ನವದೆಹಲಿ: ಕರೋನ ವೈರಸ್ ಸಾಂಕ್ರಾಮಿಕ ಕೋವಿಡ್ 19 ಅನ್ನು ನಿಗ್ರಹಿಸಲು ಸರ್ಕಾರವು ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಬಹುಪಯೋಗಿ ಚಿನ್ನದ ಸಾಲ ಯೋಜನೆ ಈ ಕಷ್ಟದ ಸಮಯದಲ್ಲಿ ರೈತರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಜನರಿಗೆ ಹೆಚ್ಚಿನ ಲಾಭ ನೀಡುತ್ತಿದೆ. ಈ ಯೋಜನೆಯ ಮೂಲಕ, ಕೃಷಿಗೆ ಸಂಬಂಧಿಸಿದ ಜನರು ಬಹಳ ಆಕರ್ಷಕ ದರದಲ್ಲಿ ಸಾಲ ಪಡೆಯಬಹುದು.
ಈ ಯೋಜನೆ ತುಂಬಾ ಲಾಭಕಾರಿಯಾಗಿಗೆ
ಎಸ್ಬಿಐನ ಬಹುಪಯೋಗಿ ಚಿನ್ನದ ಸಾಲ ಯೋಜನೆಯ ದೊಡ್ಡ ಪ್ರಯೋಜನವೆಂದರೆ ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಗ್ರಾಹಕರಿಂದ ಯಾವುದೇ ಆಂತರಿಕ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದೇ ವೇಳೆ, ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು. ಇಂತಹ ಸಾಲದ ಮೇಲಿನ ಬಡ್ಡಿದರವೂ ಕೂಡ ತುಂಬಾ ಕಡಿಮೆಯಾಗಿರುತ್ತದೆ. ಈ ಯೋಜನೆಯಡಿ ಗ್ರಾಹಕರು ತಮ್ಮ ಸಾಲದ ಮರುಪಾವತಿಯನ್ನು ರೀಶೆಡ್ಯೂಲ್ ಕೂಡ ಮಾಡಬಹುದು . ಈ ಯೋಜನೆ ಎಸ್ಬಿಐನ ಎಲ್ಲಾ ಗ್ರಾಮೀಣ ಮತ್ತು ಅರೆ ನಗರ ಶಾಖೆಗಳಲ್ಲಿ ಲಭ್ಯವಿದೆ.
ಯಾವ ಆಧಾರದ ಮೇಲೆ ಸಿಗುತ್ತದೆ ಸಾಲ
ಬಹುಪಯೋಗಿ ಚಿನ್ನದ ಸಾಲ ಯೋಜನೆಯಡಿ ಸಾಲ ತೆಗೆದುಕೊಳ್ಳಲು, ಗ್ರಾಹಕರು ಚಿನ್ನಾಭರಣವನ್ನು ಬ್ಯಾಂಕ್ ನಲ್ಲಿ ಅಡವು ಇಡಬೇಕು. ಅದರ ಮೌಲ್ಯವನ್ನು ಆಧರಿಸಿ ನಿಮಗೆ ಎಷ್ಟು ಸಾಲವನ್ನು ಸಿಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಚಿನ್ನದ ಬೆಲೆಯಲ್ಲಿನ ಬದಲಾವಣೆಯನ್ನೂ ಕೂಡ ಆಧರಿಸಿ ನಿಮಗೆ ಸಾಲವನ್ನು ನೀದ್ಫಾಬಹುದು ಎಂಬುದನ್ನು ಸಹ ನಿರ್ಧರಿಸಲಾಗುತ್ತದೆ. ಈ ಸಾಲಕ್ಕೆ ತೆಗೆದುಕೊಂಡ ಮೊತ್ತಕ್ಕೆ ಬ್ಯಾಂಕ್ ವಾರ್ಷಿಕವಾಗಿ 9.95% ಬಡ್ಡಿ ವಿಧಿಸುತ್ತದೆ.
ಈ ಸ್ಕೀಮ್ ಅಡಿ ಯಾರಿಗೆ ಸಾಲ ಸಿಗುತ್ತದೆ
ಎಸ್ಬಿಐನ ಬಹುಪಯೋಗಿ ಚಿನ್ನದ ಸಾಲ ಯೋಜನೆಯಡಿ, ಕೃಷಿಗೆ ಸಂಬಂಧಿಸಿದ ಜನರು ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಇತರ ಜನರಿಗೆ ಸಾಲ ನೀಡಲಾಗುವುದಿಲ್ಲ. ಈ ಸಾಲವನ್ನು ಸುಮಾರು 12 ತಿಂಗಳ ಅವಧಿಗೆ ನೀಡಲಾಗುತ್ತದೆ. ಇದೇ ವೇಳೆ, ಗ್ರಾಹಕರು ತಮ್ಮ ಚಿನ್ನದ ಬದಲಾಗಿ ಮೂರು ವರ್ಷಗಳವರೆಗೆ ನಗದು ಕ್ರೆಡಿಟ್ ಅಥವಾ ಓವರ್ಡ್ರಾಫ್ಟ್ ಕೂಡ ಪಡೆಯಬಹುದು.
ಈ ಸಾಲವನ್ನು ಪಡೆಯಲು ಗ್ರಾಹಕರು ಅಪ್ಲಿಕೇಶನ್ ಫಾರಂ ಭರ್ತಿ ಮಾಡಬೇಕು. ಫಾರ್ಮ್ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ, ವೋಟರ್ ಐಡಿ ಕಾರ್ಡ್ /ಪ್ಯಾನ್ ಕಾರ್ಡ್/ ಪಾಸ್ಪೋರ್ಟ್/ ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸನ್ಸ್ ಇತ್ಯಾದಿ ದಾಖಲೆಗಳನ್ನು ಅಡ್ರೆಸ್ಸ್ ಪ್ರೂಫ್ ಅಥವಾ ಗುರುತುಚೀಟಿಯ ರೂಪದಲ್ಲಿ ಸಲ್ಲಿಸಬೇಕು. ಅಷ್ಟೇ ಅಲ್ಲ ನೀವು ರೈತರಗಿದ್ದೀರಿ ಎಂಬುದಕ್ಕೆ ಪ್ರಮಾಣ ಪತ್ರ ಕೂಡ ನೀವು ಒದಗಿಸಬೇಕು.