್ಮಿಯಾಗಿದ್ದ ರೋಸಯ್ಯ ಪ್ರತಿಸ್ಪರ್ಧಿ ಪಕ್ಷಗಳಿಗೆ ದುಃಸ್ವಪ್ನವಾಗಿದ್ದರು.
ಇದನ್ನೂ ಓದಿ: Omicron ಭೀತಿ : ರಾಜ್ಯದಲ್ಲಿ 10 ದಕ್ಷಿಣ ಆಫ್ರಿಕಾದ ಪ್ರಜೆಗಳು ನಾಪತ್ತೆ
పెద్దలు రోశయ్య గారి మరణవార్త నన్నెంతగానో బాధించింది. ఆంధ్రప్రదేశ్ మాజీ ముఖ్యమంత్రిగా, ఆర్థిక మంత్రిగా, శాసనసభ్యుడిగా... సుదీర్ఘ రాజకీయ జీవితంలో పలు పదవులను అలంకరించిన రోశయ్య గారి మృతి రెండు తెలుగు రాష్ట్రాలకు తీరని లోటు. ఆయన కుటుంబానికి నా ప్రగాఢ సానుభూతిని తెలియజేస్తున్నాను.
— YS Jagan Mohan Reddy (@ysjagan) December 4, 2021
ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿ ಹಲವಾರು ದಶಕಗಳನ್ನು ಕಳೆದರೂ ರೋಸಯ್ಯ ಅವರ ಹೆಸರು ಯಾವುದೇ ವಿವಾದಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಗಾಂಧಿ ತತ್ವಗಳ ನಿಜವಾದ ಅನುಯಾಯಿಯಾಗಿದ್ದ ರೋಸಯ್ಯ ಅವರು ಎನ್‌ಜಿ ರಂಗ ಅವರ ಕಟ್ಟಾ ಅನುಯಾಯಿಯಾಗಿ ಉನ್ನತ ಸ್ಥಾನಕ್ಕೆ ಏರಿದರು. ರೋಸಯ್ಯ ನಿಧನಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(YS Jagan Mohan Reddy), ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ಅನೇಕ ಸಂತಾಪ ಸೂಚಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.