ಪೆಟ್ರೋಲ್ ಬ್ಯಾಂಕ್ಗಳಲ್ಲಿ ಮೊಬೈಲ್ ಬಳಸದಿರಿ!

ಪೆಟ್ರೋಲ್ ಬಂಕ್ಗೆ ಬರುವವರಿಗೆ ಮೊಬೈಲ್ ಫೋನ್ ಬಳಕೆಯಿಂದ ದೂರ ಉಳಿಯುವಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. 

Last Updated : Dec 14, 2017, 06:36 PM IST
ಪೆಟ್ರೋಲ್ ಬ್ಯಾಂಕ್ಗಳಲ್ಲಿ ಮೊಬೈಲ್ ಬಳಸದಿರಿ! title=

ಪೆಟ್ರೋಲ್ ಬ್ಯಾಂಕ್ ಗಳಲ್ಲಿ ಮೊಬೈಲ್ ಫೋನ್ ಗಳನ್ನು ಬಳಸುವಂತಿಲ್ಲ ಎಂದು ಎಷ್ಟೇ ಹೇಳಿದರೂ ಜನರು ಮೊಬೈಲ್ ಬಳಕೆಯನ್ನು ನಿಲ್ಲಿಸುವುದೇ ಇಲ್ಲ. ಹೀಗೆ ಸಲಹೆಗಳನ್ನು ನಿರ್ಲಕ್ಷಿಸಿದ್ದರಿಂದ ಆದಂತಹ ಅನಾಹುತ ಏನು ಗೊತ್ತೇ? ಭೀಕರವಾದದ್ದು. ಹೈದರಾಬಾದ್ ಪೊಲೀಸರು ಅಂತಹ ಒಂದು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವೀಕ್ಷಿಸಿ...

ಎಚ್ಚರಿಕೆಯಿಂದ ಗಮನಿಸಿ : 
ಈಗ ನೀವು ನೋಡಿದ ವಿಡಿಯೋ ಹೈದರಾಬಾದ್ ನ ಒಂದು ಪೆಟ್ರೋಲ್ ಬಂಕ್ನದ್ದಾಗಿದೆ. ಅಲ್ಲಿಗೆ ಪೆಟ್ರೋಲ್ ತುಂಬಿಸಲೆಂದು ಓರ್ವ ವ್ಯಕ್ತಿ  ಒಂದು ಮಗುವಿನೊಂದಿಗೆ ಬೈಕ್ನಲ್ಲಿ ಬರುತ್ತಾನೆ. ಪೆಟ್ರೋಲ್ ತುಂಬಿಸುವ ಸಂದರ್ಭದಲ್ಲಿ ಮೊಬೈಲ್ ರಿಂಗ್ ಆಗುತ್ತದೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿಯ ಬೈಕ್ಗೆ ಕೆಳಭಾಗದಿಂದ ಇದ್ದಕ್ಕಿದ್ದಂತೆ ಬೆಂಕಿ ಆವರಿಸಿಕೊಳ್ಳುತ್ತದೆ. ಆದರೆ, ಅದೃಷ್ಟವಶಾತ್ ಮಗು ಹಾಗೂ ಆ ವ್ಯಕ್ತಿ ಬೆಂಕಿಯಿಂದ ತಪ್ಪಿಸಿಕೊಂಡರಾದರೂ ಅನಾಹುತ ಸಂಭವಿಸಿದ್ದಾರೆ ಅದರಿಂದಾಗುತ್ತಿದ್ದ ನಷ್ಟ ನಿಜಕ್ಕೂ ಊಹೆಗೂ ನಿಲುಕದ್ದು!

ಮೊಬೈಲ್ ಬಳಕೆಯಿಂದಾಗುವ ಅಪಾಯವೇನು?
ಮೊಬೈಲ್ ಟವರ್ ನ ತರಂಗಗಳು ವಿದ್ಯುತ್ಕಾಂತೀಯ ವಿಕಿರಣ ಶ್ರೇಣಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಈ ವಿದ್ಯುತ್ಕಾಂತೀಯ ವಿಕಿರಣವು ಸಣ್ಣ ಘರ್ಷಣೆಗೆ ಪ್ರತಿಕ್ರಿಯಿಸಬಹುದಾದ ಮೊಬೈಲ್ ಫೋನ್ಗಳಿಂದ ಪ್ರಭಾವಿತವಾಗಿರುತ್ತದೆ. ಇದರಿಂದಾಗಿ ಬೆಂಕಿ ಹತ್ತಿಕೊಳ್ಳುವ ಸಂಭವವೂ ಹೆಚ್ಚು. 

ಪೊಲೀಸ್ ಎಚ್ಚರಿಕೆ
ಈ ಘಟನೆಯು ಎಲ್ಲಿ ನಡೆದಿದೆಯೆಂದು ಪೊಲೀಸರು ಬಹಿರಂಗಪಡಿಸಲಿಲ್ಲ. ಆದರೆ ಪೆಟ್ರೋಲ್ ಬಂಕ್ಗೆ ಬರುವವರಿಗೆ ಮೊಬೈಲ್ ಫೋನ್ ಬಳಕೆಯಿಂದ ದೂರ ಉಳಿಯುವಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಈ ನಿಯಮವನ್ನು ಉಲ್ಲಘಿಸದಂತೆ ಸಾರ್ವಜನಿಕರಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಲಾಗುತ್ತಿದೆ. 

Trending News