ಪಡಿತರ ಚೀಟಿ ಹೊಂದಿದವರಿಗೊಂದು ಗುಡ್ ನ್ಯೂಸ್, ಅಡುಗೆ ಎಣ್ಣೆ-ಸಕ್ಕರೆ ಸೇರಿದಂತೆ 450 ರೂ.ಗಳಿಗೆ ಗ್ಯಾಸ್ ಸಿಲಿಂಡರ್!

Five State Assembly Elections 2023: ಪಡಿತರ ಚೀಟಿದಾರರಿಗೆ ಒಂದು ಗುಡ್ ನ್ಯೂಸ್ ಪ್ರಕಟಗೊಂಡಿದೆ. ಪಡಿತರ ಚೀಟಿ ಧಾರಕರಿಗೆ ಈಗಾಗಲೇ ಗೋಧಿ, ಅಕ್ಕಿ, ಬೇಳೆಕಾಳುಗಳನ್ನು ನೀಡಲಾಗುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಆದರೆ ಈಗ ಅದರೊಂದಿಗೆ ಸಾಸಿವೆ ಎಣ್ಣೆ, ಸಕ್ಕರೆಯನ್ನೂ ನೀಡಲಾಗುವುದು ಎಂದಿದ್ದಾರೆ. ಬಿಜೆಪಿಯಿಂದ ಈ ಅನುಕೂಲ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. (Political News In Kannada)  

Written by - Nitin Tabib | Last Updated : Nov 11, 2023, 07:13 PM IST
  • ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.
  • ಈಗಾಗಲೇ ಗೋಧಿ, ಅಕ್ಕಿ, ಬೇಳೆಕಾಳು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ಇದೀಗ ಅದರೊಂದಿಗೆ ಸಾಸಿವೆ ಎಣ್ಣೆ, ಸಕ್ಕರೆಯನ್ನೂ ನೀಡಲಾಗುವುದು ಎಂದಿದ್ದಾರೆ.
  • ಈ ಸವಲತ್ತು ಅರ್ಹ ಫಲಾನುಭವಿಗಳಿಗೆ ನೀಡಲು ಬಿಜೆಪಿ ವತಿಯಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ವೇಳೆ 450 ರೂ.ಗೆ ಗೃಹೋಪಯೋಗಿ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪಡಿತರ ಚೀಟಿ ಹೊಂದಿದವರಿಗೊಂದು ಗುಡ್ ನ್ಯೂಸ್, ಅಡುಗೆ ಎಣ್ಣೆ-ಸಕ್ಕರೆ ಸೇರಿದಂತೆ 450 ರೂ.ಗಳಿಗೆ ಗ್ಯಾಸ್ ಸಿಲಿಂಡರ್! title=

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ನಡುವೆಯೇ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಧ್ಯಪ್ರದೇಶದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯನ್ನು ಬಿಜೆಪಿಯ ‘ಸಂಕಲ್ಪ ಪತ್ರ’ ಎಂದು ಬಣ್ಣಿಸಿದ್ದಾರೆ.  ಅವರು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಇತ್ತೀಚೆಗೆ, ಪ್ರಧಾನಿ ಮೋದಿ ಅವರು ದೇಶದ 15 ಕೋಟಿ ಕುಟುಂಬಗಳ 80 ಕೋಟಿ ಫಲಾನುಭವಿಗಳಿಗೆ ಐದು ವರ್ಷಗಳವರೆಗೆ ಉಚಿತ ಆಹಾರ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಇದೀಗ ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷರು ಪಡಿತರ ಚೀಟಿದಾರರಿಗೆ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.(Political News In Kannada)

ಅಲ್ಲದೆ 450 ರೂ.ಗೆ ಗೃಹೋಪಯೋಗಿ ಸಿಲಿಂಡರ್ ನೀಡುವ ಭರವಸೆ
ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಈಗಾಗಲೇ ಗೋಧಿ, ಅಕ್ಕಿ, ಬೇಳೆಕಾಳು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ಇದೀಗ ಅದರೊಂದಿಗೆ ಸಾಸಿವೆ ಎಣ್ಣೆ, ಸಕ್ಕರೆಯನ್ನೂ ನೀಡಲಾಗುವುದು ಎಂದಿದ್ದಾರೆ. ಈ ಸವಲತ್ತು ಅರ್ಹ ಫಲಾನುಭವಿಗಳಿಗೆ ನೀಡಲು ಬಿಜೆಪಿ ವತಿಯಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ವೇಳೆ 450 ರೂ.ಗೆ ಗೃಹೋಪಯೋಗಿ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ-ಮಹಿಳೆಯರಿಗೊಂದು ಗುಡ್ ನ್ಯೂಸ್, ಇನ್ಮುಂದೆ ವಾಸಕ್ಕೆ ಶಾಶ್ವತ ಮನೆಯ ಜೊತೆಗೆ ಸರ್ಕಾರ ಧನಸಹಾಯ ಕೂಡ ನೀಡಲಿದೆ!

ಪ್ರಣಾಳಿಕೆ ಪ್ರಕಾರ ಲಾಡ್ಲಿ ಬಹನ್ ಯೋಜನೆಯ ಲಾಭದ ಜೊತೆಗೆ ಒಂದು ಲಕ್ಷ ಮಹಿಳೆಯರಿಗೆ ಶಾಶ್ವತ ಮನೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಲಾಡ್ಲಿ ಲಕ್ಷ್ಮಿ ಮತ್ತು ಬಹನ್ ಯೋಜನೆ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲಾಗುತ್ತಿದೆ. ಆದಿವಾಸಿಗಳ ಕಲ್ಯಾಣಕ್ಕೆ 3 ಸಾವಿರ ಕೋಟಿ ರೂ. ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಇದುವರೆಗೂ ಹೇಳಿದ್ದನ್ನು ಈಡೇರಿಸಿದೆ. ವೈದ್ಯಕೀಯ ಶಿಕ್ಷಣವನ್ನು ಒದಗಿಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ-ದೇಶಾದ್ಯಂತ 12ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಮುಂದಾದ ಕೇಂದ್ರ ಸರ್ಕಾರ!

ಕಳೆದ ವಾರ ಛತ್ತೀಸ್‌ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ದೇಶದ 80 ಕೋಟಿ ಜನರಿಗೆ ದೊಡ್ಡ ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸುತ್ತಿದೆ ಎಂದು ಅವರು ಹೇಳಿದ್ದರು. ಡಿಸೆಂಬರ್ 31, 2023 ರವರೆಗೆ ಯೋಜನೆಯನ್ನು ಮುಂದುವರಿಸಲು ಡಿಸೆಂಬರ್ 2022 ರಲ್ಲಿ ಕ್ಯಾಬಿನೆಟ್ ನಿರ್ಧರಿಸಿತ್ತು. ಇದೀಗ ಈ ಯೋಜನೆಯನ್ನು 31 ಡಿಸೆಂಬರ್ 2028 ರವರೆಗೆ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News