Earthquake: ರಾಜಸ್ಥಾನದ ಬಿಕಾನೇರ್‌ನಲ್ಲಿ ಸತತ ಎರಡನೇ ದಿನವೂ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲು

ರಾಜಸ್ಥಾನದ ಬಿಕಾನೇರ್‌ನಲ್ಲಿ ಇಂದೂ ಕೂಡ ಭೂಕಂಪದ ನಡುಕ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ.

Written by - Zee Kannada News Desk | Last Updated : Jul 22, 2021, 10:58 AM IST
  • ಗುರುವಾರ ಬೆಳಿಗ್ಗೆ ರಾಜಸ್ಥಾನದ ಬಿಕಾನೆರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ
  • ಬಿಕಾನೆರ್‌ನ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸುಮಾರು 413 ಕಿಲೋಮೀಟರ್ ದೂರದಲ್ಲಿ ಭೂಕಂಪ
  • ಎರಡು ದಿನಗಳಲ್ಲಿ ಈ ಪ್ರದೇಶವನ್ನು ಅಪ್ಪಳಿಸಿದ ಎರಡನೇ ಭೂಕಂಪ ಇದಾಗಿದೆ
Earthquake: ರಾಜಸ್ಥಾನದ ಬಿಕಾನೇರ್‌ನಲ್ಲಿ ಸತತ ಎರಡನೇ ದಿನವೂ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲು title=
Earthquake in Rajasthan's Bikaner

Earthquake in Rajasthan's Bikaner: ರಾಜಸ್ಥಾನದ ಬಿಕಾನೇರ್‌ನಲ್ಲಿ ಸತತ ಎರಡನೇ ದಿನವೂ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ ಸುಮಾರು 7:42ಕ್ಕೆ ಬಿಕಾನೇರ್‌ನಲ್ಲಿ ಭೂಮಿ ನಡುಗಿದ  ಅನುಭವವಾಗಿದ್ದು ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ.

ಇಂದು ಬೆಳಿಗ್ಗೆ 7:42 ಕ್ಕೆ ರಾಜಸ್ಥಾನದ ಬಿಕಾನೇರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ಬಿಕಾನೆರ್‌ನ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸುಮಾರು 413 ಕಿಲೋಮೀಟರ್ ದೂರದಲ್ಲಿ 15 ಕಿ.ಮೀ ಆಳದಲ್ಲಿ ಈ ಭೂಕಂಪ ಉಂಟಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.
 

ಇದನ್ನೂ ಓದಿ- SBI: ತನ್ನ 44 ಕೋಟಿ ಗ್ರಾಹಕರಿಗೆ ವಿಡಿಯೋ ಸಂದೇಶ ನೀಡಿರುವ ಎಸ್‌ಬಿಐ ಹೇಳಿದ್ದೇನು?

ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ರಾಜಸ್ಥಾನದ ಬಿಕಾನೆರ್ (Rajasthan's Bikaner) ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿತ್ತು. ಜೈಪುರದ ಹವಾಮಾನ ಕೇಂದ್ರವು ಬುಧವಾರ ಬೆಳಿಗ್ಗೆ 5: 24ರ ಸುಮಾರಿಗೆ ಈ ಭಾಗದಲ್ಲಿ ರಿಕ್ಟರ್ ಪ್ರಮಾಣದಲ್ಲಿ 5.3 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿತ್ತು. ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ 110 ಕಿ.ಮೀ ಆಳದಲ್ಲಿತ್ತು.

ಇದನ್ನೂ ಓದಿ-  LPG Booking Offer: ದುಬಾರಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಈ ರೀತಿ 900 ರೂ.ಗಳನ್ನು ಉಳಿಸಬಹುದು!

ಜಿಲ್ಲಾಡಳಿತದ ಪ್ರಕಾರ, ಈ ಸಮಯದಲ್ಲಿ ಹೆಚ್ಚಿನ ಜನರು ನಿದ್ರಿಸುತ್ತಿದ್ದರು ಮತ್ತು ಯಾವುದೇ ರೀತಿಯ ಹಾನಿ ಬಗ್ಗೆ ವರದಿಯಾಗಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News