Edappadi K Palaniswami : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಳನಿಸ್ವಾಮಿ..!

ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಸೋಲಿನ ನಂತರ ತಮಿಳುನಾಡು ಸಿಎಂ ಎದಪ್ಪಾಡಿ ಕೆ ಪಳನಿಸ್ವಾಮಿ ಇಂದು ರಾಜೀನಾಮೆ ನೀಡಿದ್ದಾರೆ. 

Last Updated : May 3, 2021, 01:24 PM IST
  • ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಸೋಲಿನ ನಂತರ
  • ತಮಿಳುನಾಡು ಸಿಎಂ ಎದಪ್ಪಾಡಿ ಕೆ ಪಳನಿಸ್ವಾಮಿ ಇಂದು ರಾಜೀನಾಮೆ
  • ಸಿಎಂ ಪಳನಿಸ್ವಾಮಿ ತಮ್ಮ ಕಾರ್ಯದರ್ಶಿಯ ಮೂಲಕ ಸೇಲಂನಿಂದ ರಾಜೀನಾಮೆ
Edappadi K Palaniswami : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಳನಿಸ್ವಾಮಿ..! title=

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಸೋಲಿನ ನಂತರ ತಮಿಳುನಾಡು ಸಿಎಂ ಎದಪ್ಪಾಡಿ ಕೆ ಪಳನಿಸ್ವಾಮಿ ಇಂದು ರಾಜೀನಾಮೆ ನೀಡಿದ್ದಾರೆ. 

ಸಿಎಂ ಪಳನಿಸ್ವಾಮಿ(Edappadi K Palaniswami) ತಮ್ಮ ಕಾರ್ಯದರ್ಶಿಯ ಮೂಲಕ ಸೇಲಂನಿಂದ ರಾಜೀನಾಮೆ ಕಳುಹಿಸಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ರಾಜೀನಾಮೆ ಪತ್ರ ರಾಜ್ಯಪಾಲರ ಕೈ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಡಿಎಂಕೆಯ ಎಂ.ಕೆ.ಸ್ಟಾಲಿನ್(MK Stalin) ನೇತೃತ್ವದ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲು ರಾಜ್ಯಪಾಲರ ಕಚೇರಿಯಲ್ಲಿ ಪೂರ್ವಸಿದ್ಧತಾ ಕಾರ್ಯ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 125 ಸ್ಥಾನಗಳನ್ನು ಗೆದ್ದರೆ, ಒ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ 65 ಸ್ಥಾನಗಳನ್ನು ಗೆದ್ದಿದೆ.

ತಮಿಳುನಾಡಿನ ಹೊಸ ಸಿಎಂ(Chief Minister) ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಎಂ.ಕೆ.ಸ್ಟಾಲಿನ್ ಅವರಿಗೆ ನಾನು ಶುಭ ಕೋರುತ್ತೇನೆ', ಎಂದು ಪಳನಿಸ್ವಾಮಿ ಟ್ವೀಟ್ ಮಾಡಿದ್ದಾರೆ.

'ಉತ್ತಮ ತಮಿಳುನಾಡು(Tamil Nadu) ರಚಿಸಲು ನಿಮ್ಮ ಸಲಹೆ ಮತ್ತು ಸಹಕಾರ ಬೇಕು. ಪ್ರಜಾಪ್ರಭುತ್ವವು ಖಜಾನೆ ಮತ್ತು ವಿರೋಧ ಪಕ್ಷದ ಸಂಯೋಜನೆಯಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸೋಣ,' ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ, ಇಪಿಎಸ್ ಗೆ ಧನ್ಯವಾದ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News