ನವದೆಹಲಿ: ಈಗ ತಂತ್ರಜ್ಞಾನ ಎಲ್ಲಿಯವರೆಗೂ ಬಂದಿದೆ ಅಂದ್ರೆ ಇನ್ಮುಂದೆ ಅತಿಥಿಗಳಿಗೆ ಫುಡ್ ಸರ್ವ್ ಮಾಡಬೇಕೆಂದರೆ ಯಾರ ಅವಶ್ಯಕತೆಯೂ ಇಲ್ಲ, ಕೇವಲ ರೋಬೋಟ್ ವೊಂದಿದ್ದರೆ ಎಲ್ಲವನ್ನು ಕೂಡ ಮಾಡಬಹುದು ಎನ್ನುವುದು ಈಗ ನಿಜವಾಗುತ್ತಿದೆ.
#WATCH: Robo Kitchen, a first of its kind restaurant in Hyderabad, has robots to serve food to the customers. They have been named 'Beauty Serving Robot'. The restaurant currently has 4 robots and they need to be charged for 3 hours to last a day. pic.twitter.com/ua2lVuuOfX
— ANI (@ANI) February 9, 2019
ಹೌದು, ಈ ಹಿಂದೆ ಇದು ಸಾಧ್ಯವಿಲ್ಲ ಎನ್ನುವಂತಹ ಸಂಗತಿಗಳು ಈಗ ತಂತ್ರಜ್ಞಾನದ ಮೂಲಕ ಎಲ್ಲವನ್ನು ಸಾಧ್ಯವಾಗುವಂತೆ ಮಾಡುತ್ತಿದೆ.ಇದಕ್ಕೆ ಪೂರಕವೆನ್ನುವಂತೆ ರೋಬೋ ಕಿಚನ್ ಇದೆ ಮೊದಲ ಬಾರಿಗೆ ಹೈದರಾಬಾದ್ ರೆಸ್ಟೋರೆಂಟ್ ವೊಂದರಲ್ಲಿ ಸರ್ವರ್ ಆಗಿ ಈ ರೋಬೋಟ್ ಗಳು ಕಾರ್ಯ ನಿರ್ವಹಿಸುತ್ತಿವೆ.
Manikanth, main partner, Robo Kitchen: We provide tab to customers when they walk in, they order from the menu on it. The order goes to kitchen & robots serve food. Although it's there in Chennai we wanted to bring it to Hyderabad. We have received good response from customers. pic.twitter.com/253GFfjC60
— ANI (@ANI) February 9, 2019
ಈಗ ರೋಬೋಟ್ ಗಳಿಗೆ ನೀಡಿರುವ ಹೆಸರೇನು ಗೊತ್ತೇ ಬ್ಯೂಟಿ ಸರ್ವಿಂಗ್ ರೋಬೋಟ್. ಈ ರೋಬೋಟ್ ಗೆ ಒಮ್ಮೆ ಸತತ ಮೂರು ಗಂಟೆಗಳ ಕಾಲ ಚಾರ್ಜಿಂಗ್ ಮಾಡಿದರೆ ಸಾಕು ದಿನವಿಡಿ ಬಳಸಬಹುದು ಎನ್ನಲಾಗಿದೆ.ರೋಬೋ ಕಿಚನ್ ರೆಸ್ಟೋರೆಂಟ್ ಮುಖ್ಯ ಪಾಲುದಾರರಾದ ಮಣಿಕಾಂತ್ ಹೇಳುವಂತೆ " ಗ್ರಾಹಕರಿಗೆ ಫುಡ್ ದರ ಪಟ್ಟಿಯನ್ನು ನೀಡಿದಾಗ ಆ ಮೆನು ನಿಂದ ಅವರು ಆರ್ಡರ್ ಮಾಡುತ್ತಾರೆ, ಆ ಆರ್ಡರ್ ಕಿಚನ್ ನ್ನು ತಲುಪುತ್ತದೆ. ಇದಾದ ನಂತರ ರೋಬೋಟ್ ಫುಡ್ ನ್ನು ಸರ್ವ ಮಾಡುತ್ತದೆ ಎಂದು ತಿಳಿಸಿದರು.