ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ

ಸೂಪರ್ ಮಾರ್ಕೆಟ್ ಹೊಂದಿರುವ ಕಟ್ಟಡವೊಂದರಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಬೃಹತ್ ಪ್ರಮಾಣದ ಸರಕು ಮತ್ತು ಆಹಾರ ಪದಾರ್ಥಗಳು ನಾಶವಾಗಿವೆ. 

Last Updated : Apr 22, 2019, 02:05 PM IST
ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ title=
Pic Courtesy: ANI

ಮುಂಬೈ: ಇಲ್ಲಿನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ಟ್ಯಾಂಕರ್ ಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. 

ಸೂಪರ್ ಮಾರ್ಕೆಟ್ ಹೊಂದಿರುವ ಕಟ್ಟಡವೊಂದರಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಬೃಹತ್ ಪ್ರಮಾಣದ ಸರಕು ಮತ್ತು ಆಹಾರ ಪದಾರ್ಥಗಳು ನಾಶವಾಗಿವೆ ಎನ್ನಲಾಗಿದೆ. 

ದಕ್ಷಿಣ ಮುಂಬೈನಲ್ಲಿರುವ ಸ್ಥಳೀಯರಿಗೆ ನೆಚ್ಚಿನ ಶಾಪಿಂಗ್ ತಾಣವಾಗಿರುವ ಈ ಮಾರುಕಟ್ಟೆ ಸ್ಥಳೀಯ ಮತ್ತು ನಗರದ ಅತಿ ದೊಡ್ಡ ಹೋಲ್ ಸೇಲ್  ಮಾರುಕಟ್ಟೆಯಾಗಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Trending News