ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ನಮೋ ಟಿವಿಗೆ ನೋಟಿಸ್ ಜಾರಿ

ಮತದಾನಕ್ಕೂ ಮೊದಲು 48 ಗಂಟೆಗಳ ಮೌನದ ಅವಧಿ ಸಮಯದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಮೋ ಟಿವಿ ವಿರುದ್ಧ ದೆಹಲಿ ಮುಖ್ಯ ಚುನಾವಣಾ  ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.   

Last Updated : May 11, 2019, 08:13 PM IST
 ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ನಮೋ ಟಿವಿಗೆ ನೋಟಿಸ್ ಜಾರಿ   title=
file photo

ನವದೆಹಲಿ: ಮತದಾನಕ್ಕೂ ಮೊದಲು 48 ಗಂಟೆಗಳ ಮೌನದ ಅವಧಿ ಸಮಯದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಮೋ ಟಿವಿ ವಿರುದ್ಧ ದೆಹಲಿ ಮುಖ್ಯ ಚುನಾವಣಾ  ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.   

1.43 ಕೋಟಿ ಮತದಾರರಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಎಲ್ಲ ಏಳು ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಸಾಯಂಕಾಲ 6 ಗಂಟೆಯಿಂದ ಭಾನುವಾರ ಸಾಯಂಕಾಲ ಆರು ಗಂಟೆಯವರೆಗೆ ಚುನಾವಣಾ ಆಯೋಗ ಮೌನದ ಅವಧಿ ಎಂದು ಹೇಳಿದೆ.ಈ ಸಂದರ್ಭದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡು ಪ್ರಚಾರವನ್ನು ಸ್ಥಗಿತಗೊಳಿಸಬೇಕೆಂದು ಆಯೋಗ ಹೇಳಿದೆ.ಈಗ ಇದನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಈಗ ಬಿಜೆಪಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಚುನಾವಣಾ ಅಧಿಕಾರಿ ರಣಬೀರ್ ಸಿಂಗ್ "ಮೌನ ಅವಧಿಯು ಪ್ರಾರಂಭವಾದ ಬಳಿಕ ನಮೋ ಟಿವಿಯಲ್ಲಿ ಚುನಾವಣಾ-ಸಂಬಂಧಿತ ವಿಷಯವನ್ನು ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಬಿಜೆಪಿಗೆ ನೋಟಿಸ್  ಕಳುಹಿಸಲಾಗಿದೆ" ಎಂದುಹೇಳಿದರು.ಈ ನೋಟಿಸ್ ಗೆ ಶನಿವಾರ ಸಾಯಂಕಾಲದ ಒಳಗಾಗಿ ಉತ್ತರಿಸಬೇಕೆಂದು ಆಯೋಗ ಸೂಚಿಸಿದೆ.

ಬಿಜೆಪಿ ಪ್ರಾಯೋಜಕತ್ವದಲ್ಲಿ ಪ್ರಸಾರವಾಗುತ್ತಿರುವ ನಮೋ ಚಾನಲ್ ಯಾವುದೇ ರಾಜಕೀಯ ಪ್ರಚಾರದ ವಿಷಯಗಳನ್ನು ಪ್ರಸಾರ ಮಾಡುವ ಮೊದಲು ದೆಹಲಿಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಮೊದಲೇ ದೃಢೀಕರಿಸಬೇಕು ಮತ್ತು ಪೂರ್ವ-ಪ್ರಮಾಣೀಕರಣವಿಲ್ಲದೆಯೇ ಪ್ರದರ್ಶಿಸಲಾಗುವ ಎಲ್ಲಾ ರಾಜಕೀಯ ಪ್ರಚಾರ ವಿಷಯಗಳನ್ನೂ ತೆಗೆದುಹಾಕಬೇಕು ಎಂದು ದಿಲ್ಲಿ ಸಿಇಒ ಕಚೇರಿ ಹೇಳಿದೆ. 

Trending News