ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಕಳೆದ 19 ದಿನಗಳಿಂದ ದೆಹಲಿ-ಹರಿಯಾಣ ಸಿಂಗು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಈ ಅನುಕ್ರಮದಲ್ಲಿ ಇಂದು ಅಂದರೆ ಸೋಮವಾರ ರೈತ ಮುಖಂಡರು ಸಿಂಗ್ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಈ ಸಮಯದಲ್ಲಿ ದೇಶದ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ರೈತರಿಗೆ ಬೆಂಬಲ ನೀಡಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.
ಎಎಪಿ ರೈತರೊಂದಿಗೆ ನಿಂತಿದೆ!
ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸೋಷಿಯಲ್ ಮೀಡಿಯಾ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಪಕ್ಷದ ಕಾರ್ಯಕರ್ತರೂ ಸಹ ಅವರೊಂದಿಗೆ ಉಪವಾಸ ಸತ್ಯಾಗ್ರಹ (Hunger Strike) ಮಾಡುವಂತೆ ಮನವಿ ಮಾಡಿದ್ದಾರೆ. ನಂತರ ರೈತರ ಬೇಡಿಕೆಗಳಿಗೆ ಬೆಂಬಲವಾಗಿ ಆಮ್ ಆದ್ಮಿ ಪಕ್ಷವು ರೈತರೊಂದಿಗೆ ಸಂಪೂರ್ಣವಾಗಿ ನಿಂತಿದೆ ಎಂದು ತಿಳಿಸಿದ ಎಎಪಿ ಸಚಿವ ಗೋಪಾಲ್ ರೈ ಪಕ್ಷದ ಎಲ್ಲಾ ಅಧಿಕಾರಿಗಳು, ಶಾಸಕರು ಮತ್ತು ಕೌನ್ಸಿಲರ್ಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಐಟಿಒ ಪಕ್ಷದ ಕಚೇರಿಯಲ್ಲಿ ಸಾಮೂಹಿಕ ಉಪವಾಸ ನಡೆಸಲಿದ್ದಾರೆ ಎಂದು ಹೇಳಿದರು.
ಕಾನೂನಿನಲ್ಲಿ ತಿದ್ದುಪಡಿ ಸ್ವೀಕಾರಾರ್ಹವಲ್ಲ ಎಂದು ಹೇಳುತ್ತಲೇ ಬಂದಿರುವ ರೈತರು ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾನೂನು ರದ್ದುಗೊಳ್ಳುವವರೆಗೂ ನಾವು ಚಳವಳಿಯನ್ನು ಮುಂದುವರಿಸುತ್ತೇವೆ. ಸದ್ಯ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಹಳ್ಳಿಗಳಿಂದಲೂ ರೈತರು (Farmers) ಬರುತಿದ್ದಾರೆ. ನಮ್ಮ ರೈತರ ಒಗ್ಗಟ್ಟನು ವಿಭಜಿಸಲು ಸರ್ಕಾರ ಪ್ರಯತ್ನಿಸಬಹುದು. ಗಡಿಗಳಲ್ಲಿ ಬ್ಯಾರಿಕೇಡ್ ಹಾಕಬಹುದು. ಆದರೆ ಇದಾವುದೂ ನಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಸರ್ಕಾರ ನೂತನ ಕಾನೂನನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಇಷ್ಟು ದಿನಗಳವರೆಗೆ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲಸಿ ರಾಜೀನಾಮೆ ಸಲ್ಲಿಸಿದ ಪಂಜಾಬ್ DIG!
ದೆಹಲಿಯ ಭದ್ರತೆಯನ್ನು 4 ಲೇಯರ್ ಪ್ರೊಟೆಕ್ಷನ್ ಆಗಿ ಬದಲಾಯಿಸಲಾಗಿದೆ!
ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿರುವುದನ್ನು ಗಮನದಲ್ಲಿಟ್ಟುಕೊಂಡು ದೇಶದ ರಾಜಧಾನಿ ದೆಹಲಿಯ (Delhi) ಸಿಂಗ್ ಗಡಿಯಲ್ಲಿರುವ ಪೊಲೀಸರು ಸಿಮೆಂಟ್ ಬ್ಯಾರಿಕೇಡ್ ಅನ್ನು ಸರಪಳಿಗಳಿಂದ ಲಾಕ್ ಮಾಡಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಆದ್ದರಿಂದ ಬ್ಯಾರಿಕೇಡ್ ಅನ್ನು ತೆಗೆದುಹಾಕಲು ಅಥವಾ ಮುರಿಯಲು ಸಾಧ್ಯವಿಲ್ಲ. ಪೊಲೀಸರು ಬ್ಯಾರಿಕೇಡ್ಗಳು ಮತ್ತು ನಂತರ ಸಿಮೆಂಟ್ ಬ್ಯಾರಿಕೇಡ್ಗಳನ್ನು ತುಂಬಿದ ಡಂಪರ್ ಅನ್ನು ಭದ್ರತೆಯಾಗಿ ಇರಿಸಿದ್ದಾರೆ. ಇದು ಮಾತ್ರವಲ್ಲ, ಈ ಮೂರು ಪದರಗಳ ರಕ್ಷಣೆಯ ನಂತರ, ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಮತ್ತು ಬಿಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಫಲಕಾರಿಯಾಗದ 5 ಸುತ್ತಿನ ಮಾತುಕತೆ:
ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು 40 ರೈತ ಸಂಘಗಳ ಮುಖಂಡರ ನಡುವಿನ ಮೊದಲ ಐದು ಸುತ್ತಿನ ಮಾತುಕತೆಯಿಂದ ಯಾವುದೇ ಸಕಾರಾತ್ಮಕ ಫಲಿತಾಂಶ ಹೊರಬಂದಿಲ್ಲ. ಕೃಷಿ ಕಾನೂನುಗಳ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಕರಡು ಪ್ರಸ್ತಾವನೆಯನ್ನು ಸರ್ಕಾರದ ಮುಖಂಡರು ತಿರಸ್ಕರಿಸಿದ ನಂತರ ಮತ್ತು ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ ಆರನೇ ಸುತ್ತಿನ ಮಾತುಕತೆ ನಡೆಯಲಿಲ್ಲ. ಆದರೆ ಯಾವುದೇ ಸಮಯದಲ್ಲಿ ಚರ್ಚೆಗೆ ಸಿದ್ಧ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ರೈತ ಸಂಘಗಳು ಕಾನೂನುಗಳನ್ನು ರದ್ದುಪಡಿಸಿದಾಗ ಮಾತ್ರ ಮಾತುಕತೆಗೆ ಬರುತ್ತವೆ ಎಂದು ಸ್ಪಷ್ಟವಾಗಿ ತಿಳಿಸಿವೆ.
ರೈತರ ಹೋರಾಟದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು?
ಶೀಘ್ರದಲ್ಲೇ ರೈತರೊಂದಿಗೆ ಮುಂದಿನ ಸುತ್ತಿನ ಮಾತುಕತೆ:
ಸರ್ಕಾರ ಶೀಘ್ರದಲ್ಲೇ ರೈತರೊಂದಿಗೆ ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸಲಿದ್ದು ರೈತ ಸಂಘದ ಮುಖಂಡರನ್ನು ಕರೆಯಲಿದೆ ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಭಾನುವಾರ ಹೇಳಿಕೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುವವು ಎಂದು ವಿಶ್ವಾಸ ವ್ಯಕ್ತಪಡಿಸಿದ ಕೃಷಿ ರಾಜ್ಯ ಸಚಿವ ಚೌಧರಿ ಹಿರಿಯ ಮಂತ್ರಿಗಳಾದ ಅಮಿತ್ ಶಾ ಮತ್ತು ನರೇಂದ್ರ ಸಿಂಗ್ ತೋಮರ್ ಈ ಕುರಿತು ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.