ಟಿಡಿಪಿ ಸಮಸ್ಯೆಯನ್ನು ಕಾವೇರಿಗೆ ಹೋಲಿಸಬೇಡಿ-ಪನೀರ್ ಸೆಲ್ವಂ

     

Last Updated : Mar 19, 2018, 05:47 PM IST
ಟಿಡಿಪಿ ಸಮಸ್ಯೆಯನ್ನು ಕಾವೇರಿಗೆ ಹೋಲಿಸಬೇಡಿ-ಪನೀರ್ ಸೆಲ್ವಂ title=

ಚೆನ್ನೈ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ ಪ್ರಸ್ತಾಪಿಸಿರುವ ಅವಿಶ್ವಾಸ ಗೊತ್ತುವಳಿಗೆ ಪ್ರತಿಕ್ರಿಯಿಸಿರುವ  ತಮಿಳುನಾಡಿನ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಟಿಡಿಪಿ ಸಮಸ್ಯೆಯನ್ನು ಕಾವೇರಿ ಸಮಸ್ಯೆಗೆ ಹೋಲಿಸಬೇಡಿ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಮಿಳುನಾಡು ಸರಕಾರವು ರಾಜ್ಯವನ್ನು ಯಾವತ್ತೂ ಕನಿಷ್ಟವಾಗಿಸಲು ಬಿಡುವುದಿಲ್ಲವೆಂದು ತಿಳಿಸಿದರು .

ಕಾವೇರಿ ವಿವಾದದೊಂದಿಗೆ ಟಿಡಿಪಿ ಸಮಸ್ಯೆಯನ್ನು ಹೋಲಿಕೆ ಮಾಡಬೇಡಿ, ತಮಿಳುನಾಡು ಸರ್ಕಾರವು ರಾಜ್ಯವನ್ನು ನಿರರ್ಥಕಗೊಳಿಸುವುದಿಲ್ಲ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆರು ವಾರಗಳ ಕಾಲಾವಕಾಶ ನೀಡಿದೆ, ಆದ್ದರಿಂದ ಅದಕ್ಕೆ ಕಾಯುತ್ತೇವೆ ಒಂದುವೇಳೆ ಅದೇನು ಆಗದಿದ್ದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮತ್ತೊಂದೆಡೆ, ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಟಿಡಿಪಿಯ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡಲು ಸರ್ಕಾರವನ್ನು ಆಗ್ರಹಿಸಿದರು.

Trending News