UP Election 2022: ರಾಮಭಕ್ತರಿಗೆ ಗುಂಡು ಹಾರಿಸಿದವರು ಮತ ಪಡೆಯುತ್ತಾರಾ ಎಂದು ಗುಡುಗಿದ ಯೋಗಿ

ಯುಪಿಯ ಅಯೋಧ್ಯೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ‘ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರಿಗೆ ಮತ ಹಾಕಬೇಡಿ’ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Feb 22, 2022, 03:40 PM IST
  • ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ
  • ಶ್ರೀರಾಮನ ಭಕ್ತರ ಮೇಲೆ ಗುಂಡು ಹಾರಿಸಿದ ವ್ಯಕ್ತಿಗೆ ಮತ ಹಾಕಬೇಡಿ ಎಂದು ಮನವಿ
  • ಸಹೋದರ-ಸಹೋದರಿಯರೇ ಈ ಪಾಪವನ್ನು ಎಂದಿಗೂ ಮಾಡಬೇಡಿ ಎಂದ ಯೋಗಿ
UP Election 2022: ರಾಮಭಕ್ತರಿಗೆ ಗುಂಡು ಹಾರಿಸಿದವರು ಮತ ಪಡೆಯುತ್ತಾರಾ ಎಂದು ಗುಡುಗಿದ ಯೋಗಿ title=
ಅಖಿಲೇಶ್ ಯಾದವ್ ವಿರುದ್ಧ ಯೋಗಿ ಗುಡುಗು

ಅಯೋಧ್ಯೆ: ಉತ್ತರಪ್ರದೇಶ ವಿಧಾನಸಭಾ ಚುನಾವಣೆ(UP Election 2022)ಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಸಾರ್ವಜನಿಕ ಸಭೆ ನಡೆಸುತ್ತಾ ಮತಬೇಟೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಯುಪಿಯ ಅಯೋಧ್ಯೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್(Yogi Adityanath), ‘ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರಿಗೆ ಮತ ಹಾಕಬೇಡಿ’ ಎಂದು ಹೇಳಿದ್ದಾರೆ.

ಮತದಾರರಿಗೆ ಸಿಎಂ ಯೋಗಿ ಮನವಿ

‘ರಾಮಭಕ್ತರ ಮೇಲೆ ಗುಂಡು ಹಾರಿಸಿದ ವ್ಯಕ್ತಿಗಳಿಗೆ ಮತ ಸಿಗುತ್ತಾ’ ಅಂತಾ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇಂತಹ ವ್ಯಕ್ತಿಗಳಿಗೆ ಮತ ಹಾಕುವ ಈ ಪಾಪವನ್ನು ಎಂದಿಗೂ ಮಾಡಬೇಡ!’ ಅಂತಾ ಮತದಾರರಿಗೆ ಯೋಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Dark Web:ಕಪ್ಪು ವ್ಯವಹಾರಗಳ ಗುಹೆಯಾಗಿರುವ ಇಂಟರ್ನೆಟ್ ಜಗತ್ತು! ಡಾರ್ಕ್ ವೆಬ್ ಬಗ್ಗೆ ನಿಮಗೆಷ್ಟು ಗೊತ್ತು?

 ಅಖಿಲೇಶ್ ಯಾದವ್ ವಿರುದ್ಧ ಯೋಗಿ ವಾಗ್ದಾಳಿ

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್(Akhilesh Yadav) ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಅಖಿಲೇಶ್ ಗೆ ಎಚ್ಚರವಾಗಿದೆ. ನಾವೂ ಕೂಡ ಅಯೋಧ್ಯೆಗೆ ಹೋಗಬೇಕೆಂದು ಅವರಿಗೆ ಈಗ ನೆನಪಾಗಿದೆ’ ಅಂತಾ ಕುಟುಕಿದ್ದಾರೆ.

ರಾಮಭಕ್ತರ ಮೇಲೆ ಗುಂಡು ಹಾರಿಸುತ್ತಿದ್ದರು

‘ಈ ಹಿಂದೆ ರಾಮನ ಭಕ್ತರ ಮೇಲೆ ಗುಂಡು ಹಾರಿಸುತ್ತಿದ್ದರು. ರಾಮಭಕ್ತರ(Devotees of Ram)ಮೇಲೆ ಗುಂಡು ಹಾರಿಸಿದ ವ್ಯಕ್ತಿ ಅಯೋಧ್ಯೆಯಲ್ಲಿ, ಬಿಕಾಪುರದಲ್ಲಿ ಅಥವಾ ಮಿಲ್ಕಿಪುರದಲ್ಲಿ ಮತ ಪಡೆಯುತ್ತಾನಾ? ಸಹೋದರ-ಸಹೋದರಿಯರೇ ಈ ಪಾಪವನ್ನು ಎಂದಿಗೂ ಮಾಡಬೇಡಿ’ ಅಂತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ IED ಹೊಂದಿದ್ದ ಇಬ್ಬರು ಉಗ್ರರ ಬಂಧನ, ಮಹಾ ಸಂಚು ಬಯಲು

ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Election 2022)ಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಕೂಡ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಯುಪಿಯಲ್ಲಿ 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಫೆಬ್ರವರಿ 23ರಂದು ಯುಪಿಯಲ್ಲಿ 4ನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News