Pulse Oximeter, Nebuliser ನಂತಹ 5 ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ

ಕೋವಿಡ್-19 (COVID 19) ಸಾಂಕ್ರಾಮಿಕ ಸಮಯದಲ್ಲಿ ಪಲ್ಸ್ ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್‌ನಂತಹ ವೈದ್ಯಕೀಯ ಉಪಕರಣಗಳ ಅಗತ್ಯವು ಗಮನಾರ್ಹವಾಗಿ ಹೆಚ್ಚಾಗಿದೆ. ಈ ಮಧ್ಯೆ ಬ್ಲಾಕ್ ಮಾರ್ಕೆಟ್ ನಲ್ಲಿ ಈ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆಯೂ ದೂರುಗಳು ದಾಖಲಾಗಿವೆ.  

Written by - Yashaswini V | Last Updated : Jul 14, 2021, 08:15 AM IST
  • ಅಗತ್ಯ ವೈದ್ಯಕೀಯ ಉಪಕರಣಗಳು ಅಗ್ಗವಾಗಲಿವೆ
  • ಈಗ ಈ ಐದು ವೈದ್ಯಕೀಯ ಸಾಧನಗಳನ್ನು ವಿತರಕರ ಬೆಲೆಯ 70% ಕ್ಕಿಂತ ಹೆಚ್ಚಿನ ಲಾಭದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ
  • ಐದು ವೈದ್ಯಕೀಯ ಸಾಧನಗಳ ಮಾರಾಟಗಾರರಿಗೆ ಜುಲೈ 20 ರೊಳಗೆ ಹೊಸ ನಿಯಮದ ಪ್ರಕಾರ ಎಂಆರ್‌ಪಿಯಲ್ಲಿ ಬದಲಾವಣೆಗಳನ್ನು ಮಾಡಲು ಆದೇಶಿಸಲಾಗಿದೆ
Pulse Oximeter, Nebuliser ನಂತಹ 5 ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ title=
ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳು ಅಗ್ಗ

ನವದೆಹಲಿ: ದೇಶದಲ್ಲಿ ಕರೋನಾ ಎರಡನೇ ತರಂಗದ (Corona Second Wave) ಸಮಯದಲ್ಲಿ, ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್ ನಂತಹ ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಬಾರೀ ಏರಿಕೆ ಕಂಡು ಬಂದಿತ್ತು.  ಈ ಸಾಧನಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಸುದ್ದಿಯೂ ಅನೇಕ ಸ್ಥಳಗಳಲ್ಲಿ ಮುನ್ನೆಲೆಗೆ ಬಂದಿತು. ಆದರೆ ಈಗ, ಸರ್ಕಾರವು ಈ ಕುರಿತಂತೆ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು ಇದಕ್ಕೆ ಕಡಿವಾಣ ಹಾಕಿದೆ. ಈ ಕಾರಣದಿಂದಾಗಿ ಆಕ್ಸಿಮೀಟರ್‌ಗಳಂತಹ 5 ಅಗತ್ಯ ವೈದ್ಯಕೀಯ ಉಪಕರಣಗಳು ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ.

ಅಗತ್ಯ ಸಾಧನಗಳು ಅಗ್ಗವಾಗುತ್ತವೆ:
ಭಾರತ ಸರ್ಕಾರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಪಲ್ಸ್ ಆಕ್ಸಿಮೀಟರ್‌ಗಳು (Pulse Oximeter), ಬಿಪಿ ಟೆಸ್ಟಿಂಗ್ ಮೆಷಿನ್, ಡಿಜಿಟಲ್ ಥರ್ಮಾಮೀಟರ್‌ಗಳು, ಗ್ಲುಕೋಮೀಟರ್‌ಗಳು ಮತ್ತು ನೆಬ್ಯುಲೈಜರ್‌ಗಳ ಬೆಲೆಯನ್ನು ನಿಗದಿಪಡಿಸಿದೆ ಮತ್ತು ಈಗ ಈ ವಸ್ತುಗಳನ್ನು ಶೇಕಡಾ 70 ಕ್ಕಿಂತ ಹೆಚ್ಚಿನ ಲಾಭದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಈಗ ಈ ಐದು ವೈದ್ಯಕೀಯ ಸಾಧನಗಳನ್ನು ವಿತರಕರ ಬೆಲೆಯ 70% ಕ್ಕಿಂತ ಹೆಚ್ಚಿನ ಲಾಭದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಎನ್‌ಪಿಪಿಎ ನಿರ್ಧಾರದ ನಂತರ, ಈ ಐದು ವೈದ್ಯಕೀಯ ಸಾಧನಗಳ ಮಾರಾಟಗಾರರಿಗೆ ಜುಲೈ 20 ರೊಳಗೆ ಹೊಸ ನಿಯಮದ ಪ್ರಕಾರ ಎಂಆರ್‌ಪಿಯಲ್ಲಿ ಬದಲಾವಣೆಗಳನ್ನು ಮಾಡಲು ಆದೇಶಿಸಲಾಗಿದೆ.

ಇದನ್ನೂ ಓದಿ- Covid-19: Oximeter ಬಗ್ಗೆ ಈ ಪ್ರಮುಖ ವಿಷಯಗಳನ್ನು ತಪ್ಪದೇ ತಿಳಿಯಿರಿ

ಈ ಸರಕುಗಳ ವ್ಯಾಪಾರ ಅಂಚಿನಲ್ಲಿ ಕ್ಯಾಪ್ ಹೇರಲು ಎನ್‌ಪಿಪಿಎ ಮಂಗಳವಾರ ಡಿಪಿಸಿಒ (ಡ್ರಗ್ ಪ್ರೈಸ್ ಕಂಟ್ರೋಲ್ ಆರ್ಡರ್) 2013 ರ ಪ್ಯಾರಾ 19 ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸಿದೆ. ಆಕ್ಸಿಮೀಟರ್, ಗ್ಲುಕೋಮೀಟರ್, ಬಿಪಿ ಟೆಸ್ಟಿಂಗ್ ಮೆಷಿನ್, ನೆಬ್ಯುಲೈಜರ್ ಮತ್ತು ಡಿಜಿಟಲ್ ಥರ್ಮಾಮೀಟರ್ (Digital Thermometer) ವಿಷಯದಲ್ಲಿ ವಹಿವಾಟಿನ ಪ್ರಮಾಣವನ್ನು ತರ್ಕಬದ್ಧಗೊಳಿಸಲು ಎನ್‌ಪಿಪಿಎ ಈ ಕ್ರಮ ಕೈಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ, ಈ ಉಪಕರಣಗಳ ಮೇಲೆ ಶೇಕಡಾ 3 ರಿಂದ 709 ರವರೆಗಿನ ಮಾರ್ಜಿನ್ ವಿಧಿಸಲಾಗುತ್ತಿತ್ತು, ಆದರೆ ಹೊಸ ಬೆಲೆಗಳು ಜುಲೈ 20 ರೊಳಗೆ ಅನ್ವಯವಾಗುತ್ತವೆ. ಕೋವಿಡ್-19 (COVID 19) ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಉಪಕರಣಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಪಿಪಿಎ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ- ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

ಇದು ಹೊಸ ಸೂತ್ರ:
MRP= Price to Distributer + 70% of Price to Distributer + GST, ಉದಾಹರಣೆಗೆ, ಆಕ್ಸಿಮೀಟರ್ ವಿತರಕರು 500 ರೂ. ಪಾವತಿಸಬೇಕಾದರೆ, ಹೊಸ ನಿಯಮದ ಪ್ರಕಾರ, ಅದರ ಗರಿಷ್ಠ ಬೆಲೆ (ಎಂಆರ್‌ಪಿ) 875 ರೂ. ಈ ಐದು ವೈದ್ಯಕೀಯ ಸಾಧನಗಳ ಬೆಲೆಗಳಿಗೆ ಕ್ಯಾಪ್ ವಿಧಿಸುವ ಎನ್‌ಪಿಪಿಎ ನಿರ್ಧಾರವು ಜನವರಿ 31, 2022 ರವರೆಗೆ ಅನ್ವಯಿಸುತ್ತದೆ.

ಇದಲ್ಲದೆ, ಜುಲೈ 20 ರೊಳಗೆ ಎಂಆರ್‌ಪಿಯನ್ನು ಬದಲಾಯಿಸದ ಮಾರಾಟಗಾರರು 15 ಪ್ರತಿಶತದಷ್ಟು ಬಡ್ಡಿಯೊಂದಿಗೆ 100 ಪ್ರತಿಶತದಷ್ಟು ಓವರ್ ಚಾರ್ಜ್ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News