ಉತ್ತರ ಪ್ರದೇಶ: ಇತ್ತೀಚೀನ ದಿನಗಳಲ್ಲಿ ನಿಷ್ಠಾವಂತ ಅಧಿಕಾರಿಗಳು ಕಾಣ ಸಿಗುವುದೇ ಅಪರೂಪ. ಆದರೆ ಇಲ್ಲೊಂದು ಪೊಲೀಸ್ ಅಧಿಕಾರಿ ತಂಡ ತಮ್ಮ ಕರ್ತವ್ಯದ ಜೊತೆಗೆ ನಿಷ್ಠೆಯನ್ನು ತೋರಿದ್ದಾರೆ. ಸ್ವಾತಂತ್ರ್ಯ ಬಂದು 75 ರ ಸಂಭ್ರಮದಲ್ಲಿದ್ದರೂ ಇಂದಿಗೂ ಅದೆಷ್ಟೋ ಹಳ್ಳಿಗಳು, ವಸತಿ ವ್ಯವಸ್ಥೆ, ಮೂಲ ಭೂತ ಸೌಕರ್ಯ, ಶಿಕ್ಷಣದಿಂದ ದೂರ ಉಳಿದಿವೆ.
ಕಾರಣ ಅಲ್ಲಿನ ರಾಜಕೀಯ ವ್ಯವಸ್ಥೆ ಎಂದೇ ಹೇಳಬಹುದಾಗಿದೆ. ಅದೇ ರೀತಿ ಇಲ್ಲೊಂದು ಹಳ್ಳಿಯ ವಯೋವೃದ್ಧೆ ಮನೆಯಲ್ಲಿ ಇದೇ ಮೊದಲ ಬಾರಿಗೆ ಕರೆಂಟ್ ವ್ಯವಸ್ಥೆಯನ್ನು ಪೊಲೀಸ್ ಅಧಿಕಾರಿಗಳು ಕಲ್ಪಿಸಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
ಇದನ್ನೂ ಓದಿ: Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್.. ಟೀಚರ್ ಶಾಕ್..!
ವೈರಲ್ ಆಗಿರುವ ಈ ವಿಡಿಯೋದಲ್ಲಿ ವಯೋವೃದ್ಧೆ ಮನೆಗೆ ಅಧಿಕಾರಿಗಳು ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದರಿಂದ ಇವರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿ ತಮ್ಮದೇ ಶೈಲಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.
Swades moment of my life 🌸😊 Getting electricity connection to Noorjahan aunty's house literally felt lyk bringing light into her life. The smile on her face ws immensely satisfying.Thank u SHO Jitendra ji & the entire team 4 all da support 😊#uppcares @Uppolice @bulandshahrpol pic.twitter.com/3crLAeh1xv
— Anukriti Sharma, IPS 🇮🇳 (@ipsanukriti14) June 26, 2023
ಈ ವಿಡಿಯೋ ಗಮನಿಸಿದ ಹಲವರು ಅಧಿಕಾರಿಗಳ ನಡೆಗೆ ಎಲ್ಲೆಡೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ನೆಟ್ಟಿಗರು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಲವರು ಮೆಚ್ಚುಗೆ ಸೂಚಿಸಿದರೇ, ಇನ್ನು ಕೆಲವರು ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ. ಅದೇನೆ ಇರಲಿ ಕೊನೆಗೂ ಅಧಿಕಾರಿಗಳ ಸಹಾಯದಿಂದ ವಯೋವೃದ್ಧೆ ಮನೆಗೆ ವಿದ್ಯುತ್ ವ್ಯವಸ್ಥೆ ತಲುಪಿದೆ ಎಂಬುವುದೇ ಖುಷಿಯ ವಿಚಾರ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.