ಫೆಬ್ರವರಿ 1ರಿಂದ ಹೊಸ ಕೇಬಲ್ ನೀತಿ ಜಾರಿಗೆ! ಗ್ರಾಹಕರು ತಿಳಿಯಲೇಬೇಕಾದ ಮಾಹಿತಿ...

ನೀವು ಮನೆಯಲ್ಲಿ ಟಿವಿ ವೀಕ್ಷಿಸಬೇಕಾದರೆ ಕನಿಷ್ಠ 153ರೂ. (ಬೇಸಿಕ್ 130 ರೂ.) ಖರ್ಚು ಮಾಡಬೇಕಾಗುತ್ತದೆ. 

Last Updated : Jan 21, 2019, 01:12 PM IST
ಫೆಬ್ರವರಿ 1ರಿಂದ ಹೊಸ ಕೇಬಲ್ ನೀತಿ ಜಾರಿಗೆ! ಗ್ರಾಹಕರು ತಿಳಿಯಲೇಬೇಕಾದ ಮಾಹಿತಿ... title=

ನವದೆಹಲಿ: ಫೆಬ್ರವರಿ 1 ರಿಂದ ಟಿವಿ ಪ್ರಪಂಚ ಬದಲಾಗಲಿದೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ನೆಚ್ಚಿನ ಚಾನಲ್ ಗಳನ್ನೂ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಬ್ರಾಡ್ ಕಾಸ್ಟರ್ ಅಥವಾ ಕೇಬಲ್ ಆಪರೇಟರ್ ಗಳು ತಮ್ಮ ಇಚ್ಚಾನುಸಾರ ಗ್ರಾಹರಕ ಮೇಲೆ ಹೆಚ್ಚಿನ ಚಾನಲ್ ದರ ವಿಧಿಸಲು ಸಾಧ್ಯವಾಗುವುದಿಲ್ಲ.

ಟಿವಿ ಕೇಬಲ್‌ ಸಂಬಂಧ ಕೇಂದ್ರ ಸರಕಾರದ ಟ್ರಾಯ್‌ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ) ಮುಖಾಂತರ ನೂತನವಾಗಿ ಜಾರಿಗೆ ತಂದಿರುವ ನಿಯಮಗಳ ಪ್ರಕಾರ, ಫೆಬ್ರುವರಿ 1 ರಿಂದ ಗ್ರಾಹಕರು ಪ್ರತಿ ತಿಂಗಳು ಜಿಎಸ್‌ಟಿ ಸೇರಿದಂತೆ 153.40 ಕೆಲವು ಪೇ ಚಾನೆಲ್ ಸಹಿತ 100 ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ. ನೀವು ಮನೆಯಲ್ಲಿ ಟಿವಿ ವೀಕ್ಷಿಸಬೇಕಾದರೆ ಕನಿಷ್ಠ 153ರೂ. (ಬೇಸಿಕ್ 130 ರೂ.) ಖರ್ಚು ಮಾಡಬೇಕಾಗುತ್ತದೆ. ಗ್ರಾಹಕರು ರೀಚಾರ್ಜ್ ಮಾಡಿದ ನಂತರ ಅವರ ಆಯ್ಕೆಯ ಪ್ರಕಾರ 100 ಫ್ರೀ-ಟು-ಏರ್ ಚಾನೆಲ್ಗಳನ್ನು ಆಯ್ಕೆ ಮಾಡಬಹುದು.

ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿಯಾಗುತ್ತಿರುವ ಕಾರಣ ಗ್ರಾಹಕರು ಈ ನೂರು ಚಾನೆಲ್‌ಗಳನ್ನು ಜನವರಿ 31ರೊಳಗೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಟ್ರಾಯ್ ಆದೇಶ ಹೆಚ್ ಡಿ ಚಾನೆಲ್ ಗಳಿಗೆ ಅನ್ವಯವಾಗುವುದಿಲ್ಲ. ಆದಾಗ್ಯೂ, ಹೆಚ್ ಡಿ ಚಾನೆಲ್ ಗಳನ್ನು ಕೂಡಾ ಆಯ್ಕೆ ಮಾಡಬಹುದಾಗಿದೆ ಎಂದು ಕೆಲ ಮಾಧ್ಯಮ ಏಜೆನ್ಸಿಗಳು ವರದಿ ಮಾಡಿವೆ. ಒಂದು ಎಚ್ ಡಿ ಚಾನೆಲ್  ಎರಡು ಹೆಚ್ ಡಿ ಯೇತರ ಚಾನೆಲ್ ಗೆ ಸಮಾನವಾಗಿರಲಿದ್ದು, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ  ತಮ್ಮ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.

ಈವರೆಗೆ ಗ್ರಾಹಕರು 250ರಿಂದ 300 ರೂಪಾಯಿ ರಿಚಾರ್ಜ್ ಮಾಡುತ್ತಿದ್ದರು. ಆದರೆ, ಈಗ ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೆಜ್ ಗೆ 184ರು ಗಿಂತ ಹೆಚ್ಚಿನ ಮೊತ್ತವಾಗುವುದಿಲ್ಲ. ಅಲ್ಲದೆ, ಕೇಬಲ್ ಅಪರೇಟರ್ ಗಳು ಸೆಟ್ ಅಪ್ ಬಾಕ್ಸ್ ಅಳವಡಿಕೆ, ಶುಲ್ಕವನ್ನು 500 ರುಗಿಂತ ಹೆಚ್ಚಿಗೆ ಪಡೆಯುವಂತಿಲ್ಲ ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಕೇಬಲ್/ಡಿಟಿಹೆಚ್ ಸಂಪರ್ಕ 72 ಗಂಟೆ ಸ್ಥಗಿತವಾಗಿದ್ದರೆ ಪಾವತಿಸಬೇಕಿಲ್ಲ:
ಕೇಬಲ್ ಅಥವಾ ಡಿಟಿಎಚ್ ಸಂಪರ್ಕವು 72 ಗಂಟೆಗಳ ಕಾಲ ಸ್ಥಗಿತವಾಗಿದ್ದರೆ ಗ್ರಾಹಕರು ಅದಕ್ಕೆ ಯಾವುದೇ ರೀತಿ ಪಾವತಿಸಬೇಕಾಗಿಲ್ಲ ಎಂದು ಟ್ರಾಯ್ ಇತ್ತೀಚೆಗೆ ಟ್ವೀಟ್ನಲ್ಲಿ ತಿಳಿಸಿದೆ. ಸರ್ವಿಸ್ ಡೌನ್ ಇದ್ದಾಗ ಗ್ರಾಹಕರು ಕಸ್ಟಮರ್ ಕೇರ್ ಗೆ ಕಾಲ್ ಮಾಡಬಹುದು. 72 ಗಂಟೆಗಳೊಳಗೆ ಸೇವೆ ಪುನರಾರಂಭವಾಗದಿದ್ದಲ್ಲಿ ಗ್ರಾಹಕರು ಅದಕ್ಕೆ ಪಾವತಿಸಬೇಕಿಲ್ಲ ಎಂದು ಟ್ರಾಯ್ ಹೇಳಿದೆ.

TRAI ಯ ಈ ಆದೇಶವು ಗ್ರಾಹಕರಿಗೆ ಒಳ್ಳೆಯ ಸುದ್ದಿಯಾಗಿದೆ, ಏಕೆಂದರೆ ಸಂಪರ್ಕದಲ್ಲಿನ ದೋಷವು ಸಾಮಾನ್ಯ ಸಮಸ್ಯೆಯಾಗಿದೆ. ಇದು ದೂರು ನೀಡಿದಾಗ, ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತದೆ, ಸಾಧ್ಯವಾದಷ್ಟು ಬೇಗ ಅದನ್ನು ಸರಿಪಡಿಸಲಾಗುವುದು.

1 ನೇ ಫೆಬ್ರುವರಿಯಿಂದ TRAI ಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆದ್ದರಿಂದ, ನೀವು ಸೇವೆಯನ್ನು ಬಳಸುತ್ತಿರುವ ಯಾವುದೇ ಆಯೋಜಕರನ್ನು ಸಂಪರ್ಕಿಸಿ ರೂ 130 ರಲ್ಲಿ (ರೂ 153 ರೂ), ನೀವು 100 ಎಸ್ಡಿ (ಸ್ಟ್ಯಾಂಡರ್ಡ್ ಡೆಫಿನಿಶನ್) ನಿಮ್ಮ ನೆಚ್ಚಿನ ಚಾನಲ್ ಆಯ್ಕೆ ಮಾಡಬಹುದು. ಒಂದು ಚಾನಲ್ನ ಗರಿಷ್ಟ ದರವು ರೂ. 19 ಆಗಿರುತ್ತದೆ, ಆದರೆ ತೆರಿಗೆಯನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.

Trending News