America ಹಾಗೂ China ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೈನಾಗೆ ಗಂಭೀರ ಎಚ್ಚರಿಕೆ ನೀಡಿದ Donald Trump

ಅಮೆರಿಕದ ಆರ್ಥಿಕತೆಯನ್ನು ಚೀನಾದಿಂದ ಬೇರ್ಪಡಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಹೇಳಿಕೆ ನೀಡಿದ್ದಾರೆ.

Last Updated : Aug 23, 2020, 09:38 AM IST
America ಹಾಗೂ China ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೈನಾಗೆ ಗಂಭೀರ ಎಚ್ಚರಿಕೆ ನೀಡಿದ Donald Trump title=

ವಾಷಿಂಗ್ಟನ್: ಅಮೆರಿಕದ ಆರ್ಥಿಕತೆಯನ್ನು ಚೀನಾದಿಂದ ಬೇರ್ಪಡಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಹೇಳಿಕೆ ನೀಡಿದ್ದಾರೆ. ಟ್ರಂಪ್ ನೀಡಿರುವ ಎಚ್ಚರಿಕೆಯ ಪ್ರಕಾರ ಒಂದು ವೇಳೆ ಚೀನಾ ಅಮೆರಿಕದ ಷರತ್ತುಗಳನ್ನು ಒಪ್ಪದಿದ್ದರೆ, ಯುಎಸ್ ಚೀನಾದ ಜೊತೆಗೆ ತನ್ನ ಸಂಪೂರ್ಣ ವ್ಯಾಪಾರವನ್ನು ಸ್ಥಗಿತಗೊಲಿಸಲಿದೆ ಎಂದು ಟ್ರಂಪ್ ಎಚ್ಚರಿಕೆಯ ಸಂದೇಶ ರವಾಗ್ನಿಸಿದೆ. ಆದರೆ ಅಮೆರಿಕದ ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳಲ್ಲಿ ಚೀನಾ ಕೂಡ ಒಂದು ಎಂಬುದು ಇಲ್ಲಿ ಉಲ್ಲೇಖನೀಯ.

ಅಮೆರಿಕದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, "ನಮಗೆ  ಚೀನಾದೊಂದಿಗೆ ಯಾವುದೇ ರೀತಿಯ ವ್ಯಾಪಾರ ನಡೆಸುವ ಅವಶ್ಯಕತೆಯೇ ಇಲ್ಲ" ಎಂದು ಹೇಳಿದ್ದಾರೆ. ನಂತರ ವ್ಯಾಪಾರದ ಡಿಕೌಪ್ಲಿಂಗ್ ಬಗ್ಗೆ ಮಾತನಾಡಿರುವ ಅವರು, "ಚೀನಾ ನಮ್ಮೊಂದಿಗೆ ಸರಿಯಾಗಿ ವ್ಯವಹರಿಸದಿದ್ದರೆ (ವ್ಯಾಪಾರಕ್ಕೆ ಉಂಟಾದ ನಷ್ಟದ ಪರಿಹಾರ ನೀಡದೆ ಹೋದಲ್ಲಿ), ನಾನು ಖಂಡಿತವಾಗಿಯೂ ನೀಡಿರುವ ಹೇಳಿಕೆಯನ್ನು ಮಾಡಿ ತೋರಿಸುವೆ" ಎಂದು ಟ್ರಂಪ್ ಹೇಳಿದ್ದಾರೆ.

ಚೀನಾ ಮತ್ತು ಅಮೆರಿಕ ಉಭಯ ದೇಶಗಳು ಪರಸ್ಪರ ದೊಡ್ಡ ವ್ಯಾಪಾರ ನಡೆಸುತ್ತವೆ.  ಆದರೆ, ಅಮೆರಿಕವು ಈ ವ್ಯವಹಾರ ನಷ್ಟವನ್ನು ಭರಿಸಬೇಕಾಗಿದೆ. ಡೊನಾಲ್ಡ್ ಟ್ರಂಪ್ ಈ ವ್ಯಾಪಾರ ಕೊರತೆಯನ್ನು ನೀಗಿಸಲು ಬಯಸುತ್ತಿದ್ದಾರೆ. ಚೀನಾ ನಮಗೆ ರವಾನಿಸುವ ಸರಕಿನಷ್ಟೇ  ನಮ್ಮಿಂದ ಖರೀದಿಸಬೇಕು ಎಂದು ಅವರು ಹೇಳುತ್ತಾರೆ. ಕರೋನವೈರಸ್ ಮಹಾಮಾರಿಯ ಬಳಿಕ  ಜನವರಿಯಲ್ಲಿ ಉಭಯ ದೇಶಗಳ ನಡುವಿನ ಮೊದಲ ಸುತ್ತಿನ ವ್ಯಾಪಾರವನ್ನು ಒಪ್ಪಿಕೊಂಡಿದ್ದರೂ ಕೂಡ ಎರಡನೇ ಸುತ್ತಿನ ಮಾತುಕತೆ ಮತ್ತು ಪ್ರಕ್ರಿಯೆಯನ್ನು ಟ್ರಂಪ್ ನಿಲ್ಲಿಸಿದ್ದರು. ಚೀನಾದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿದ್ದರು. ಅಮೇರಿಕಾ ಕೈಗೊಂಡ ಈ ಕ್ರಮದ ಬಳಿಕ,  ಚೀನಾ ಕೂಡ ಅನೇಕ ಕ್ರಮಗಳನ್ನು ಕೈಗೊಂಡಿದೆ, ಇದರ ನಂತರ ಉಭಯ ದೇಶಗಳಲ್ಲಿನ ವ್ಯಾಪಾರ ಉದ್ವಿಗ್ನತೆ ಹೆಚ್ಚಿನ ಪ್ರಮಾಣದಲ್ಲಿ ಟ್ರೇಡ್ ವಾರ್ ಗೆ ತಲುಪಿದೆ.

ಈ ಕುರಿತು ಜೂನ್ ತಿಂಗಳಿನಲ್ಲಿ ಹೇಳಿಕೆ ನೀಡಿದ್ದ ಅಮೆರಿಕಾದ ಹಣಕಾಸು ಇಲಾಖೆಯ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್, ಯುಎಸ್-ಚೀನಾ ವ್ಯಾಪಾರ ವಿಭಜನೆ ಅಮೆರಿಕಾದ ಕಂಪನಿಗಳಿಗೆ ಆರ್ಥಿಕ ನಷ್ಟ ಉಂಟುಮಾಡಲಿದೆ ಎಂದು ಹೇಳಿದ್ದರು. ಏಕೆಂದರೆ ಇದರ ಬಳಿಕ ಅಮೆರಿಕಾದ ಕಂಪನಿಗಳು ಸ್ವಚ್ಛವಾಗಿ ಚೀನಾದ ಅರ್ಥವ್ಯವಸ್ಥೆಯಲ್ಲಿ ವ್ಯಾಪಾರ ನಡೆಸುವುದು ಕಷ್ಟಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

Trending News