ಲೋಕಸಭಾ ಚುನಾವಣೆ 2019: ಫೆಡರಲ್ ಒಕ್ಕೂಟ 120 ಸ್ಥಾನಗಳನ್ನು ಗೆಲ್ಲಲಿದೆ-ಕೆಸಿಆರ್

ತೆಲಂಗಾಣದ  ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫೆಡರಲ್ ಒಕ್ಕೂಟವು120 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Mar 18, 2019, 07:50 PM IST

Trending Photos

ಲೋಕಸಭಾ ಚುನಾವಣೆ 2019: ಫೆಡರಲ್ ಒಕ್ಕೂಟ 120 ಸ್ಥಾನಗಳನ್ನು ಗೆಲ್ಲಲಿದೆ-ಕೆಸಿಆರ್ title=
file photo

ನವದೆಹಲಿ: ತೆಲಂಗಾಣದ  ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫೆಡರಲ್ ಒಕ್ಕೂಟವು120 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಪ್ರಿಲ್ 11 ರಂದು ಪ್ರಾರಂಭವಾಗುವ ಲೋಕಸಭಾ ಚುನಾವಣೆಗೂ ಮುನ್ನ ಕರೀಂನಗರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಸಿಆರ್, ವಿವಿಧ ಪಕ್ಷಗಳನ್ನು ಒಳಗೊಂಡ ಫೆಡರಲ್ ಒಕ್ಕೂಟ ಲೋಕಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲಿದೆ. ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಟಿಆರ್ಎಸ್ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್ " ರಾಷ್ಟ್ರೀಯ ಮಟ್ಟದಲ್ಲಿ ನಾನು ಮಹತ್ವದ ಪಾತ್ರ ವಹಿಸುವುದು ನಿಮಗೆ ಬೇಕಲ್ಲವೇ? ಹಾಗಾದರೆ ಕೈ ಎತ್ತಿ ಎಂದು ಅವರು ಜನರಿಗೆ ಸೂಚಿಸಿದರು."ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಹೊರಬರಬೇಕಾಗಿದೆ, ಅವುಗಳನ್ನು ತೊಲಗಿಸಬೇಕಾಗಿದೆ ಎಂದು  ಹೇಳಿದರು

ಕೆಸಿಆರ್ ಇತ್ತೀಚಿಗೆ ಓಡಿಸ್ಸಾದ ಸಿಎಂ ನವೀನ್ ಪಟ್ನಾಯಕ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರನ್ನು ಭೇಟಿ ಮಾಡಿ ಫೆಡರಲ್ ಒಕ್ಕೂಟದ ರಚನೆ ಪ್ರಯತ್ನಕ್ಕೆ ಚಾಲನೆ ನೀಡಿದ್ದರು.ಇದೇ ವೇಳೆ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ,ಇಬ್ಬರು ನಾಯಕರು ರಾಜಕೀಯ ಲಾಭಕ್ಕಾಗಿ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

Trending News