ದೀದಿ, ನಿಮ್ಮ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಮೇ 23ಕ್ಕೆ ನಿಮಗೆ ಗುಡ್ ಬೈ ಹೇಳುತ್ತಾರೆ - ಪ್ರಧಾನಿ ಮೋದಿ

40 ಟಿಎಂಸಿ  ಶಾಸಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಚುನಾವಣೆ ಮುಗಿದ ಬಳಿಕ ಅವರು ತಮ್ಮನ್ನು ತೊರೆಯುತ್ತಾರೆ  ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

Last Updated : Apr 29, 2019, 03:57 PM IST
ದೀದಿ, ನಿಮ್ಮ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಮೇ 23ಕ್ಕೆ ನಿಮಗೆ ಗುಡ್ ಬೈ ಹೇಳುತ್ತಾರೆ - ಪ್ರಧಾನಿ ಮೋದಿ  title=
Photo courtesy: Twitter

ನವದೆಹಲಿ: 40 ಟಿಎಂಸಿ  ಶಾಸಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಚುನಾವಣೆ ಮುಗಿದ ಬಳಿಕ ಅವರು ತಮ್ಮನ್ನು ತೊರೆಯುತ್ತಾರೆ  ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತ್ತಾ ಸಮೀಪದ ಸೆರಾಂಪುರ್ ಪಟ್ಟಣದಲ್ಲಿ  ಮಾತನಾಡಿದ ಪ್ರಧಾನಿ ಮೋದಿ , "ದೀದಿ, ಮೇ 23 ರಂದು ಫಲಿತಾಂಶದ ದಿನ,  ಎಲ್ಲ ಕಡೆ ಕಮಲ ಅರಳುತ್ತವೆ ಮತ್ತು ನಿಮ್ಮ ಶಾಸಕರು ನಿಮ್ಮನ್ನು ತೊರೆದು ಓಡಲಿದ್ದಾರೆ. ಇಂದಿಗೂ ಕೂಡ ನಿಮ್ಮ 40 ಶಾಸಕರ ಜೊತೆಗೆ ನನ್ನ ಸಂಪರ್ಕವಿದೆ" ಎಂದು ಮೋದಿ ಮಮತಾ ಬ್ಯಾನರ್ಜೀಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಇನ್ನು ಮುಂದುವರೆದು ಮಾತನಾಡಿದ ಮೋದಿ " ದೀದಿ ನನಗೆ ಕಲ್ಲಿನಿಂದ ಬೆರೆಸಿದ ಮಣ್ಣಿನ ರಸಗುಲ್ಲಾ ನೀಡುವುದಾಗಿ ಹೇಳುತ್ತಿದ್ದಾರೆ. ಇದು ನಿಜಕ್ಕೂ ನನಗೆ  ಸೌಭಾಗ್ಯದ ಸಂಗತಿ. ಬಂಗಾಳದ ಮಣ್ಣಿನ ರಸಗುಲ್ಲಾವೆಂದರೆ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ,ಚೈತನ್ಯ ಮಹಾಪ್ರಭು, ನೇತಾಜಿ ಸುಭಾಸ್ ಚಂದ್ರ ಬೋಸ್  ಶ್ಯಾಮ ಪ್ರಸಾದ್ ಮುಖರ್ಜಿ ರಂತಹ ಪುಣ್ಯರ  ನೆಲೆಯಿದ್ದಂತಹ ಸ್ಥಳ " ಎಂದರು.

ಜನರಿಗೆ ದ್ರೋಹವೆಸಗಿದ್ದರಿಂದಾಗಿ ಮುಖ್ಯಮಂತ್ರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಹ ಕಷ್ಟವಾಗಬಹುದು ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ. 

Trending News