ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ತಪ್ಪಿಯೂ ಈ ತಪ್ಪು ಮಾಡಬಾರದು..!

 ನೀವು ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಖಂಡಿತವಾಗಿ ಈ ತಪ್ಪುಗಳನ್ನು ಮಾಡಬಾರದು.  ಹೈವೇ ಡ್ರೈವಿಂಗ್ ವೇಳೆ ಮಾಡುವ ಒಂದು ಸಣ್ಣ ತಪ್ಪಿಗೆ ಅತಿ ದೊಡ್ಡ ಬೆಲೆ ತೆರಬೇಕಾದೀತು. 

Written by - Ranjitha R K | Last Updated : Jun 16, 2021, 04:09 PM IST
  • ನೀವು ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಖಂಡಿತವಾಗಿ ಈ ತಪ್ಪುಗಳನ್ನು ಮಾಡಬಾರದು.
  • ಹೈವೇ ಡ್ರೈವಿಂಗ್ ವೇಳೆ ಮಾಡುವ ಒಂದು ಸಣ್ಣ ತಪ್ಪಿಗೆ ಅತಿ ದೊಡ್ಡ ಬೆಲೆ ತೆರಬೇಕಾದೀತು
  • ಇಲ್ಲಿ ಹೇಳಲಾಗಿರುವ ಹೈವೇ ಡ್ರೈವಿಂಗ್ ಟಿಪ್ಸ್ ಅನುಸರಿಸಿ
ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ತಪ್ಪಿಯೂ ಈ ತಪ್ಪು ಮಾಡಬಾರದು..! title=
ಹೈವೇ ಡ್ರೈವಿಂಗ್ ಟಿಪ್ಸ್ ಅನುಸರಿಸಿ (file photo Zee news)

ನವದೆಹಲಿ : ನೀವು ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಖಂಡಿತವಾಗಿ ಈ ತಪ್ಪುಗಳನ್ನು ಮಾಡಬಾರದು.  ಹೈವೇ ಡ್ರೈವಿಂಗ್ (Highway driving) ವೇಳೆ ಮಾಡುವ ಒಂದು ಸಣ್ಣ ತಪ್ಪಿಗೆ ಅತಿ ದೊಡ್ಡ ಬೆಲೆ ತೆರಬೇಕಾದೀತು.  ಇವತ್ತು ನಾವು ನಿಮಗೆ ಹೈವೇಯಲ್ಲಿ ವಾಹನ ಚಲಾಯಿಸುವಾಗ ಯಾವ ತಪ್ಪು ಮಾಡಬಾರದು ಎಂಬ ವಿಚಾರ ಹೇಳುತ್ತೇವೆ. 

1. ಸ್ಪೀಡ್ (Speed):
ಸ್ಪೀಡ್ ಯಾವತ್ತಿಗೂ ದುರ್ಘಟನೆಗೆ ಕಾರಣವಾಗಬಹುದು. ಹೈವೆಗೆ (Highway) ಪ್ರವೇಶ ಮಾಡುವಾಗ ವಾಹನದ ಸ್ಪೀಡ್ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿ. ಹೈವೇಗೆ ಟಚ್ ಆದ ಕೂಡಲೇ ವಾಹನದ ಸ್ಪೀಡ್ ಏರಿಕೆ ಮಾಡಬೇಡಿ. ಅಚಾನಕ್ ಸ್ಪೀಡ್ ಹೆಚ್ಚಿಗೆ ಮಾಡಿದರೆ, ದೇಹ ಆ ಸ್ಪೀಡಿಗೆ ಒಗ್ಗುವ ಸ್ಥಿತಿಯಲ್ಲಿರುವುದಿಲ್ಲ. ಇದರಿಂದ ದುರ್ಘಟನೆಗಳಾಗಬಹುದು.

ಇದನ್ನೂ ಓದಿ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪ - Mithun Chakraborty ವಿಚಾರಣೆ ನಡೆಸಿದ ಪೊಲೀಸರು

2. ಓವರ್ ಟೇಕ್ (Overtake)
ತಿರುವಿನಲ್ಲಿ ಖಂಡಿತಾ ಓವರ್ ಟೇಕ್ (Overtake) ಮಾಡಬೇಡಿ. ತಿರುವು ಕೊನೆಗೊಂಡ ಬಳಿಕ ಮಾತ್ರ ಓವರ್ ಟೇಕ್ ಮಾಡಿ

3.ಹೈಬೀಮ್ ಲೈಟ್  (high beam light) :

ರಾತ್ರಿ ಹೊತ್ತು ಹೈಬೀಮ್ ಲೈಟ್ ಬಳಸಿ (dont use high beam light) ವಾಹನ ಚಲಾಯಿಸಬೇಡಿ.  ಇದರಿಂದ  ಎದುರಿದ್ದವರಿಗೆ ನಿಮ್ಮ ವಾಹನದ ದೂರ ಅಂದಾಜಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : Railway Ticket Booking : ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ :‌ UPI ಮೂಲಕ ಟಿಕೆಟ್ ಬುಕ್‌ ಮಾಡಿದ್ರೆ ಶೇ.5 ರಷ್ಟು ಡಿಸ್ ಕೌಂಟ್!

4. ಬಲಭಾಗದ ಮೂರನೇ ಲೇನ್: 
ಹೈವೇಯಲ್ಲಿ ಓವರ್ ಟೇಕ್ ಮಾಡಲು ಬಲಭಾಗದ ಮೂರನೇ ಲೇನ್ (3rd lane) ಬಳಸಿ. ಬಲಭಾಗದ ಮೂರನೇ ಲೇನ್ ನಲ್ಲಿ ವಾಹನವನ್ನು  ನಿಧಾನವಾಗಿ ಚಲಾಯಿಸಬೇಡಿ.  ಇದು ನಿಯಮಗಳ ವಿರುದ್ಧ. ಜೊತೆಗೆ ಬೇರೆ ವಾಹನ ಚಾಲಕರಿಗೂ ನೀವು ಸಂಕಷ್ಟ ತಂದೊಡ್ಡಬಹುದು. ಮೂರನೇ ಲೇನ್ ನ್ನು ಕೇವಲ ಓವರ್ ಟೇಕ್ ಮಾಡಲು ಬಳಸಿ. ಹೈವೇಯಲ್ಲಿ ವಾಹನ ಚಲಾಯಿಸುವಾಗ ಟ್ರಕ್(truck), ಬಸ್ ರೀತಿಯ ವಾಹನಗಳಿಂದ ದೂರ ಇರಿ. ಅದರ ಸನಿಹದಲ್ಲಿ ವೇಗವಾಗ ಗಾಡಿ ಚಲಾಯಿಸಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News