ನವದೆಹಲಿ: ಭಾನುವಾರ ಬೆಳಗ್ಗೆ ದೆಹಲಿಯ ನಿವಾಸದಲ್ಲಿ ನಿಧನರಾದ ಹಿರಿಯ ವಕೀಲ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿಯವರ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
In the passing away of Shri Ram Jethmalani Ji, India has lost an exceptional lawyer and iconic public figure who made rich contributions both in the Court and Parliament. He was witty, courageous and never shied away from boldly expressing himself on any subject. pic.twitter.com/8fItp9RyTk
— Narendra Modi (@narendramodi) September 8, 2019
ಸರಣಿ ಟ್ವೀಟ್ ಮೂಲಕ ಸಂತಾಸ ಸೂಚಿಸಿರುವ ಪ್ರಧಾನಿ ಮೋದಿ 1975-77ರ ತುರ್ತು ವರ್ಷಗಳಲ್ಲಿ ಜೆಠ್ಮಲಾನಿಯವರ ಸಾರ್ವಜನಿಕ ಸ್ವಾತಂತ್ರ್ಯಕ್ಕಾಗಿ ಧೈರ್ಯ ಮತ್ತು ಹೋರಾಟ ವನ್ನು ನೆನಪಿಸಿಕೊಂಡಿದ್ದಾರೆ.' ರಾಮ್ ಜೇಠ್ಮಲಾನಿ ಅವರ ನಿಧನದಿಂದಾಗಿ ದೇಶ ನ್ಯಾಯಾಲಯ ಮತ್ತು ಸಂಸತ್ತಿನಲ್ಲಿ ಕೊಡುಗೆ ನೀಡಿದ ಅಸಾಧಾರಣ ವಕೀಲ ಮತ್ತು ಅಪ್ರತಿಮ ಸಾರ್ವಜನಿಕ ವ್ಯಕ್ತಿಯನ್ನು ಭಾರತ ಕಳೆದುಕೊಂಡಿದೆ. ಅವರ ಹಾಸ್ಯ , ಧೈರ್ಯಶಾಲಿ ಮತ್ತು ಯಾವುದೇ ವಿಷಯದ ಬಗ್ಗೆ ಧೈರ್ಯವನ್ನು ವ್ಯಕ್ತಪಡಿಸುವುದರಿಂದ ಎಂದಿಗೂ ದೂರ ಸರಿಯಲಿಲ್ಲ 'ಎಂದಿದ್ದಾರೆ.
One of the best aspects of Shri Ram Jethmalani Ji was the ability to speak his mind. And, he did so without any fear. During the dark days of the Emergency, his fortitude and fight for public liberties will be remembered. Helping the needy was an integral part of his persona.
— Narendra Modi (@narendramodi) September 8, 2019
'ರಾಮ್ ಜೇಠ್ಮಲಾನಿ ಅವರ ಉತ್ತಮ ಸಂಗತಿ ಎಂದರೆ ಅವರು ಯಾವಾಗಲೂ ತಮ್ಮ ಮನಸ್ಸಿನಿಂದ ಯಾವುದೇ ಅಂಜಿಕೆಯಿಲ್ಲದೆ ಮಾತನಾಡುತ್ತಿದ್ದರು. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಅವರು ಸಾರ್ವಜನಿಕರ ಸ್ವಾತಂತ್ರ್ಯಕ್ಕಾಗಿ ತೋರಿದ ಧೈರ್ಯ ಮತ್ತು ಹೋರಾಟವನ್ನು ದೇಶ ಸ್ಮರಿಸಲಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮ್ ಜೇಠ್ಮಲಾನಿ ಅವರು 2014 ರಲ್ಲಿ ಮೋದಿಯವರ ಪ್ರಧಾನ ಮಂತ್ರಿಯಾಗುವುದಕ್ಕೆ ಬಲವಾಗಿ ಬೆಂಬಲಿಸಿದ್ದರು, ಇದಕ್ಕಾಗಿ ಅವರನ್ನು ಬಿಜೆಪಿಯಿಂದ ಹೊರಹಾಕಲಾಯಿತು ಎಂದು ಅವರು ಆರೋಪಿಸಿದ್ದರುರೆ. ಆದಾಗ್ಯೂ, ನಂತರದ ವರ್ಷಗಳಲ್ಲಿ ಇಬ್ಬರ ನಡುವಿನ ಸಂಬಂಧಗಳು ಬಿಗಡಾಯಿಸಿದ್ದವು.