ನಮೋ ಟಿವಿಯಲ್ಲಿ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ: ಬಿಜೆಪಿಗೆ ದೆಹಲಿ ಸಿಇಒ ಸೂಚನೆ

ನಮೋ ಟಿವಿಯಲ್ಲಿ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ನಿರ್ದೇಶನ ಮೇರೆಗೆ ಈಗ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಕಟ್ಟಪ್ಪಣೆ ಹೊರಡಿಸಿದ್ದಾರೆ.

Last Updated : Apr 13, 2019, 03:41 PM IST
ನಮೋ ಟಿವಿಯಲ್ಲಿ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ: ಬಿಜೆಪಿಗೆ ದೆಹಲಿ ಸಿಇಒ ಸೂಚನೆ  title=

ನವದೆಹಲಿ: ನಮೋ ಟಿವಿಯಲ್ಲಿ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ನಿರ್ದೇಶನ ಮೇರೆಗೆ ಈಗ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಬಿಜೆಪಿ ಪ್ರಾಯೋಜಕತ್ವದಲ್ಲಿ ಪ್ರಸಾರವಾಗುತ್ತಿರುವ ನಮೋ ಟಿವಿಯಲ್ಲಿನ ಕಾರ್ಯಕ್ರಮಗಳು ಪ್ರಸಾರವಾಗಲು  ಈಗ ಪೂರ್ವಾನುಮತಿಯನ್ನು ಪಡೆಯಬೇಕು ಇಲ್ಲದೆ ಹೋದಲ್ಲಿ ಅಂತಹ ವಿಷಯಗಳನ್ನು ತೆಗೆದುಹಾಕಲಾಗುವುದು ಎಂದು  ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಈಗ ಬಿಜೆಪಿಗೆ ಸೂಚನೆ ನೀಡಿದ್ದಾರೆ.ಈಗಾಗಲೇ ಮುನ್ನೆಚ್ಚರಿಕೆಯ ಕ್ರಮವಾಗಿ ಇಬ್ಬರು ಅಧಿಕಾರಿಗಳನ್ನು ನಮೋ ಟಿವಿ ವೀಕ್ಷಿಸಲು ನಿಯೋಜಿಸಲಾಗಿದೆ ಮತ್ತು ಅದರ ವಿಷಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ನಮೋ ಚಾನಲ್ ಕುರಿತು ಕಾಂಗ್ರೆಸ್ ಮತದಾನ ಸಮಿತಿಗೆ ದೂರು ಸಲ್ಲಿಸಿದ ಬಳಿಕ ಚುನಾವಣಾ ಆಯೋಗ ದೆಹಲಿ ಸಿಇಒಗೆ ಈ ವಿಷಯದ ಕುರಿತು ಒಂದು ವರದಿ ಸಲ್ಲಿಸುವಂತೆ ಕೇಳಿಕೊಂಡಿತ್ತು.ಈ ಹಿನ್ನಲೆಯಲ್ಲಿ ಈಗ ಅನುಮತಿಯಿಲ್ಲದೆ  ಕಾರ್ಯಕ್ರಮಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವಂತಿಲ್ಲ. ಬೇಕಾದಲ್ಲಿ ಪಕ್ಷದ ವೆಬ್ ಸ್ಸೈಟ್ ನಲ್ಲಿ ಪಕ್ಷದ ರ್ಯಾಲಿಯನ್ನು ಪ್ರಸಾರ ಮಾಡಬಹುದು ಎಂದು ಸೂಚನೆ ನೀಡಿದ್ದಾರೆ.

Trending News