Donkey Mela: ಕತ್ತೆಗಳ ಈ ಸಂತೆಯಲ್ಲಿ ಯಾವ ಬೆಲೆಗೆ ಮಾರಾಟವಾದ್ರು 'ಶಾರುಕ್', 'ಸಲ್ಮಾನ್', 'ಕತ್ರೀನಾ' ಗೊತ್ತಾ?

Salman-Shahrukh: ಈ ಜಾತ್ರೆಗೆ ವಿವಿಧ ಪ್ರಜಾತಿಯ ಕತ್ತೆಗಳು ಮತ್ತು ಹೇಸರಗತ್ತೆಗಳು ಆಗಮಿಸಿದ್ದು, ಅವುಗಳ ಹೆಸರುಗಳು ಚಲನಚಿತ್ರ ತಾರೆಯರ ಹೆಸರುಗಳೂ ಕೂಡ ಆಗಿವೆ. ಈ ಕತ್ತೆಗಳಲ್ಲಿ ಹಲವು ಕತ್ತೆಗಳು ಮತ್ತು ಹೇಸರುಗತ್ತೆಗಳಿಗೆ ಶಾರುಕ್, ಸಲ್ಮಾನ್ ಹಾಗೂ ಕತ್ರಿನಾ ಎಂದು ಕರೆಯಲಾಗುತ್ತಿದೆ.

Written by - Nitin Tabib | Last Updated : Oct 26, 2022, 07:19 PM IST
  • ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಧಾರ್ಮಿಕ ನಗರ ಚಿತ್ರಕೂಟದ ಮಂದಾಕಿನಿ ನದಿಯ ದಡದಲ್ಲಿ ವಿಶಿಷ್ಟವಾದ ಜಾತ್ರೆ ನಡೆಯುತ್ತದೆ.
  • ಇದು ಕತ್ತೆಗಳ ಜಾತ್ರೆಯಾಗಿದ್ದು, ಇದರಲ್ಲಿ ಸಲ್ಮಾನ್ ಮತ್ತು ಶಾರುಕ್ ಎಂಬ ಕತ್ತೆಗಳು ಮತ್ತು ಹೇಸರಗತ್ತೆಗಳು ಕೂಡ ಮಾರಾಟಕ್ಕೆ ಬಂದಿವೆ.
Donkey Mela: ಕತ್ತೆಗಳ ಈ ಸಂತೆಯಲ್ಲಿ ಯಾವ ಬೆಲೆಗೆ ಮಾರಾಟವಾದ್ರು 'ಶಾರುಕ್', 'ಸಲ್ಮಾನ್', 'ಕತ್ರೀನಾ' ಗೊತ್ತಾ? title=
Donkey Fare MP

Donkey Mela in MP: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಧಾರ್ಮಿಕ ನಗರ ಚಿತ್ರಕೂಟದ ಮಂದಾಕಿನಿ ನದಿಯ ದಡದಲ್ಲಿ ವಿಶಿಷ್ಟವಾದ ಜಾತ್ರೆ ನಡೆಯುತ್ತದೆ. ಇದು ಕತ್ತೆಗಳ ಜಾತ್ರೆಯಾಗಿದ್ದು, ಇದರಲ್ಲಿ ಸಲ್ಮಾನ್ ಮತ್ತು ಶಾರುಕ್ ಎಂಬ ಕತ್ತೆಗಳು ಮತ್ತು ಹೇಸರಗತ್ತೆಗಳು ಕೂಡ ಮಾರಾಟಕ್ಕೆ ಬಂದಿವೆ. ಚಿತ್ರಕೂಟದ ಈ ಕತ್ತೆ ಜಾತ್ರೆಯಲ್ಲಿ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ಹೇಸರಗತ್ತೆ ಮತ್ತು ಕತ್ತೆಗಳನ್ನು ತಂದು ಅವುಗಳಿಗೆ ಬಿಡ್ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.

ಹಲವು ವರ್ಷಗಳ ಸಂಪ್ರದಾಯ
ಈ ಮೇಳದ ವಿಶಿಷ್ಟ ಸೊಬಗು ಎಂದರೆ ಇಲ್ಲಿ ಕೊಳ್ಳುವವರಿಗಿಂತ, ಮಾರುವವರಿಗಿಂತ ಪ್ರವಾಸಿಗರೇ ಹೆಚ್ಚು ಆಗಮಿಸುತ್ತಾರೆ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ ದೀಪಾವಳಿಯ ಮರುದಿನದಿಂದ 3 ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಈ ಬಾರಿಯೂ ಈ ಜಾತ್ರೆ ನಡೆಯುತ್ತಿದೆ.

ಸ್ಥಳೀಯ ತಜ್ಞರ ಪ್ರಕಾರ, ಔರಂಗಜೇಬನ ಕಾಲದಿಂದಲೂ ಈ ಜಾತ್ರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಔರಂಗಜೇಬನ ಕಾಲದಲ್ಲಿ ಸೈನ್ಯದಲ್ಲಿ ಲಾಜಿಸ್ಟಿಕ್ಸ್ ಮತ್ತು ಇತರ ಸರಕುಗಳ ಕೊರತೆ ಇದ್ದಾಗ, ಈ ಇಡೀ ಪ್ರದೇಶದ ಹೇಸರಗತ್ತೆ ಮತ್ತು ಕತ್ತೆ ಮಾಲೀಕರು ಹೊಲದಲ್ಲಿ ಒಂದುಗೂಕಿ ಅವುಗಳ ಖರೀದಿ ಮಾರಾಟ ನಡೆಸುತ್ತಿದ್ದರು, ಅಂದಿನಿಂದ ಪ್ರಾರಂಭವಾದ ಈ ಜಾತ್ರೆ ಇಂದಿಗೂ ನಡೆಯುತ್ತಿದೆ.

ಇದನ್ನೂ ಓದಿ-ʼಮುಂದೊಂದು ದಿನ ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗ್ತಾಳೆʼ

ವಿವಿಧ ಜಾತಿಯ ಕತ್ತೆಗಳು ಮತ್ತು ಹೇಸರಗತ್ತೆಗಳು ಈ ಜಾತ್ರೆಗೆ ಆಗಮಿಸಿವೆ. ಇವುಗಳಲ್ಲಿ ಹಲವು ಕತ್ತೆಗಳು ಮತ್ತು ಹೇಸರುಗತ್ತೆಗಳಿಗೆ ಚಲನಚಿತ್ರ ತಾರೆಯರ ಹೆಸರನ್ನಿಡಲಾಗಿದೆ, ಈ ಕತ್ತೆಗಳು ಮತ್ತು ಹೇಸರಗತ್ತೆಗಳನ್ನು ಶಾರುಖ್, ಸಲ್ಮಾನ್ ಮತ್ತು ಕತ್ರಿನಾ ಎಂದು ಕರೆಯಲಾಗುತ್ತಿದೆ. ಈ ಕತ್ತೆ ಮೇಳದಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ಕತ್ತೆಗಳ ಹೆಸರನ್ನು ಸಲ್ಮಾನ್ ಮತ್ತು ಶಾರುಖ್‌ ಕತ್ತೆಗಳು ಎನ್ನಲಾಗುತ್ತಿವೆ. ಅವುಗಳ ಮಾಲೀಕರು ಒಂದು ಲಕ್ಷದ 90 ಸಾವಿರ ರೂ.ಗಳಿಗೆ ಅವುಗಳ ಹೆಸರನ್ನು ನಿಗದಿಪಡಿಸಿದ್ದರೆ ಉಳಿದ ಕತ್ತೆಗಳು 30 ಸಾವಿರದಿಂದ 60 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ-ನೋಟುಗಳಲ್ಲಿ ಲಕ್ಷ್ಮಿ, ಗಣೇಶ ದೇವರ ಭಾವಚಿತ್ರ ಮುದ್ರಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಸಲಹೆ

ಈ ಕುರಿತು ಮಾತನಾಡಿರುವ ಮೇಳದ ಸಂಸ್ಥಾಪಕ ರಮೇಶ್ ಪಾಂಡೆ, ಔರಂಗಜೇಬನ ಕಾಲದಿಂದಲೂ ಈ ಜಾತ್ರೆ ನಡೆದುಕೊಂಡು ಬಂದಿದೆ. ಇಡೀ ಜಾತ್ರೆಯನ್ನು ಎಂಟು ದಿನ ಮುಂಚಿತವಾಗಿಯೇ ಏರ್ಪಡಿಸಲಾಗುತ್ತದೆ. ಹೇಸರಗತ್ತೆ ಜಾತಿಗಿಂತ ಜಾತ್ರೆಯಲ್ಲಿ ಕತ್ತೆಗಳ ಬೆಲೆ ಜಾಸ್ತಿ. ಸುಮಾರು 50 ರಿಂದ 70 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ನೋಡಲು ಸುಂದರವಾಗಿ ಕಾಣುವ ಸಾಮಾನ್ಯ ಕತ್ತೆಗಳ ಬೆಲೆ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಆಕರ್ಷಣೆಯ ಕೇಂದ್ರಬಿಂದುವಾಗಿರುವ ಚಲನಚಿತ್ರ ನಟರ ಹೆಸರನ್ನು ಅವರಿಗೆ ನೀಡಲಾಗುತ್ತದೆ. ಅವುಗಳ ಬೆಲೆಯೂ ಹೆಚ್ಚು ಎಂದು ಅವರು ಹೇಳುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News