ಕೊರೋನಾ ಕಾರಣಕ್ಕೆ ಈ‌ ಬಾರಿ ದೆಹಲಿ ರಾಜಪಥದಲ್ಲಿ ಯಾವ ರೀತಿಯ ನಡೆಯಲಿದೆ Republic Day Parade

ಈ ಬಾರಿ ದೈಹಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಆಸನದ ವ್ಯವಸ್ಥೆ ಇರುತ್ತದೆ. 15 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಮತ್ತು ಎಲ್ಲರೂ ಕುಳಿತುಕೊಂಡೇ ವೀಕ್ಷಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಯಾರಿಗಾದರೂ ಕೊರೊನಾ ಲಕ್ಷಣ ಕಂಡುಬಂದರೆ ಅವರನ್ನು ವಿಶ್ರಾಂತಿ ರೂಮ್ ಗಳಿಗೆ ಕಳಿಸಲಾಗುತ್ತದೆ.

Written by - Yashaswini V | Last Updated : Jan 23, 2021, 07:25 AM IST
  • ಈ ಬಾರಿ 26 ರಾಜ್ಯಗಳ ಮತ್ತು 9 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳ ಪ್ರದರ್ಶನ
  • ಕರ್ನಾಟಕ ಸರ್ಕಾರದಿಂದ ಹಂಪಿ - ವಿಜಯನಗರ ಆಡಳಿತದ ಗತವೈಭವದ ಅನಾವರಣ
  • ಬಾಂಗ್ಲಾ ಯುದ್ಧ ಗೆದ್ದ 50ನೇ ವರ್ಷದ ನೆನಪಿಗಾಗಿ ಮೊದಲಿರಲಿದೆ ಬಾಂಗ್ಲಾದೇಶದ ಸೇನಾ ತುಕಡಿ
ಕೊರೋನಾ ಕಾರಣಕ್ಕೆ ಈ‌ ಬಾರಿ ದೆಹಲಿ ರಾಜಪಥದಲ್ಲಿ ಯಾವ ರೀತಿಯ ನಡೆಯಲಿದೆ Republic Day Parade title=
Republic Day 2021

ನವದೆಹಲಿ: ಕೊರೊನಾ ಸಾಂಕ್ರಾಮಿಕ ಕಾಯಿಲೆ (Corona Pandemic)ಯಿಂದಾಗಿ ಎಲ್ಲವೂ ಬದಲಾಗಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು (Republic Day) ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನ ಈ ಬಾರಿ ಬಹಳ ಭಿನ್ನವಾಗಿರಲಿದೆ.

ಗಣರಾಜ್ಯೋತ್ಸವದ ದಿನ ದೆಹಲಿಯ ರಾಜಪಥದಲ್ಲಿ  (Rajpath) ನಡೆಯುವ ಪಥಸಂಚಲವನ್ನು (Parade) ದೇಶದ ಹೆಮ್ಮೆಯ ಪ್ರತೀಕ ಎನ್ನಲಾಗುತ್ತದೆ. 'ಪ್ರತಿಷ್ಠಿತ' ಎನ್ನಲಾಗುತ್ತದೆ. ಭಾರತ ಗಣತಂತ್ರವಾದ ದಿನಕ್ಕೆ ವಿಶೇಷ ಮಹತ್ವ. ಗಣತಂತ್ರಗೊಂಡ ದಿವಸದಂದು ದೇಶದ ಸಾಮರ್ಥ್ಯ, ಸಂಸ್ಕೃತಿಗಳನ್ನು ಜಗತ್ತಿಗೆ ಎದೆಯುಬ್ಬಿಸಿ ಹೇಳುವುದು ವಾಡಿಕೆ. ಹಾಗಾಗಿ ಪಥಸಂಚಲನ ನೋಡಲು, ಆ ಸಂಭ್ರಮವನ್ನು ಸವಿಯಲು ಗಣ್ಯಾತಿಗಣ್ಯರೇ ಕಾತರದಿಂದಿರುತ್ತಾರೆ. ಆದರೆ ಈ ಬಾರಿ ಕೊರೋನಾ ಕಾರಣಕ್ಕೆ ಎಲ್ಲವೂ ಬದಲಾಗಿಬಿಟ್ಟಿದೆ.

ಇದನ್ನೂ ಓದಿ - ಗಣರಾಜ್ಯೋತ್ಸವ: ಜನವರಿ ಮಾಹೆಯಲ್ಲಿ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ

ಈಗಾಗಲೇ ದೆಹಲಿಯ ಆಮಿರ್ ಕಂಟೋನ್ಮೆಂಟ್ ಪ್ರದೇಶದಲ್ಲಿ ದೇಶದ ವಿವಿಧ ರಾಜ್ಯಗಳ 26 ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 9 ಸ್ತಬ್ದಚಿತ್ರಗಳು ಸಿದ್ದಗೊಂಡಿವೆ. ಕರ್ನಾಟಕ ಸರ್ಕಾರವು (Karnataka Government) ಯುನೆಸ್ಕೋದಿಂದ (United Nations Educational, Scientific and Cultural Organization) ವಿಶ್ವ ಪಾರಂಪರಿಕ ತಾಣ (World Heritage Center) ಎಂದು ಗುರುತಿಸಲ್ಪಟ್ಟಿರುವ ಹಂಪಿ - ವಿಜಯನಗರ ಆಡಳಿತದ ವೈಭವವನ್ನು ಅನಾವರಣಗೊಳಿಸಲಿದೆ. 1971ರ ಬಾಂಗ್ಲಾ (Bangladesh) ವಿಮೋಚನಾ ಯುದ್ಧದಲ್ಲಿ ವಿಜಯ ಸಾಧಿಸಿದ  50ನೇ ವರ್ಷದ ನೆನಪಿಗಾಗಿ ಬಾಂಗ್ಲಾದೇಶದ ಸೇನಾ ತುಕಡಿ ಮೆರವಣಿಗೆಯ ಮೊದಲಿಗಿರುತ್ತದೆ. ಇಂದು ಪೂರ್ವ ಪ್ರದರ್ಶನ (Beating Retreat) ಕೂಡ ನಡೆಯುತ್ತದೆ. 

ಕೊರೊನಾ ಕಾರಣಕ್ಕೆ ಪಥಸಂಚಲನದಲ್ಲಿ ದೈಹಿಕ ಅಂತರ (Social Distance) ಕಾಪಾಡುವ ದೃಷ್ಟಿಯಿಂದ ಕಡಿಮೆ ಸಂಖ್ಯೆಯ ಕಲಾವಿದರು ಇರಬೇಕು ಎಂದು ರಕ್ಷಣಾ ಇಲಾಖೆ (Defence Ministry) ಸೂಚನೆ ನೀಡಿದೆ. ಇಷ್ಟು ವರ್ಷ ಒಂದೊಂದು ಸ್ತಬ್ದಚಿತ್ರದೊಂದಿಗೂ 25ರಿಂದ 30 ಕಲಾವಿದರು ಇರುತ್ತಿದ್ದರು. ಈ ಬಾರಿ 12 ಕಲಾವಿದರು ಇರಲು ಮಾತ್ರ ಅವಕಾಶ ನೀಡಲಾಗಿದೆ. ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗದ ರಂಗಾಯಣದ 8 ಪುರುಷ ಮತ್ತು 4 ಮಹಿಳಾ ಕಲಾವಿದರು ಇರಲಿದ್ದಾರೆ.

ಇದನ್ನೂ ಓದಿ - 55 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸಕ್ಕೆ ಯಾವುದೇ ವಿದೇಶಿ ಅತಿಥಿ ಇಲ್ಲ....!

ಸೀಟುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ :
ಈವರೆಗೆ ದೆಹಲಿಯ ರಾಜಪಥದ ಇಕ್ಕೆಲಗಳಲ್ಲಿ 1.25 ಲಕ್ಷ ಸೀಟುಗಳ ವ್ಯವಸ್ಥೆ ಇರುತ್ತಿತ್ತು. ಈ ಬಾರಿ 25 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ದೈಹಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಆಸನದ ವ್ಯವಸ್ಥೆ ಇರುತ್ತದೆ. ಇಷ್ಟು ವರ್ಷ ಮಕ್ಕಳು ಕೂಡ ಪಥಸಂಚಲನ ನೋಡಬಹುದಿತ್ತು. ಈ ಬಾರಿ 15 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಎಂಬ ನಿಯಮ ರೂಪಿಸಲಾಗಿದೆ. ಇಷ್ಟು ವರ್ಷ ಕೆಲವರು ನಿಂತುಕೊಂಡು ‌ಕೂಡ ಪೆರಡ್ ಸಾಗುವುದನ್ನು ನೋಡುತ್ತಿದ್ದರು. ಈ ಬಾರಿ ಎಲ್ಲರೂ ಕುಳಿತುಕೊಂಡೇ ವೀಕ್ಷಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ಇದಲ್ಲದೆ ಪಥಸಂಚಲನ ವೀಕ್ಷಣೆ ಮಾಡಲು ಬಂದ ಸಂದರ್ಭದಲ್ಲಿ ಯಾರಿಗಾದರೂ ಕೊರೊನಾ ಲಕ್ಷಣ ಕಂಡುಬಂದರೆ ಅವರನ್ನು ವಿಶ್ರಾಂತಿ ರೂಮ್ ಗಳಿಗೆ ಕಳಿಸಲಾಗುತ್ತದೆ. ಅದಕ್ಕಾಗಿ 8 ವಿಶ್ರಾಂತಿ ರೂಮ್ ಗಳನ್ನು ರೂಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News