ಗುಜರಾತ್ ಚುನಾವಣೆಗೆ ನಮ್ಮನ್ನು ಎಳೆಯುವುದನ್ನು ನಿಲ್ಲಿಸಿ-ಮೋದಿಗೆ ಪಾಕಿಸ್ತಾನ ತಾಕೀತು

     

Last Updated : Dec 11, 2017, 01:19 PM IST
 ಗುಜರಾತ್ ಚುನಾವಣೆಗೆ ನಮ್ಮನ್ನು ಎಳೆಯುವುದನ್ನು ನಿಲ್ಲಿಸಿ-ಮೋದಿಗೆ ಪಾಕಿಸ್ತಾನ ತಾಕೀತು title=

ನವದೆಹಲಿ: ಇತ್ತೀಚಿಗೆ  ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎಂದು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ  ಪ್ರತಿಯಾಗಿ ಉತ್ತರ ನೀಡಿರುವ ಪಾಕಿಸ್ತಾನ ಭಾರತವು ಚುನಾವಣಾ ಚರ್ಚೆಯಲ್ಲಿ ಪಾಕಿಸ್ತಾನವನ್ನು ಎಳೆದು ತರುವುದನ್ನು ನಿಲ್ಲಿಸಬೇಕು. ಅದರ ಬದಲಾಗಿ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಚುನಾವಣೆಯನ್ನು ಗೆಲ್ಲಬೇಕು ಎಂದು ಅದು  ಪ್ರಧಾನಿ ನರೇಂದ್ರ ಮೋದಿಯವರಿಗೆ ತಾಕೀತು ಮಾಡಿದೆ. ಅಲ್ಲದೆ ಅವರು ಮಾಡುತ್ತಿರುವ ಎಲ್ಲ ಆರೋಪ ಆಧಾರರಹಿತ ಎಂದು ಅದು ಪ್ರಧಾನಿಗಳ ಹೇಳಿಕೆಯನ್ನು ಖಂಡಿಸಿದೆ. 

;

ಈ ಕುರಿತಾಗಿ ಪಾಕಿಸ್ತಾನದ ವಿದೇಶಿ ವ್ಯವಹಾರಗಳ ವಕ್ತಾರ  ಮೊಹಮ್ಮದ  ಫೈಸಲ್  ತಮ್ಮ ಟ್ವಿಟ್ಟರ್ ಮೂಲಕ  ಪ್ರಧಾನಮಂತ್ರಿಗಳ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿಯವರು ಮಣಿಶಂಕರರ ನೀಚ್ ಹೇಳಿಕೆಯು ಪ್ರಮುಖವಾಗಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ  ಹೈಕಮಿಷನರ್,ರಂತಹ ನಾಯಕರನ್ನು ಮಣಿಶಂಕರ್ ಅಯ್ಯರ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು ಸೇರಿ ಅಯ್ಯರ್ ರವರ ಮನೆಯಲ್ಲಿ ಭೇಟಿಯಾಗಿದ್ದರು ಅನಂತರ ಈ ಹೇಳಿಕೆ ಬಂದಿದೆ ಎಂದು ಮೋದಿ ಆರೋಪಿಸಿದ್ದರು.  

Trending News