Swaroopanand Saraswati Demise: ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ (99) ವಿಧಿವಶರಾಗಿದ್ದಾರೆ. ಅವರು ಮಧ್ಯಪ್ರದೇಶದ ನಿರ್ಸಿಂಗ್ಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಮಾಹಿತಿಯ ಪ್ರಕಾರ, ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಆಶ್ರಮದಲ್ಲಿ ನಿಧನರಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಅವರು ತಮ್ಮ 99ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದರು. ಅವರು 2 ಸೆಪ್ಟೆಂಬರ್ 1924 ರಂದು ಜನಿಸಿದ್ದರು. ಅವರು ಹಿಂದೆ ದ್ವಾರಕಾ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯರಾಗಿದ್ದರು.
ಇದನ್ನೂ ಓದಿ-14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್..!
Dwarka Shankaracharya Swami Swaroopanand Saraswati passes away at the age of 99, in Madhya Pradesh's Narsinghpur
(file pic) pic.twitter.com/Bzi541OiPW
— ANI (@ANI) September 11, 2022
ಇದನ್ನೂ ಓದಿ-Kodi Shree : ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ : ಕೋಡಿ ಶ್ರೀಗಳ ಭವಿಷ್ಯ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ
ಶಂಕರಾಚಾರ್ಯ ಸ್ವರೂಪಾನಂದರು ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರ ಬಾಲ್ಯದ ಹೆಸರು ಪೋತಿರಾಮ್. ಅವರು ಕಾಶಿಯಲ್ಲಿ ಕರ್ಪಾತ್ರಿ ಮಹಾರಾಜರಿಂದ ಧರ್ಮ ಶಿಕ್ಷಣವನ್ನು ಕಲಿತಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಅವರೂ ಚಳವಳಿಗೆ ಧುಮುಕಿದ್ದರು. ಇದಕ್ಕಾಗಿ ಅವರಿಗೆ ಎರಡು ಬಾರಿ ಜೈಲಿಗೆ ಹೋಗಬೇಕಾಯಿತು. 1989ರಲ್ಲಿ ಶಂಕರಾಚಾರ್ಯ ಎಂಬ ಬಿರುದು ಪಡೆದರು.
ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರನ್ನು ಹಿಂದೂ ಧರ್ಮದ ದೊಡ್ಡ ಗುರುಗಳು ಎಂದು ಭಾವಿಸಲಾಗುತ್ತದೆ. ಈ ಬಾರಿಯ ಹರಿಯಾಲಿ ತೀಜ್ ಉತ್ಸವದ ಸಂದರ್ಭದಂದು ಅವರ ಆಶ್ರಮದಲ್ಲಿ ಸದ್ಗುರು ಶಂಕರಾಚಾರ್ಯ ಅವರ 99ನೇ ಹುಟ್ಟುಹಬ್ಬವನ್ನು ಭವ್ಯವಾಗಿ ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸೇರಿದಂತೆ ಇತರ ರಾಜಕೀಯ ಗಣ್ಯರು ಭಾಗವಹಿಸಿದ್ದರು.
ಹಿಂದೂಗಳ ದೊಡ್ಡ ಧರ್ಮಗುರುಗಳು ಎಂದು ಭಾವಿಸಲಾಗುತ್ತದೆ
ಹಿಂದೂಗಳ ದೊಡ್ಡ ಧರ್ಮಗುರುಗಳು ಎಂದು ಭಾವಿಸಲಾಗುವ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರ ಬಳಿ ಬದ್ರಿ ಆಶ್ರಮ ಹಾಗೂ ದ್ವಾರಕಾಪೀಠದ ಜವಾಬ್ದಾರಿ ಇತ್ತು. ತನ್ನ 9ನೇ ವಯಸ್ಸಿನಲ್ಲಿ ಮನೆಯನ್ನು ತೊರೆದ ಸ್ವರೂಪಾನಂದ ಸರಸ್ವತಿ ಅವರು, ಬಳಿಕ ತಮ್ಮ ಧರ್ಮ ಯಾತ್ರೆಯನ್ನು ಕೈಗೊಂಡಿದ್ದರು. ಬ್ರಿಟಿಷರ ಕಾಲದಲ್ಲಿ ಅವರು ಕೇವಲ 19 ವರ್ಷ ವಯಸ್ಸಿನವರಾಗಿದ್ದಾಗ ಅವರಿಗೆ ಕ್ರಾಂತಿಕಾರಿ ಸಾಧು ಎಂದು ಕರೆಯಲಾಗಿತ್ತು ಮತ್ತು ಇದುವರೆಗೂ ಕೂಡ ಅವರನ್ನು ಅದೇ ಹೆಸರಿನಿಂದಲೂ ಕೂಡ ಕರೆಯಲಾಗುತ್ತಿತ್ತು
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.