ಬಿಹಾರದಲ್ಲಿ ಪ್ರವಾಹ: 9 ಜಿಲ್ಲೆಗಳಲ್ಲಿ ಕನಿಷ್ಠ 13 ಮಂದಿ ಮೃತ

ಅರೇರಿಯಾ, ಕಿಶನ್‌ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬಾನಿ, ದರ್ಭಂಗಾ ಮತ್ತು ಮುಜಾಫರ್ಪುರಗಳು ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ.

Last Updated : Jul 15, 2019, 10:47 AM IST
ಬಿಹಾರದಲ್ಲಿ ಪ್ರವಾಹ: 9 ಜಿಲ್ಲೆಗಳಲ್ಲಿ ಕನಿಷ್ಠ 13 ಮಂದಿ ಮೃತ title=
Pic Courtesy: ANI

ಬಿಹಾರದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ಕನಿಷ್ಠ ಒಂಬತ್ತು ಜಿಲ್ಲೆಗಳು ಹಾನಿಗೊಳಗಾಗಿವೆ. 9 ಜಿಲ್ಲೆಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವರು ಕಾನಿಯಾಗಿದ್ದಾರೆ ಎಂದು ವರದಿಯಾಗಿದೆ. 

ಅರೇರಿಯಾ, ಕಿಶನ್‌ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬಾನಿ, ದರ್ಭಂಗಾ ಮತ್ತು ಮುಜಾಫರ್ಪುರಗಳಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿದ್ದು ಸುಮಾರು 18 ಲಕ್ಷ ಜನರು ಬಾಧಿತರಾಗಿದ್ದಾರೆ.

ಪ್ರವಾಹದಿಂದಾಗಿ ಇಲ್ಲಿಯವರೆಗೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಒಂಬತ್ತು ಮಂದಿ ಅರೇರಿಯಾ ಜಿಲ್ಲೆಗೆ ಸೇರಿದವರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬೈದ್ಯನಾಥ ಯಾದವ್ ದೃಢಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ. 

ಸೀತಾಮರ್ಹಿ ಜಿಲ್ಲಾಡಳಿತದ ಪ್ರಕಾರ, ಜಿಲ್ಲೆಯ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ನಾಪತ್ತೆಯಾಗಿದ್ದಾರೆ.

ಆದಾಗ್ಯೂ, ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತವು ಸಾಕಷ್ಟು ಕ್ರಮ ಕೈಗೊಂಡಿಲ್ಲ ಮತ್ತು ಸಹಾಯವಾಣಿಗಾಗಿ ಸ್ಥಾಪಿಸಲಾದ ದೂರವಾಣಿ ಮಾರ್ಗವೂ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಅರೇರಿಯಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯಲ್ಲಿ, ಅಧಿಕಾರಿಗಳು ವಿಪತ್ತು ನಿರ್ವಹಣೆಯನ್ನು ಹೊರತುಪಡಿಸಿ ಬೇರೆ ಕೆಲಸಗಳನ್ನು ಮಾಡುತ್ತಿರುವುದನ್ನು ಕಾಣಬಹುದು.

ಕಂಟ್ರೋಲ್ ರೂಂನ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ಸಂಖ್ಯೆಯನ್ನು ಕೆಲವು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದರು. ಅದಾಗ್ಯೂ, ಸಾಮಾನ್ಯ ಜನರು ಅವರನ್ನು ನೇರವಾಗಿ ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲ ಎನ್ನಲಾಗಿದೆ.

Trending News