ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರ (Jammu and Kashmir) ದ ಶೋಪಿಯಾನ್‌ನಲ್ಲಿ ಸೈನ್ಯ ಮತ್ತು ಉಗ್ರರ ನಡುವೆ ತಡರಾತ್ರಿಯಿಂದ ಎನ್‌ಕೌಂಟರ್ ಮುಂದುವರೆದಿದೆ. ಎರಡೂ ಬದಿಯಿಂದ ಗುಂಡಿನ ಚಕಮಕಿ ಮುಂದುವರೆದಿದ್ದು ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಇಬ್ಬರು ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.
Jammu And Kashmir: Two terrorists have been killed in Operation Melahura in Shopian earlier this morning. The operation is still going on. (Visuals deferred by unspecified time) pic.twitter.com/EwkzQEb5BB
— ANI (@ANI) April 22, 2020
ಮಂಗಳವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೆಲ್ಹೋರಾ ಗ್ರಾಮದಲ್ಲಿ 2-3 ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ 55 ಆರ್‌ಆರ್, ಎಸ್‌ಒಜಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸೇನೆಯ ಸಿಆರ್‌ಪಿಎಫ್ ಜಂಟಿ ತಂಡ ಮಂಗಳವಾರ ಸಂಜೆ ಮೆಲ್ಹೋರಾ ಗ್ರಾಮಕ್ಕೆ ಮುತ್ತಿಗೆ ಹಾಕಿತು.
ಜಂಟಿ ತಂಡವು ಅನುಮಾನಾಸ್ಪದ ಸ್ಥಳಕ್ಕೆ ಮುತ್ತಿಗೆ ಹಾಕಿದ ನಂತರ ಮತ್ತು ಎಚ್ಚರಿಕೆಗಾಗಿ ಕೆಲವು ಗುಂಡುಗಳನ್ನು ತೆರೆದ ತಕ್ಷಣ, ಗುಪ್ತ ಭಯೋತ್ಪಾದಕರು ಪ್ರತಿಕ್ರಿಯೆಯಾಗಿ ಗುಂಡುಗಳನ್ನು ಹಾರಿಸಲು ಪ್ರಾರಂಭಿಸಿದರು. ಇದರ ನಂತರ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಮನಾರ್ಹವಾಗಿ ಎನ್ಕೌಂಟರ್ ಸಮಯದಲ್ಲಿ ಭಯೋತ್ಪಾದಕರು ಗುಂಡುಗಳನ್ನು ಹಾರಿಸುವ ಮೂಲಕ ಕಾರ್ಡನ್ ಅನ್ನು ಮುರಿಯಲು ಪ್ರಯತ್ನಿಸಿದರು. ಆದರೆ ಜಂಟಿ ತಂಡವು ಭಯೋತ್ಪಾದಕರ ಗುಂಡುಗಳಿಗೆ ಪ್ರತಿಕ್ರಿಯಿಸಿತು ಮತ್ತು ಅವರನ್ನು ಪ್ರದೇಶದಿಂದ ಹೊರಗೆ ಹೋಗಲು ಬಿಡಲಿಲ್ಲ. ಏತನ್ಮಧ್ಯೆ ಈ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ಕರೆತರುವ ಮೂಲಕ ಪ್ರದೇಶವನ್ನು ಬಿಗಿಗೊಳಿಸಲಾಯಿತು. ಉಗ್ರರು ಕತ್ತಲೆಯ ಲಾಭವನ್ನು ಪಡೆದು ತಪ್ಪಿಸಿಕೊಳ್ಳಲು ಪ್ರಯತ್ನಿಸದಂತೆ ನಿಗಾ ವಹಿಸಿದ ಭದ್ರತಾ ಪಡೆಗಳು ಎನ್‌ಕೌಂಟರ್ ಸ್ಥಳದಲ್ಲಿ ದೀಪಗಳನ್ನು ಅಳವಡಿಸಿವೆ ಎಂದು ಹೇಳಲಾಗಿದೆ.