ಈ ಏಳು ನಿಯಮಗಳನ್ನು ಪಾಲಿಸಿದರೆ ONLINE ವಂಚನೆಯಿಂದ ಪಾರಾಗಬಹುದು

Coronavirus ಮಹಾಮಾರಿಯ ಪ್ರಭಾವದ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಬಹುತೇಕ ಜನರು ಸರಕು ಖರೀದಿಸಲು ಹಾಗೂ ಬಿಲ್ ಪಾವತಿಸಲು ಆನ್ಲೈನ್ ಟ್ರಾನ್ಸ್ಯಾಕ್ಷನ್ ಸಹಾಯ ಪಡೆಯುತ್ತಿದ್ದಾರೆ. ಅನೇಕರು ಈ ಮಹಾಮಾರಿಯ ಹಿನ್ನೆಲೆ ಸರ್ಕಾರಕ್ಕೆ ಸಹಾಯ ನೀಡಲೂ ಕೂಡ ಆನ್ಲೈನ್  ವಹಿವಾಟಿನ ಮೂಲಕ ಹಣ ಪಾವತಿಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಆನ್ಲೈನ್ ವಂಚನೆಯಿಂದ ಪಾರಾಗಲು ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಏಳು ನಿಯಮಗಳನ್ನು ಪಾಲಿಸಲು ಸೂಚಿಸಿದೆ.

Last Updated : Apr 5, 2020, 08:02 PM IST
ಈ ಏಳು ನಿಯಮಗಳನ್ನು ಪಾಲಿಸಿದರೆ ONLINE ವಂಚನೆಯಿಂದ ಪಾರಾಗಬಹುದು title=

ನವದೆಹಲಿ: Coronavirus ಮಹಾಮಾರಿಯ ಪ್ರಭಾವದ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಬಹುತೇಕ ಜನರು ಸರಕು ಖರೀದಿಸಲು ಹಾಗೂ ಬಿಲ್ ಪಾವತಿಸಲು ಆನ್ಲೈನ್ ಟ್ರಾನ್ಸ್ಯಾಕ್ಷನ್ ಸಹಾಯ ಪಡೆಯುತ್ತಿದ್ದಾರೆ. ಅನೇಕರು ಈ ಮಹಾಮಾರಿಯ ಹಿನ್ನೆಲೆ ಸರ್ಕಾರಕ್ಕೆ ಸಹಾಯ ನೀಡಲೂ ಕೂಡ ಆನ್ಲೈನ್  ವಹಿವಾಟಿನ ಮೂಲಕ ಹಣ ಪಾವತಿಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಆನ್ಲೈನ್ ವಂಚನೆಯಿಂದ ಪಾರಾಗಲು ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಏಳು ನಿಯಮಗಳನ್ನು ಪಾಲಿಸಲು ಸೂಚಿಸಿದೆ.

ಹಣ ಕೊಡುಗೆ ನೀಡುವ ಮೊದಲು ಒಮ್ಮೆ ಯೋಚಿಸಿ
ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಹೋರಾಟ ನಡೆಸಲು ಹಾಗೂ ಇತರೆ ಸಾಮಾಜಿಕ ಕಾರ್ಯಗಳನ್ನು ನಡೆಸಲು ಹಲವು ಸಂಸ್ಥೆಗಳು ಕೊಡುಗೆ ನೀಡಲು ಮನವಿ ಮಾಡುತ್ತಿವೆ. ನಕಲಿ UPIID ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡುವಲ್ಲಿ ಕೆಲ ಸಂಘಟನೆಗಳು ತೊಡಗಿವೆ. ಹೀಗಾಗಿ ಕೊಡುಗೆ ನೀಡಲು ಕ್ಲಿಕ್ಕಿಸಲು ಸೂಚಿಸಲಾಗಿರುವ ಲಿಂಕ್ ಅನ್ನು ಸರಿಯಾಗಿ ಪರಿಶೀಲಿಸಿ ಎಂದು SBI ಸೂಚಿಸಿದೆ.

ಯಾರ ಖಾತೆಗೆ ಹಣ ವರ್ಗಾಯಿಸಬೇಕು ಅವರ ಕುರಿತು ತಿಳಿಯಿರಿ
ಒಂದು ವೇಳೆ ನೀವು ಕೊಡುಗೆ ನೀಡುವ ಉದ್ದೇಶ ಹೊಂದಿದ್ದರೆ. ನಿಮ್ಮ ಬಳಿ ಬಂದಿರುವ ಲಿಂಕ್ ಅನ್ನು ಖುದ್ದಾಗಿ ಪರಿಶೀಲಿಸಿ. ನೀವು ಯಾರಿಗೆ ಹಣ ಕಳುಹಿಸುತ್ತಿರುವಿರಿ ಎಂಬುದನ್ನು ಮೊದಲು ಅರಿಯಿರಿ. ಬಳಿಕ ಅವರ ಖಾತೆ ಡಿಟೇಲ್ಸ್ ಪುನರ್ಪರಿಶೀಲಿಸಿ.

ಆನ್ಲೈನ್ ಶಾಪಿಂಗ್ ವೇಳೆ ಈ ಕುರಿತು ಗಮನ ಹರಿಸಿ
ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ಮನೆ ಬಿಟ್ಟು ಹೊರಗಡೆ ಹೋಗುತ್ತಿಲ್ಲ ಹಾಗೂ ಆನ್ಲೈನ್ ಸರಕುಗಳನ್ನು ಖರೀದಿಸಲು ಅನೇಕ ಗ್ರಾಹಕರು ಇ-ಕಾಮರ್ಸ್ ವೆಬ್ ಸೈಟ್ ಗಳ ಮೇಲೆ ತಮ್ಮ ಕಾರ್ಡ್ ಮಾಹಿತಿಗಳನ್ನು ಸೇವ್ ಮಾಡುತ್ತಾರೆ.  ಆದರೆ ಇದರಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಕುರಿತು ಸೂಚನೆಗಳನ್ನು ನೀಡಿರುವ SBI, ಇ-ಕಾಮರ್ಸ್ ವೆಬ್ ಸೈಟ್ ಗಳ ಮೇಲೆ ತಮ್ಮ ಕಾರ್ಡ್ ಮಾಹಿತಿಗಳನ್ನು ಸೇವ್ ಮಾಡದೆ ಇರಲು ಸಲಹೆ ನೀಡಿದೆ.

ನಿಮ್ಮ ಗೌಪ್ಯ ಮಾಹಿತಿಯನ್ನು ಯಾರಿಗೂ ನೀಡಬೇಡಿ
ಯಾವುದೇ ಅಪರಿಚಿದ ಇ-ಮೇಲ್ ಐಡಿಗಳ ಜೊತೆಗೆ ನಿಮ್ಮ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳದಿರಲು ಬ್ಯಾಂಕ್ ಎಚ್ಚರಿಕೆ ನೀಡಿದೆ. ಈ ಸೂಕ್ಷ್ಮ ಮಾಹಿತಿಗಳಲ್ಲಿ OTP, ATM PIN, ಕ್ರೆಡಿಟ್ ಕಾರ್ಡ್ ಮಾಹಿತಿ ಇತ್ಯಾದಿಗಳು ಶಾಮೀಲಾಗಿವೆ. ಇವುಗಳು ಒಂದು ವೇಳೆ ಸೋರಿಕೆಯಾದರೆ ನೀವು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ.

ಯಾರೊಬ್ಬರ ಮೇಲೆ ಸಂದೇಹವಿದ್ದರೆ ತಕ್ಷಣ ವರದಿ ಮಾಡಿ
ಒಂದು ವೇಳೆ ಯಾವುದೇ ಒಂದು ಇ-ಮೇಲ್ ಐಡಿ ಮೂಲಕ ಅಥವಾ ಸ್ಪ್ಯಾಮ್ ಮೂಲಕ ನಿಮ್ಮನ್ನು ವಂಚಿಸಲಾಗುತ್ತಿದೆ ಎಂಬ ಸಂದೇಹ ಬಂದಲ್ಲಿ ಕೂಡಲೇ ಈ ಕುರಿತು ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ ಎಂದು SBI ಸೂಚಿಸಿದೆ.

ಯಾವುದೇ ಮಾಹಿತಿ ನೀಡುವ ಮೊದಲು ಎಚ್ಚರಿಕೆ ವಹಿಸಿ
ಬ್ಯಾಂಕಿಂಗ್ ಅಥವಾ ಇತರೆ ಯಾವುದೇ ವಿಷಯದ ಕುರಿತು ನಿಮ್ಮ ಮಾಹಿತಿ ನೀಡುವ ಮೊದಲು ವಿಶ್ವಾಸಾರ್ಹ ವ್ಯಕ್ತಿಗಳಿಂದ ದೊರೆತ ಮಾಹಿತ ಮಾತ್ರ ಹಂಚಿಕೊಳ್ಳಿ ಮತ್ತು ಅಧಿಕೃತ ಬ್ಯಾಂಕ್ ಅಧಿಕಾರಿ ಅಥವಾ ನಂಬಲಾರ್ಹವಾದ ಮೂಲಗಳಿಂದ ಬಂದ ಮಾಹಿತಿಯ ಮೇಲೆಯೇ ಭರವಸೆ ವ್ಯಕ್ತಪಡಿಸಿ.

Trending News