ಜನವರಿ 1ರಿಂದ ATMಗೆ ಹೋಗುವ ಮುನ್ನ ಈ ಕೆಲಸ ಮಾಡಲು ಮರೆಯದಿರಿ

ಬರುವ ಜನವರಿ 1ರಿಂದ ಒಂದು ವೇಳೆ ರಾತ್ರಿ 8ಗಂಟೆಯ ಬಳಿಕ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATMಗೆ ಹಣ ವಿಥ್ ಡ್ರಾ ಮಾಡಲು ಹೋದರೆ ನಿಮ್ಮ ಜೊತೆ ಮೊಬೈಲ್ ಕೊಂಡೊಯ್ಯಲು ಮರೆಯದಿರಿ.  

Written by - Nitin Tabib | Last Updated : Dec 27, 2019, 08:14 PM IST
ಜನವರಿ 1ರಿಂದ ATMಗೆ ಹೋಗುವ ಮುನ್ನ ಈ ಕೆಲಸ ಮಾಡಲು ಮರೆಯದಿರಿ title=

ನವದೆಹಲಿ:ಹೊಸವರ್ಷ ಅಂದರೆ ಜನವರಿ 2020ರಿಂದ ಒಂದು ವೇಳೆ ರಾತ್ರಿ 8 ಗಂಟೆಯ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ATMಗಳಿಂದ ಹೆಚ್ಚಿನ ಮೊತ್ತದ ಹಣ ಡ್ರಾ ಮಾಡಬೇಕಾದರೆ ನಿಮ್ಮ ಬಳಿ ಮೊಬೈಲ್ ಇರುವುದು ಅತ್ಯಾವಶ್ಯಕವಾಗಿದೆ. ಏಕೆಂದರೆ ಹೊಸವರ್ಷದಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಮಧ್ಯೆಒಂದು ವೇಳೆ ನೀವು ಹಣ ಡ್ರಾ ಮಾಡುತ್ತಿದ್ದರೆ, ಒನ್ ಟೈಮ್ ಪಾಸ್ವರ್ಡ್ ನಮೂದಿಸುವುದನ್ನು ಕಡ್ಡಾಯಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಆದರೆ, 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವಿಥ್ ಡ್ರಾಗೆ ಈ ಷರತ್ತು ಅನ್ವಯಿಸಲಿದೆ.

ನಿಮ್ಮ ಡೆಬಿಟ್ ಕಾರ್ಡ್ ಅನ್ನು ATMಗೆ ಯಂತ್ರಕ್ಕೆ ಹಾಕಿ ಇತರೆ ಮಾಹಿತಿ ನಮೂದಿಸಿದ ಬಳಿಕ ನಿಮಗೆ OTP ಕೇಳಲಾಗುವುದು. ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬಂದ OTPಯನ್ನು ನಮೂದಿಸಿದ ಬಳಿಕ ಮಾತ್ರವೇ ನೀವು ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ. ATMಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಹಾಗೂ ಖಾತೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು SBI ಈ ನಿರ್ಣಯ ಕೈಗೊಂಡಿದೆ. ಆದರೆ, ಒಂದು ವೇಳೆ SBI ಗ್ರಾಹಕರು ಇತರೆ ಯಾವುದಾದರೊಂದು ಬ್ಯಾಂಕ್ ATMನಿಂದ ಹಣ ಡ್ರಾ ಮಾಡಿದರೆ OTP ಅಗತ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ.

ಸದ್ಯ SBI ಈ ವ್ಯವಸ್ಥೆಯನ್ನು ತನ್ನ ಬ್ಯಾಂಕಿನ ATMಗಳಿಗೆ ಮಾತ್ರ ಸೀಮಿತಗೊಳಿಸಿದೆ. ದೇಶಾದ್ಯಂತ ATM ಸೇವೆ ನಿರ್ವಹಿಸುವ ನ್ಯಾಷನಲ್ ಫೈನಾನ್ಸಿಯಲ್ ಸ್ವಿಚ್  ನಲ್ಲಿ ಇರುವರೆಗೆ ಇಂತಹ ವ್ಯವಸ್ಥೆ ಮಾಡಲಾಗಿಲ್ಲ.

SBI ಗ್ರಾಹಕರೇ ಇತ್ತ ಗಮನ ಕೊಡಿ
- ಜನವರಿ 1ರಿಂದ ATMಗೆ ಹೋಗುವಾಗ ಮೊಬೈಲ್ ಕೊಂಡೊಯ್ಯುವುದನ್ನು ಮರೆಯದಿರಿ.
- 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಪಡೆಯಲು OTP ಕಡ್ಡಾಯ.
- ರಾತ್ರಿ 8ಗಂಟೆಯಿಂದ ಬೆಳಿಗ್ಗೆ 8 ಗಂಟೆಯ ಒಳಗಿನ ವಿಥ್ ಡ್ರಾಗೆ ಈ ನಿಯಮ ಅನ್ವಯ.
- ATMಗಳಲ್ಲಿ ಇತರ ಮಾಹಿತಿ ನಮೂದಿಸಿದ ಬಳಿಕ OTP ನಮೂದಿಸುವುದು ಕಡ್ಡಾಯ.
- ಇತರೆ ಬ್ಯಾಂಕ್ ಗಳ ATMನಿಂದ ಹಣ ಪಡೆಯಲು OTP ನಿಯಮ ಅನ್ವಯಿಸುವುದಿಲ್ಲ.
- ಗ್ರಾಹಕರಿಗಾಗುವ ಮೋಸ ತಡೆಯಲು ಬ್ಯಾಂಕ್ ನಿಂದ ಈ ಕ್ರಮ ಎನ್ನಲಾಗಿದೆ.

Trending News