ಇನ್ಮುಂದೆ ನೀವು ನಿಮ್ಮ Facebook ಸ್ನೇಹಿತರ ಜೊತೆಗೆ Instagram ಮೂಲಕವೂ ಕೂಡ ಚಾಟ್ ಮಾಡಬಹುದು

ಸಾಮಾಜಿಕ ಮಾಧ್ಯಮದ ಮೂರು ಅತಿ ದೊಡ್ಡ ಪ್ಲಾಟ್ಫಾರ್ಮ್ ಗಳಾಗಿರುವ ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಮೆಸೆಂಜರ್ ಗಳನ್ನು ಸಂಯೋಜಿಸಲು ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಈ ಪ್ರಕ್ರಿಯೆಗೆ ಅಮೇರಿಕಾದಲ್ಲಿ ಚಾಲನೆ ನೀಡಿದ್ದಾರೆ.

Last Updated : Aug 18, 2020, 04:20 PM IST

Trending Photos

ಇನ್ಮುಂದೆ ನೀವು ನಿಮ್ಮ Facebook ಸ್ನೇಹಿತರ ಜೊತೆಗೆ Instagram ಮೂಲಕವೂ ಕೂಡ ಚಾಟ್ ಮಾಡಬಹುದು title=

ನವದೆಹಲಿ: ಸಾಮಾಜಿಕ ಮಾಧ್ಯಮದ ಮೂರು ಅತಿ ದೊಡ್ಡ ಪ್ಲಾಟ್ಫಾರ್ಮ್ ಗಳಾಗಿರುವ ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಮೆಸೆಂಜರ್ ಗಳನ್ನು ಸಂಯೋಜಿಸಲು ಫೇಸ್ ಬುಕ್(Facebook) ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಈ ಪ್ರಕ್ರಿಯೆಗೆ ಅಮೇರಿಕಾದಲ್ಲಿ ಚಾಲನೆ ನೀಡಿದ್ದಾರೆ.

ಹೌದು, Instagram ಹಾಗೂ ಫೇಸ್ಬುಕ್ ಮೆಸೆಂಜರ್ ಚಾಟ್ಸ್ ನ ಹೊಸ ಮರ್ಜರ್ ಅನ್ನು ಹಲವು ಬಳಕೆದಾರರಿಗಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.  ಈ ಕುರಿತಾಗಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ Instagram ಆಪ್ ತನ್ನ ಬಳಕೆದಾರರಿಗೆ pop-ups ಬಿಡುಗಡೆ ಮಾಡಲು ಆರಂಭಿಸಿದೆ. ಇದರಿಂದ ಇನ್ಸ್ಟಾ ಗ್ರಾಮ್  ಮೂಲಕವೇ ಬಳಕೆದಾರರು Facebook ಮೆಸೆಂಜರ್ ಬಳಕೆ ಮಾಡಬಹುದು. ಒಂದು ಬಾರಿ ಅಪ್ಡೇಟ್ ಮಾಡಿದ ಬಳಿಕ ಬಳಕೆದಾರರು ತಮ್ಮ ವೈಶಿಷ್ಟ್ಯಗಳಲ್ಲಿ ಬದಲಾವಣೆ ಮಾಡಬಹುದು ಹಾಗೂ ಎರಡೂ ಚಾಟ್ ಗಳನ್ನು ಮರ್ಜ್ ಮಾಡಬಹುದು.

ಈ ಕುರಿತು ಪ್ರಕಟಗೊಂಡ ವರದಿಯಲ್ಲಿ ಪ್ರಸ್ತುತ ಫೇಸ್ ಬುಕ್ ಜೊತೆಗೆ ಫ್ರೆಂಡ್ಸ್ ವೈಶಿಷ್ಟ್ಯವನ್ನು ನೀಡಲಾಗಿಲ್ಲ. ಆದರೆ, ಅಪ್ಡೇಟ್ ಮಾಡಿದ ಬಳಿಕ ಉಳಿದೆಲ್ಲ ವೈಶಿಷ್ಟ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕಾಗಿ DM ಐಕಾನ್ ಅನ್ನು ಮೆಸೆಂಜರ್ ಐಕಾನ್ ಮೂಲಕ ಬದಲಾಯಿಸಲಾಗಿದೆ. ಈ ನೂತನ ವೈಶಿಷ್ಟ್ಯ ಸೇರ್ಪಡೆಗೊಂಡ ಬಳಿಕ ಇನ್ಸ್ಟಾಗ್ರಾಮ್ ಚಾಟ್ ಇನ್ನಷ್ಟು ಕಲರ್ ಫುಲ್ ಆಗಿ ಕಾಣಿಸಲಾರಂಭಿಸಿದೆ. ಪ್ರಸ್ತುತ ಫೇಸ್ ಬುಕ್ ಇನ್ಸ್ಟಾಗ್ರಾಮ್-ಮೆಸೆಂಜರ್ ಸಂಯೋಜನೆಯ ಸೆಟ್ಟಿಂಗ್ ನಲ್ಲಿ ತೊಡಗಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಎಲ್ಲಿಯೂ ಸಂಸ್ಥೆ ಹೇಳಿಕೊಂಡಿಲ್ಲ.

Trending News