ನವದೆಹಲಿ: ರೈತ ಹೋರಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ದೆಹಲಿ ರೈತ ಹೋರಾಟವನ್ನು ಅಂತಾರಾಷ್ಟ್ರೀಯ ಪಾಪ್ ಸ್ಟಾರ್ ರಿಹಾನ್ನಾ ಬೆಂಬಲಿಸಿದ್ದಾರೆ. ಸಿಎನ್ಎನ್ ಪ್ರಕಟಿಸಿರುವ ಸುದ್ದಿಯನ್ನು ಟ್ವೀಟ್ ಮಾಡಿರುವ ರಿಹಾನ್ನಾ , ನಾವು ಈ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲ ಎಂಬ ಪ್ರಶ್ನೆ ಎತ್ತಿದ್ದಾರೆ.
ರಿಹಾನ್ನಾ ಟ್ವೀಟ್ (Tweet) ವಿವಾದದ ಕಿಡಿ ಹೊತ್ತಿಸಿದೆ. ರಿಹಾನ್ನಾ ಟ್ವೀಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರಿಕೆಟಿಗ ಪ್ರಗ್ಯಾನ್ ಓಝಾ ಟ್ವೀಟಿಗೆ ಉತ್ತರ ನೀಡಿದ್ದಾರೆ. ‘’ನಮ್ಮ ದೇಶ ರೈತರ ಬಗ್ಗೆ ಹೆಮ್ಮೆ ಪಡುತ್ತಿದೆ. ಅವರು ಎಷ್ಟು ಮುಖ್ಯ ಎಂಬುದು ಗೊತ್ತಿದೆ. ಸಮಸ್ಯೆಗೆ ಪರಿಹಾರ ಶೀಘ್ರ ಸಿಗಲಿದೆ. ನಮ್ಮ ಅಂತರಿಕ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಅಗತ್ಯ ವಿಲ್ಲ’’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : Farmer Protest: ಅಕ್ಟೋಬರ್ ವರೆಗೂ ಮುಂದುವರೆಯಲಿದೆ ದೆಹಲಿ ರೈತರ ಪ್ರತಿಭಟನೆ..!
Sit down you fool ಎಂದ ಕಂಗನಾ :
ಪಾಪ್ ಸೆಲೆಬ್ರಿಟಿ ಕಾಲು ಕೆರೆದು ಜಗಳಕ್ಕೆ ನಿಂತಾಗ ಬಾಲಿವುಡ್ ಸೆಲೆಬ್ರಿಟಿ ಕಂಗನಾ ರನೌತ್ (Kangana Ranaut ) ಸುಮ್ಮನಿರಲು ಸಾಧ್ಯವೇ..? ರಿಹಾನ್ನಾ ಟ್ವೀಟಿಗೆ ಕಂಗನಾ ರಿಟ್ವೀಟ್ ಮಾಡಿದ್ದಾರೆ. ‘ಅವರು ರೈತರಲ್ಲ (Farmers) ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು. ಸಿಟ್ ಡೌನ್ ಯು ಫೂಲ್. ನಿಮ್ಮಂತೆ ನಾವು ದೇಶ ಮಾರಲ್ಲ ಎಂದಿದ್ದಾರೆ. ಜೊತೆಗೆ ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ, ರಿಹಾನ್ನಾ ನಮ್ಮ ಗಾಯಕರಾದ ಸುನಿಧಿ ಚೌಹಾನ್, ನೆಹಾ ಕಕ್ಕರ ತರಹ ಅಷ್ಟೇ.. ಎಂದಿದ್ದಾರೆ.
No one is talking about it because they are not farmers they are terrorists who are trying to divide India, so that China can take over our vulnerable broken nation and make it a Chinese colony much like USA...
Sit down you fool, we are not selling our nation like you dummies. https://t.co/OIAD5Pa61a— Kangana Ranaut (@KanganaTeam) February 2, 2021
ಸೋಷಿಯಲ್ ಮೀಡಿಯಾದಲ್ಲಿ (Social media) ರಿಹಾನ್ನಾ( Rihanna) ಟ್ವೀಟಿನ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಅದರ ಬೆನ್ನಲ್ಲೇ ಸ್ವಿಡನ್ನಿನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ ಬರ್ಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ (Farmer protest) ಬೆಂಬಲವಿದೆ ಎಂದು ಗ್ರೇಟಾ ಟ್ವೀಟ್ ಮಾಡಿದ್ದಾರೆ
We stand in solidarity with the #FarmersProtest in India.
https://t.co/tqvR0oHgo0— Greta Thunberg (@GretaThunberg) February 2, 2021
ಇದನ್ನೂ ಓದಿ : Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?
ಗ್ರೇಟಾ ಮಾಡಿರುವ ಟ್ವೀಟ್ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.