ಉತ್ತರಪ್ರದೇಶದಲ್ಲಿ ಭಾರಿ ಮಳೆಗೆ 73 ಸಾವು, ಜನಜೀವನ ಅಸ್ತವ್ಯಸ್ತ

ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದಾರೆ, ಈ ವಾರ ಹಲವಾರು ಪ್ರದೇಶಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. ಪೂರ್ವ ಉತ್ತರ ಪ್ರದೇಶದ ಹೆಚ್ಚಿನ ಜಿಲ್ಲೆಗಳಲ್ಲಿ  ಭಾರೀ ಮಳೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

Last Updated : Sep 29, 2019, 12:06 PM IST
ಉತ್ತರಪ್ರದೇಶದಲ್ಲಿ ಭಾರಿ ಮಳೆಗೆ 73 ಸಾವು, ಜನಜೀವನ ಅಸ್ತವ್ಯಸ್ತ title=
Photo courtesy: ANI

ನವದೆಹಲಿ: ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದಾರೆ, ಈ ವಾರ ಹಲವಾರು ಪ್ರದೇಶಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. ಪೂರ್ವ ಉತ್ತರ ಪ್ರದೇಶದ ಹೆಚ್ಚಿನ ಜಿಲ್ಲೆಗಳಲ್ಲಿ  ಭಾರೀ ಮಳೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಬಿಹಾರದಲ್ಲಿ, ಶುಕ್ರವಾರದಿಂದ ಭಾರಿ ಮಳೆಯ ನಂತರ ಪಾಟ್ನಾದಲ್ಲಿ ಅನೇಕ ಭಾಗಗಳಲ್ಲಿ ಪ್ರಮುಖ ಟ್ರಾಫಿಕ್ ಜಾಮ್ ಮತ್ತು ಜಲಾವೃತಿಗೆ ಕಾರಣವಾಗಿತ್ತು. ಪಾಟ್ನಾ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಭಾರಿ ಮಳೆಯ ಮಧ್ಯೆ ಹಲವಾರು ರೈಲುಗಳನ್ನು ಇಂದು ಬೆಳಿಗ್ಗೆ ರದ್ದುಪಡಿಸಲಾಗಿದೆ. ಶನಿವಾರದಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ಕರೆದರು. 

ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಭಾರಿ ಮಳೆಯಾಗಿದೆ, ಅಲ್ಲಿ ಕಳೆದ ಕೆಲವು ದಿನಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ ಶುಕ್ರವಾರ ದಾಖಲೆಯ ಮಳೆಯಾಗಿದೆ. ರಾಜ್ಯದ ಪೂರ್ವ ಭಾಗಗಳಲ್ಲಿ ಹೆಚ್ಚು ಹಾನಿಯಾಗಿದೆ. ಶನಿವಾರ, ಪ್ರಯಾಗರಾಜ್‌ಗೆ 102.2 ಮಿ.ಮೀ ಮಳೆ ಮತ್ತು ವಾರಣಾಸಿಯಲ್ಲಿ 84.2 ಮಿ.ಮೀ ಮಳೆಯಾಗಿದೆ, ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಪಡೆಯುವುದಕ್ಕಿಂತ ಅಧಿಕ ಎನ್ನಲಾಗಿದೆ.

ಯುಪಿಯ ವಿವಿಧ ಭಾಗಗಳಿಂದ ಶನಿವಾರ ಇಪ್ಪತ್ತಾರು ಸಾವುಗಳು ವರದಿಯಾಗಿವೆ. ಗುರುವಾರ ಮತ್ತು ಶುಕ್ರವಾರ ಮಳೆ ಸಂಬಂಧಿತ ಘಟನೆಗಳಲ್ಲಿ ರಾಜ್ಯಾದ್ಯಂತ ನಲವತ್ತೇಳು ಜನರು ಸಾವನ್ನಪ್ಪಿದ್ದಾರೆ. ಲಕ್ನೋ, ಅಮೆಥಿ, ಹಾರ್ಡೊಯ್ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ, ಭಾರಿ ಮಳೆಯಿಂದಾಗಿ ಶುಕ್ರವಾರ ಮತ್ತು ಶನಿವಾರ ಶಾಲೆಗಳನ್ನು ಮುಚ್ಚಲಾಗಿದೆ.

ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಪೀಡಿತರಿಗೆ ತಕ್ಷಣದ ಪರಿಹಾರವನ್ನು ನೀಡುವಂತೆ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡಲು ತಿಳಿಸಿದ್ದಾರೆ.

Trending News