ಇಡಿ ಚಿದಂಬರಂರನ್ನು ಟ್ವಿಟ್ಟರ್ ಖಾತೆಯ ಬಗ್ಗೆ ಪ್ರಶ್ನಿಸಿದೆ, ಆದರೆ ಆಸ್ತಿಯ ಬಗ್ಗೆ ಎಂದಿಗೂ ಪ್ರಶ್ನಿಸಿಲ್ಲ: ಕಪಿಲ್ ಸಿಬಲ್

2017 ರಲ್ಲಿ ಎಫ್‌ಐಆರ್ ದಾಖಲಾದ ಬಳಿಕ ತನಿಖೆಯಲ್ಲಿ ಏನೂ ಆಗಿಲ್ಲ. ಈ ಮಾಧ್ಯಮ ವಿಚಾರಣೆ ನಡೆಯುತ್ತಿದೆ, ಚಿದಂಬರಂ ಅವರ ಬಳಿ ಹಲವಾರು ಆಸ್ತಿಗಳಿವೆ ಎಂದು ಆರೋಪಿಸಲಾಗುತ್ತಿದೆ, ನನಗೆ ಒಂದಾದರೂ ಅಕ್ರಮ ಆಸ್ತಿ ಸಿಕ್ಕಿದರೆ, ನಾನು ಅರ್ಜಿಯನ್ನು ಹಿಂಪಡೆಯುತ್ತೇನೆ  ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

Last Updated : Aug 26, 2019, 01:51 PM IST
ಇಡಿ ಚಿದಂಬರಂರನ್ನು ಟ್ವಿಟ್ಟರ್ ಖಾತೆಯ ಬಗ್ಗೆ ಪ್ರಶ್ನಿಸಿದೆ, ಆದರೆ ಆಸ್ತಿಯ ಬಗ್ಗೆ ಎಂದಿಗೂ ಪ್ರಶ್ನಿಸಿಲ್ಲ: ಕಪಿಲ್ ಸಿಬಲ್ title=
File Image

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪರವಾಗಿ ಅರ್ಜಿ ಸಲ್ಲಿಸಿರುವ ಹಿರಿಯ ವಕೀಲರಾದ ಕಪಿಲ್ ಸಿಬಲ್, 2017 ರಲ್ಲಿ ಎಫ್‌ಐಆರ್ ದಾಖಲಾದ ಬಳಿಕ ತನಿಖೆಯಲ್ಲಿ ಏನೂ ಆಗಿಲ್ಲ. ಈ ಮಾಧ್ಯಮ ವಿಚಾರಣೆ ನಡೆಯುತ್ತಿದೆ, ಚಿದಂಬರಂ ಅವರ ಬಳಿ ಹಲವಾರು ಆಸ್ತಿಗಳಿವೆ ಎಂದು ಆರೋಪಿಸಲಾಗುತ್ತಿದೆ, ನನಗೆ ಒಂದಾದರೂ ಅಕ್ರಮ ಆಸ್ತಿ ಸಿಕ್ಕಿದರೆ, ನಾನು ಅರ್ಜಿಯನ್ನು ಹಿಂಪಡೆಯುತ್ತೇನೆ  ಎಂದು ಹೇಳಿದ್ದಾರೆ. 

6 ಜೂನ್ 2018 ರಂದು ಸಿಬಿಐ ಒಮ್ಮೆ ಮಾತ್ರ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಕರೆದಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಸಂಪೂರ್ಣ ತನಿಖೆ ಸಂವಿಧಾನದ 21 ನೇ ವಿಧಿಗೆ ವಿರುದ್ಧವಾಗಿದೆ, ಇದು ನ್ಯಾಯಯುತ ತನಿಖೆ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ನನಗೆ ನೀಡುತ್ತದೆ. ನಿಮಗೆ ಟ್ವಿಟರ್ ಖಾತೆ ಇದೆಯೇ ಎಂದು ಇಡಿ ಚಿದಂಬರಂ ಅವರನ್ನು ಕೇಳಿದೆ. ಇಡಿ ಮೂರು ಬಾರಿ ಚಿದಂಬರಂ ಅವರನ್ನು ಕರೆದಿದ್ದು, ಅವರ ಟ್ವಿಟ್ಟರ್ ಖಾತೆ ಬಗ್ಗೆ ಪ್ರಶ್ನಿಸಿದೆಯೇ ಹೊರತು ಎಂದಿಗೂ ಅವರ ಆಸ್ತಿ ಮತ್ತು ನಕಲಿ ಖಾತೆಗಳ ಬಗ್ಗೆ ವಿಚಾರಣೆ ನಡೆಸಿಲ್ಲ ಎಂದು ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದಾರೆ.

ಇಡಿ ತನಿಖೆಯ ಸಂಪೂರ್ಣ ಸ್ವರೂಪವನ್ನು ಕಾನೂನುಬಾಹಿರ ಎಂದು ಬಣ್ಣಿಸಿರುವ ವಕೀಲ ಕಪಿಲ್ ಸಿಬಲ್, ಕಾನೂನು ಪ್ರಕ್ರಿಯೆಯ ಪ್ರಕಾರ ತನಿಖೆ ಎಂದಿಗೂ ನಡೆದಿಲ್ಲ ಎಂದು ಹೇಳಿದರು. ಚಿದಂಬರಂ ಅವರ ಮೊಮ್ಮಗಳಿಗೆ ಆಸ್ತಿಯನ್ನು ವಿಲ್ ಮಾಡಿರುವ ಬಗ್ಗೆ ಇಡಿ ಆರೋಪಿಸಿದೆ. ಆದರೆ ವಿಚಾರಣೆಗೆ ಹಾಜರಾಗಲು ಚಿದಂಬರಂ ಅವರನ್ನು ಕರೆದಾಗ, ಇಡಿ ಆ ಬಗ್ಗೆ ಏಕೆ ಕೇಳಬಾರದು? ಆಸ್ತಿ ಮತ್ತು ಖಾತೆ ಶುಲ್ಕಗಳ ದಾಖಲೆಗಳು ಇಡಿಯ ಬಳಿ ಇದ್ದರೆ, ಆರೋಪಿ ಚಿದಂಬರಂ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಇಡಿ ಅವರನ್ನು ಪ್ರಶ್ನಿಸುವುದೇನಿದೆ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

ಇಡಿ ಸಲ್ಲಿಸಿದ ಅಫಿಡವಿಟ್ ಅನ್ನು ಈಗಾಗಲೇ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಆದರೆ ಇದನ್ನು ವಿರೋಧಿಸಿರುವ ಇಡಿ ಪರ ವಕೀಲ ಎಸ್‌ಜಿ ತುಷಾರ್ ಮೆಹ್ತಾ ಆರೋಪವನ್ನು ತಳ್ಳಿಹಾಕಿದ್ದಾರೆ. ಕಾನೂನು ಪ್ರಕ್ರಿಯೆಯ ಮೂಲಕ ಇಡಿ ತನಿಖೆ ನಡೆಸಿಲ್ಲ, ಕೇಸ್ ಡೈರಿ ಮಾಡಿಲ್ಲ ಅಥವಾ ಆರೋಪಿಗಳಿಗೆ ನೀಡಬೇಕಾದ ಯಾವುದೇ ದಾಖಲೆಗಳನ್ನು ಹಂಚಿಕೊಂಡಿಲ್ಲ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ.

Trending News