ಭೀಕರ ರಸ್ತೆ ಅಪಘಾತ: ಐವರು ಸಾವು, 3 ಮಂದಿಗೆ ಗಾಯ

ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

Last Updated : Jun 7, 2019, 11:30 AM IST
ಭೀಕರ ರಸ್ತೆ ಅಪಘಾತ: ಐವರು ಸಾವು, 3 ಮಂದಿಗೆ ಗಾಯ title=

ಚಿತ್ತೂರ್: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದುರವರಾಜುಪಲ್ಲೆ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. 

ಶುಕ್ರವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಗುಂಟೂರು ಜಿಲ್ಲೆಯಿಂದ ರ್ತಿರುಪತಿಗೆ ತೆರಳುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಯಾವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ರೇಣಿಗುಂಟ ನಗರ ಪೋಲಿಸ್ ಠಾಣೆಯ ಸಿಐ ಜಿ. ಶಿವರಾಮುಡು ತಿಳಿಸಿದ್ದಾರೆ.

ಮೃತರನ್ನು ವಿಜಯ ಭಾರತಿ(38), ಪ್ರಸನ್ನ(14), ಚೆನ್ನ ಕೇಶವ ರೆಡ್ಡಿ(12), ಚಾಲಕ ಪ್ರೇಂ ರಾಜು(35), ಅಂಕಯ್ಯ(40) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗುಂಟೂರು ಜಿಲ್ಲೆಯ ಅಚ್ಚಂಪೆಟ್ ಮಂಡಲದ ರುದ್ರಾವರಂ ಗ್ರಾಮಕ್ಕೆ ಸೇರಿದವರು ಎನ್ನಲಾಗಿದೆ. 

ಘಟನೆ ಬಗ್ಗೆ ರೇಣಿಗುಂಟ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Trending News