Viral News: ಆಮೆ ಪದಾರ್ಥ ಸುಟ್ಟಿತೆಂದು ಹೆಂಡತಿಯನ್ನೇ ಕೊಂದುತಿಂದ ಪತಿ!

ಸ್ಥಳೀಯ ಪೊಲೀಸರ ಪ್ರಕಾರ, ರಂಜನ್ ಬಡಿಂಗ್ (36) ಸುಮಾರು ಒಂದು ತಿಂಗಳ ಹಿಂದೆ ಅಪರಾಧದ ದಿನದಂದು ಸಂಬಲ್‌ಪುರ ನಗರದ ನೈರುತ್ಯಕ್ಕೆ 166 ಕಿಮೀ ದೂರದಲ್ಲಿರುವ ಬದ್ಮಾಲ್ ಪಂಚಾಯತ್‌ನ ರೌತ್‌ಪಾರಾ ಗ್ರಾಮದ ತನ್ನ ಮನೆಗೆ ಅಕ್ರಮವಾಗಿ ಆಮೆಯನ್ನು ತಂದಿದ್ದ. ನಂತರ ಅವನು ತನ್ನ ಹೆಂಡತಿ ಸಾಬಿತ್ರಿಗೆ ಅದನ್ನು ಪದಾರ್ಥ ಮಾಡಲು ಹೇಳಿದ್ದಾನೆ.

Written by - Bhavishya Shetty | Last Updated : Oct 22, 2022, 09:12 PM IST
    • ಆಮೆ ಪದಾರ್ಥ ಸುಟ್ಟುಹೋಯಿತು ಎಂಬ ಕೋಪ
    • ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಹಾಕಿದ್ದಾನೆ
    • ಪಶ್ಚಿಮ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದ ಘಟನೆ
Viral News: ಆಮೆ ಪದಾರ್ಥ ಸುಟ್ಟಿತೆಂದು ಹೆಂಡತಿಯನ್ನೇ ಕೊಂದುತಿಂದ ಪತಿ! title=
Husband Killed Wife

ಅಡುಗೆ ಮಾಡುವಾಗ ಆಮೆ ಪದಾರ್ಥ ಸುಟ್ಟುಹೋಯಿತು ಎಂಬ ಕೋಪದಿಂದ ಕುಡುಕ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಆಕೆಯ ಶವವನ್ನು ತನ್ನ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾನೆ. ಈ ಘಟನೆ ಪಶ್ಚಿಮ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. 35 ವರ್ಷದ ಮಹಿಳೆಯ ಶವವನ್ನು ಗುರುವಾರ ಹೊರತೆಗೆಯಲಾಯಿತು. ಆಕೆಯ ಪತಿಯೇ ಈ ಕೃತ್ಯ ಎಸಗಿದ್ದು,  ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಾಣೆಯಾಗಿದ್ದಾಳೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದ. ಬಳಿಕ ಪೊಲೀಸರು ತನಿಖೆ ನಡೆಸಿದ್ದು, ನಂತರ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಕಾರು, ರಟ್ಟಿನ ಬಾಕ್ಸ್ & ಬೆಡ್‌ಗಳಲ್ಲಿ 8 ಕೋಟಿ ನಗದು ಪತ್ತೆ; ನಾಲ್ವರ ಬಂಧನ!

ಸ್ಥಳೀಯ ಪೊಲೀಸರ ಪ್ರಕಾರ, ರಂಜನ್ ಬಡಿಂಗ್ (36) ಸುಮಾರು ಒಂದು ತಿಂಗಳ ಹಿಂದೆ ಅಪರಾಧದ ದಿನದಂದು ಸಂಬಲ್‌ಪುರ ನಗರದ ನೈರುತ್ಯಕ್ಕೆ 166 ಕಿಮೀ ದೂರದಲ್ಲಿರುವ ಬದ್ಮಾಲ್ ಪಂಚಾಯತ್‌ನ ರೌತ್‌ಪಾರಾ ಗ್ರಾಮದ ತನ್ನ ಮನೆಗೆ ಅಕ್ರಮವಾಗಿ ಆಮೆಯನ್ನು ತಂದಿದ್ದ. ನಂತರ ಅವನು ತನ್ನ ಹೆಂಡತಿ ಸಾಬಿತ್ರಿಗೆ ಅದನ್ನು ಪದಾರ್ಥ ಮಾಡಲು ಹೇಳಿದ್ದಾನೆ. ಅವನು ಹೇಳಿದಂತೆ ಅಡುಗೆ ಮಾಡುವಾಗ ಕೊಂಚ ಸುಟ್ಟುಹೋಗಿದೆ, ಇದು ವಾಗ್ವಾದಕ್ಕೆ ಕಾರಣವಾಯಿತು.

ಇದರಿಂದ ಕೋಪಗೊಂಡ ರಂಜನ್ ಹೆಂಡತಿಯನ್ನು ತೀವ್ರವಾಗಿ ಥಳಿಸಿ, ಅವಳು ಪ್ರಜ್ಞಾಹೀನಳಾಗಿ ಬಿದ್ದ ನಂತರ ಮನೆಯಿಂದ ಹೊರಟು ಹೋಗಿದ್ದಾನೆ. ಮತ್ತೆ ಮನೆಗೆ ಹಿಂದಿರುಗಿದಾಗ ಆಕೆ ಸತ್ತು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ ಶವವನ್ನು ಮನೆಯ ಹಿತ್ತಲಲ್ಲಿ ಹೂತಿಟ್ಟು ಸಾಬಿತ್ರಿ ಕೋಪದಿಂದ ಹೊರಟು ಹೋಗಿದ್ದಾಳೆ ಎಂದು ಎಲ್ಲರಿಗೂ ತಿಳಿಸಿದ್ದಾನೆ ಎಂದು ಜಾಮನಕಿರಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರೇಮ್‌ಜಿತ್ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ:  Aadhar for Marriage: ಇನ್ಮುಂದೆ ಆಧಾರ್ ಇದ್ದರೆ ಮಾತ್ರ ಮದುವೆ! ಹೊಸ ನಿಯಮ ಜಾರಿ

ಮಗಳು ನಾಪತ್ತೆಯಾಗಿರುವ ಬಗ್ಗೆ ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಗ್ರಾಮಕ್ಕೆ ತೆರಳಿ ಪತ್ನಿಯ ಬಗ್ಗೆ ಕೇಳಿದಾಗ ಆತ ಸ್ಥಳದಿಂದ ಓಡಿ ಹೋಗಿದ್ದಾನೆ. ಆ ವ್ಯಕ್ತಿಯನ್ನು ಪೊಲೀಸ್ ತಂಡ ಮತ್ತು ಗ್ರಾಮಸ್ಥರು ಹಿಡಿದಿದ್ದು, ನಂತರ ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News