Earthquake: ಬಿಕಾನೇರ್‌ನಲ್ಲಿ 5.3 ತೀವ್ರತೆಯ ಭೂಕಂಪ

ರಾಜಸ್ಥಾನದ ಬಿಕಾನೆರ್‌ನಲ್ಲಿ (Earthquake in Bikaner) ಇದುವರೆಗೂ ಇಷ್ಟು ತೀವ್ರತೆಯ ಭೂಕಂಪ ಸಂಭವಿಸಿರಲಿಲ್ಲ. ಇದಕ್ಕೂ ಮುನ್ನ ಮಧ್ಯರಾತ್ರಿ 2.10 ರ ಸುಮಾರಿಗೆ ಮೇಘಾಲಯದಲ್ಲಿ ಭೂಕಂಪದ ನಡುಕ ಅನುಭವವಾಯಿತು.

Written by - Yashaswini V | Last Updated : Jul 21, 2021, 09:09 AM IST
  • ಬಿಕಾನೇರ್‌ನಲ್ಲಿ ಬಲವಾದ ಭೂಕಂಪ ಉಂಟಾಗಿದೆ
  • ಭೂಕಂಪದ ಪ್ರಮಾಣವು ರಿಕ್ಟರ್ ಪ್ರಮಾಣದಲ್ಲಿ 5.3 ಎಂದು ದಾಖಲಾಗಿದೆ
  • ಬೆಳಿಗ್ಗೆ 5: 24 ಕ್ಕೆ ಭೂಕಂಪ ಸಂಭವಿಸಿದೆ
Earthquake: ಬಿಕಾನೇರ್‌ನಲ್ಲಿ 5.3 ತೀವ್ರತೆಯ ಭೂಕಂಪ title=
Earthquake in Bikaner

ಬಿಕಾನೆರ್: ರಾಜಸ್ಥಾನದ ಬಿಕಾನೆರ್‌ನಲ್ಲಿ ಬಲವಾದ ಭೂಕಂಪನ (Earthquake in Bikaner) ಸಂಭವಿಸಿದೆ, ಇದರ ತೀವ್ರತೆಯು ರಿಕ್ಟರ್ ಪ್ರಮಾಣದಲ್ಲಿ 5.3 ಎಂದು ದಾಖಲಾಗಿದೆ. ಮುಂಜಾನೆ 5: 24 ಕ್ಕೆ ಬಿಕಾನೇರ್‌ನಲ್ಲಿ ಈ ಭೂಕಂಪ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ  (National Centre for Seismology) ತಿಳಿಸಿದೆ. ಭೂಕಂಪದಿಂದ ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ.

ಮೇಘಾಲಯ-ಲಡಾಖ್‌ನಲ್ಲೂ ನಡುಗಿದ ಭೂಮಿ :
ರಾಜಸ್ಥಾನದ ಬಿಕಾನೆರ್‌ನಲ್ಲಿ ಭೂಕಂಪ (Earthquake in Bikaner) ಸಂಭವಿಸುವ ಮೊದಲು ಮಧ್ಯರಾತ್ರಿ 2.10 ರ ಸುಮಾರಿಗೆ ಮೇಘಾಲಯದಲ್ಲಿ ಭೂಕಂಪದ ನಡುಕ ಉಂಟಾಗಿದೆ, ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.1 ಎಂದು ಅಳೆಯಲಾಗಿದೆ. ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಪಶ್ಚಿಮ ಗಾರೊ ಹಿಲ್ಸ್, ಆದರೆ ಇದುವರೆಗೂ ಮೇಘಾಲಯದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. 

ಇದನ್ನೂ ಓದಿ- Shimla Earthquake: ಹಿಮಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ , 3.6 ತೀವ್ರತೆ ದಾಖಲು

ಇದಲ್ಲದೆ ಬೆಳಿಗ್ಗೆ 4.57 ರ ಸುಮಾರಿಗೆ ಲೇಹ್-ಲಡಾಖ್ ಪ್ರದೇಶದಲ್ಲಿ ಭೂಕಂಪದ (Earthquake) ನಡುಕ ಉಂಟಾಯಿತು, ರಿಕ್ಟರ್ ಪ್ರಮಾಣದಲ್ಲಿ ಇದರ ತೀವ್ರತೆಯು 3.6 ಆಗಿತ್ತು.

ಭೂಕಂಪ ಏಕೆ ಸಂಭವಿಸುತ್ತದೆ?
ಭೂಮಿಯೊಳಗೆ 7 ಫಲಕಗಳಿದ್ದು, ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಹೆಚ್ಚು ಘರ್ಷಿಸಿದಾಗ, ಆ ವಲಯವನ್ನು ದೋಷ ರೇಖೆ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ, ಫಲಕಗಳ ಮೂಲೆಗಳು ತಿರುಚಲ್ಪಟ್ಟು ಒತ್ತಡವು ಹೆಚ್ಚಾದಾಗ, ಫಲಕಗಳು ಒಡೆಯುತ್ತವೆ ಮತ್ತು ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ನಂತರ ಭೂಕಂಪ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Earthquake Hits Jammu and Kashmir : ಕಾಶ್ಮೀರದಲ್ಲಿ ಭೂಕಂಪ , ಹಿಮಾಲಯದ ಮಡಿಲಲ್ಲೇಕೆ ಭೂಮಿ ಕಂಪಿಸುತ್ತಿದೆ..?

ಭೂಕಂಪವು ಯಾವಾಗ ಹಾನಿಯನ್ನುಂಟುಮಾಡುತ್ತದೆ?
ರಿಕ್ಟರ್ ಸ್ಕೇಲ್ ಪರಿಣಾಮ
0 ರಿಂದ 1.9 ತೀವ್ರತೆ  ಇದನ್ನು ಸೀಸ್ಮೋಗ್ರಾಫ್ ಮೂಲಕ ಮಾತ್ರ ನೋಡಬಹುದು.
2 ರಿಂದ 2.9 ತೀವ್ರತೆ  ಸೌಮ್ಯ ನಡುಕ 
3 ರಿಂದ 3.9 ತೀವ್ರತೆ ಹೆವಿ ಟ್ರಕ್ ನಿಮ್ಮ ಹತ್ತಿರ ಹಾದು ಹೋದಾಗ ಆಗುವಂತಹ ಅನುಭವ
4 ರಿಂದ 4.9 ತೀವ್ರತೆ ಕಿಟಕಿಗಳನ್ನು ಮುರಿಯಬಹುದು. ಗೋಡೆಗಳ ಮೇಲೆ ನೇತಾಡುವ ಚೌಕಟ್ಟುಗಳು ಬೀಳಬಹುದು.
5 ರಿಂದ 5.9 ತೀವ್ರತೆ  ಪೀಠೋಪಕರಣಗಳು ಚಲಿಸಬಹುದು.
6 ರಿಂದ 6.9 ತೀವ್ರತೆ ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು.
6 ರಿಂದ 6.9 ತೀವ್ರತೆ ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು.
7 ರಿಂದ 7.9 ತೀವ್ರತೆ ಕಟ್ಟಡಗಳು ಬೀಳುತ್ತವೆ. ಪೈಪ್‌ಗಳು ನೆಲದೊಳಗೆ ಸಿಡಿಯುತ್ತವೆ.
8 ರಿಂದ 8.9 ತೀವ್ರತೆ  ಕಟ್ಟಡಗಳು ಸೇರಿದಂತೆ ದೊಡ್ಡ ಸೇತುವೆಗಳು ಸಹ ಕುಸಿಯುತ್ತವೆ, ಸುನಾಮಿಯ ಅಪಾಯವಿದೆ.
9 ಮತ್ತು ಅದಕ್ಕಿಂತ ಹೆಚ್ಚಿನ ತೀವ್ರತೆ  ಸಂಪೂರ್ಣ ವಿನಾಶ. ಸಮುದ್ರ ಸಮೀಪದಲ್ಲಿದ್ದರೆ, ಅಲ್ಲಿ ಸುನಾಮಿ ಅಪಾಯ
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News