Delhi Liquor Scam : ದೆಹಲಿ ಮದ್ಯ ಹಗರಣ : 3000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಇಡಿ

ಈ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಸೆಪ್ಟೆಂಬರ್ 27 ರಂದು ಇಡಿ ಮೊದಲ ಬಾರಿಗೆ ಬಂಧಿಸಿತ್ತು. ಇದು ಸುಮಾರು 3,000 ಪುಟಗಳನ್ನು ಒಳಗೊಂಡಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಬಂಧಿತ ಇತರ ಆರೋಪಿಗಳ ವಿರುದ್ಧ ಶೀಘ್ರವೇ ಪೂರಕ ಆರೋಪ ಪಟ್ಟಿ ಸಲ್ಲಿಸುವುದಾಗಿಯೂ ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

Written by - Channabasava A Kashinakunti | Last Updated : Nov 26, 2022, 07:13 PM IST
  • ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ
  • ಸಿಬಿಐ ನಂತರ ಇದೀಗ ಇಡಿ ತನ್ನ ಚಾರ್ಜ್ ಶೀಟ್ ಸಲ್ಲಿಸಿದೆ
  • ಮನೀಶ್ ಸಿಸೋಡಿಯೋಗೆ ಕ್ಲೀನ್ ಚಿಟ್
Delhi Liquor Scam : ದೆಹಲಿ ಮದ್ಯ ಹಗರಣ : 3000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಇಡಿ title=

Delhi Liquor Scam : ದೆಹಲಿ ಮದ್ಯ ಹಗರಣದಲ್ಲಿ ಸಿಬಿಐ ನಂತರ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನ್ನ ಚಾರ್ಜ್ ಶೀಟ್ ಸಲ್ಲಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಇಡಿ ತನ್ನ ಮೊದಲ ಚಾರ್ಜ್ ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಿದೆ. ಈ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಸೆಪ್ಟೆಂಬರ್ 27 ರಂದು ಇಡಿ ಮೊದಲ ಬಾರಿಗೆ ಬಂಧಿಸಿತ್ತು. ಇದು ಸುಮಾರು 3,000 ಪುಟಗಳನ್ನು ಒಳಗೊಂಡಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಬಂಧಿತ ಇತರ ಆರೋಪಿಗಳ ವಿರುದ್ಧ ಶೀಘ್ರವೇ ಪೂರಕ ಆರೋಪ ಪಟ್ಟಿ ಸಲ್ಲಿಸುವುದಾಗಿಯೂ ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸಿಬಿಐ ಶುಕ್ರವಾರ ಸಲ್ಲಿಸಿದ ಅರ್ಜಿ ದೊಡ್ಡ ರಾಜಕೀಯ ವಿಷಯವಾಗಿದೆ. ವಾಸ್ತವವಾಗಿ, ಈ ಚಾರ್ಜ್ ಶೀಟ್‌ನಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರು ಇಲ್ಲ. ಗಮನಾರ್ಹವಾಗಿ, ಮದ್ಯ ನೀತಿಯಲ್ಲಿನ ಹಗರಣದ ವಿಷಯವನ್ನು ಬಿಜೆಪಿ ಗಟ್ಟಿಯಾಗಿ ಎತ್ತಿತ್ತು ಮತ್ತು ಸಿಸೋಡಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು, ಆದರೆ ಚಾರ್ಜ್ ಶೀಟ್‌ನಲ್ಲಿ ಮನೀಶ್ ಸಿಸೋಡಿಯಾ ಹೆಸರು ಇಲ್ಲದಿರುವುದರಿಂದ, ಎಎಪಿ ಈಗ ಬಿಜೆಪಿಯ ಮೇಲೆ ದಾಳಿಗಾರನಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ : Excise Policy Scam : ಲಿಕ್ಕರ್ ಪಾಲಿಸಿ ಹಗರಣದ 10,000 ಪುಟಗಳ ಚಾರ್ಜ್ ಶೀಟ್ : ಆದ್ರೆ, ಸಿಸೋಡಿಯಾ ಹೆಸರಿಲ್ಲ!

ಮನೀಶ್ ಸಿಸೋಡಿಯೋಗೆ ಕ್ಲೀನ್ ಚಿಟ್

ಈ ಬಗ್ಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, 'ನಿನ್ನೆ (ಶುಕ್ರವಾರ) ಸಿಬಿಐ ಮದ್ಯ ಹಗರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಆ ಚಾರ್ಜ್ ಶೀಟ್‌ನಲ್ಲಿ ಮನೀಶ್ ಸಿಸೋಡಿಯಾ 
 ಅವರ ಹೆಸರು ಇಲ್ಲ, ಹೀಗಾಗಿ ಸಿಬಿಐ ಮನೀಶ್ ಸಿಸೋಡಿಯಾಗೆ ಕ್ಲೀನ್ ಚಿಟ್ ನೀಡಿದೆ. ' ಕಳೆದ ನಾಲ್ಕು ತಿಂಗಳಿನಿಂದ ಸಿಬಿಐ, ಇಡಿಯ ಸುಮಾರು 800 ಅಧಿಕಾರಿಗಳು ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಗಳಿಗೆ ಒಂದೇ ಒಂದು ಸಾಕ್ಷಿ ಸಿಕ್ಕಿಲ್ಲ, ಅವರು ಏನು ಮಾಡಿದರೂ, ಮನೀಶ್ ಸಿಸೋಡಿಯಾ ವಿರುದ್ಧ ಯಾವುದೇ ಪುರಾವೆಗಳನ್ನು ಸಾಕ್ಷಿಗಳು ಸಿಕ್ಕಿಲ್ಲ. ನಿನ್ನೆಯ ಚಾರ್ಜ್ ಶೀಟ್ ನಲ್ಲಿ ಮನೀಶ್ ಸಿಸೋಡಿಯಾ ವಿರುದ್ಧ ಒಂದು ತುಣುಕಿನ ಸಾಕ್ಷಿಯೂ ಸಿಕ್ಕಿಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

'ಪ್ರಧಾನಿ ಈ ಪ್ರಕರಣವನ್ನು ಖುದ್ದು ನಿಗಾ ವಹಿಸಿದ್ದರು'

ಈ ಬಗ್ಗೆ ಇನ್ನು ಮುಂದುವರೆದು ಮಾತನಾಡಿದ ಸಿಎಂ ಕೇಜ್ರಿವಾಲ್, 'ಪ್ರಧಾನಿಯವರು ಈ ಪ್ರಕರಣವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ, ಪ್ರಧಾನಿ ಖುದ್ದು ಸಿಬಿಐ, ಇಡಿ ನಿರ್ದೇಶಕರನ್ನು ಭೇಟಿಯಾಗುತ್ತಿದ್ದರು, ನೀವು ಏನಾದ್ರು ಮಾಡಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು. ಆದರೆ ಎಲ್ಲಾ ತನಿಖೆಯ ನಂತರವೂ, ಮನೀಶ್ ಸಿಸೋಡಿಯಾ ವಿರುದ್ಧ ಯಾವುದೇ ಸಾಕ್ಷ್ಯವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಇಸ್ರೋದಿಂದ ಹೊಸ ಮೈಲಿಗಲ್ಲು: ಒಂದೇ ಬಾರಿಗೆ Oceansat-3 ಸೇರಿದಂತೆ 9 ಉಪಗ್ರಹಗಳು ಉಡಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News