ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆ ಅತ್ಯಂತ ಕಷ್ಟಕರ ಯಾಕೆ ಗೊತ್ತಾ? ಇಸ್ರೋ ಮಾಜಿ ಮುಖ್ಯಸ್ಥ ಹೇಳಿದ್ದು ಹೀಗೆ

Chandrayaana-3 News: ಮಾಜಿ ಮುಖ್ಯಾಧಿಕಾರಿ ಜಿ. ಮಾಧವನ್ ನಾಯರ್ ಅವರು 2008 ರಲ್ಲಿ ಚಂದ್ರಯಾನ-1 ಮಿಷನ್ ಉಡಾವಣೆ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಮುನ್ನಡೆಸಿದ್ದರು.

Written by - Bhavishya Shetty | Last Updated : Aug 22, 2023, 12:25 PM IST
    • ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುವುದು ಕೊಂಚ ಕಷ್ಟಕರ ಪ್ರಕ್ರಿಯೆ
    • ಮಾಜಿ ಮುಖ್ಯಾಧಿಕಾರಿ ಜಿ. ಮಾಧವನ್ ನಾಯರ್ ಈ ಬಗ್ಗೆ ಮಾಹಿತಿ
    • ಚಂದ್ರಯಾನ-1 ಮಿಷನ್ ಉಡಾವಣೆ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಮುನ್ನಡೆಸಿದ್ದ ನಾಯರ್
ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆ ಅತ್ಯಂತ ಕಷ್ಟಕರ ಯಾಕೆ ಗೊತ್ತಾ? ಇಸ್ರೋ ಮಾಜಿ ಮುಖ್ಯಸ್ಥ ಹೇಳಿದ್ದು ಹೀಗೆ title=
Chandrayaan-3

Chandrayaana-3 News: ಚಂದ್ರಯಾನ-3 ಮಿಷನ್‌’ನ ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುವುದು ಕೊಂಚ ಕಷ್ಟಕರ ಪ್ರಕ್ರಿಯೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಾತನಾಡಿದ ಇಸ್ರೋ ಮಾಜಿ ಮುಖ್ಯಸ್ಥ ಜಿ. ಮಾಧವನ್ ನಾಯರ್, “ಲ್ಯಾಂಡಿಂಗ್ ಎಂದರೆ ಬಹಳ ಸಂಕೀರ್ಣವಾದ ಪ್ರಕ್ರಿಯೆ. ಆಗ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು, ಅದರ ಯಶಸ್ಸಿಗೆ ಆ ಸಮಯದಲ್ಲಿ ಎಲ್ಲಾ ವ್ಯವಸ್ಥೆಗಳು ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ” ಎಂದಿದ್ದಾರೆ.

ಇದನ್ನೂ ಓದಿ: ಭಾರತದ ನಂ.4 ಸ್ಥಾನಕ್ಕೆ ಸಿಕ್ಕಾಯ್ತು ಯುವಿಯಂತೆ ಫಿನಿಶಿಂಗ್ ಮಾಡಬಲ್ಲ 20ರ ಹರೆಯದ ಸ್ಫೋಟಕ ಬ್ಯಾಟರ್!

ಮಾಜಿ ಮುಖ್ಯಾಧಿಕಾರಿ ಜಿ. ಮಾಧವನ್ ನಾಯರ್ ಅವರು 2008 ರಲ್ಲಿ ಚಂದ್ರಯಾನ-1 ಮಿಷನ್ ಉಡಾವಣೆ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಮುನ್ನಡೆಸಿದ್ದರು.

“ಲ್ಯಾಂಡಿಂಗ್ ತುಂಬಾ ಕಷ್ಟಕರವಾದ ಪ್ರಕ್ರಿಯೆ. ಚಂದ್ರಯಾನ-2 ರ ಸಮಯದಲ್ಲಿ ಚಂದ್ರನ ಮೇಲ್ಮೈಯಿಂದ ಕೊನೆಯ 2 ಕಿಲೋಮೀಟರ್‌ ದೂರದಲ್ಲಿರುವಾಗ ನಾವು ಮಿಸ್ ಮಾಡಿಕೊಂಡೆವು. ಚಂದ್ರಯಾನ-3 ಲ್ಯಾಂಡಿಂಗ್ ಸಮಯದಲ್ಲಿ ಅನೇಕ ವಿಷಯಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಇದು ಸಂವೇದಕಗಳು, ಥ್ರಸ್ಟರ್‌’ಗಳು, ಕಂಪ್ಯೂಟರ್ ಸಾಫ್ಟ್‌ವೇರ್, ಆಲ್ಟಿಮೀಟರ್ ಮತ್ತು ಇತರ ಹಲವು ವಿಷಯಗಳನ್ನು ಒಳಗೊಂಡಿದೆ” ಎಂದಿದ್ದಾರೆ.

ಚಂದ್ರಯಾನ-3 ಯಾವಾಗ ಲ್ಯಾಂಡಿಂಗ್?

ಇಸ್ರೋ ಪ್ರಕಾರ, ರೋವರ್ ಜೊತೆಗೆ ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6.40 ರ ಸುಮಾರಿಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ. ಚಂದ್ರನ ಮೇಲ್ಮೈಯಿಂದ ನಾವು ಸಂಗ್ರಹಿಸಬಹುದಾದ ಡೇಟಾವನ್ನು ಕೆಲವು ಖನಿಜಗಳನ್ನು ಗುರುತಿಸಲು ಬಳಸಲಾಗುತ್ತದೆ ಎಂದು ಮಾಧವನ್ ನಾಯರ್ ಹೇಳಿದ್ದಾರೆ

ಕೊನೆಯ 15 ನಿಮಿಷಗಳೇ ನಿರ್ಣಾಯಕ!

ಚಂದ್ರಯಾನ-3 ಲ್ಯಾಂಡಿಂಗ್‌’ನ ಕೊನೆಯ 15 ನಿಮಿಷಗಳು ಅಗ್ನಿಪರೀಕ್ಷೆಗಿಂತ ಕಡಿಮೆಯಿಲ್ಲ. ಇಸ್ರೋ ಪ್ರಕಾರ, ಚಂದ್ರನ ಹತ್ತಿರ ತಲುಪುವುದು ದೊಡ್ಡ ವಿಷಯವಲ್ಲ, ಈ ಸಮಯದಲ್ಲಿ ಮಿಷನ್‌’ನ ಲ್ಯಾಂಡರ್ ಮಾಡ್ಯೂಲ್ ಚಂದ್ರನಿಂದ ಕನಿಷ್ಠ 25 ಕಿಲೋಮೀಟರ್ ದೂರದಲ್ಲಿದೆ. ಚಂದ್ರನು ನಿರಂತರವಾಗಿ ಸುತ್ತುತ್ತಿರುತ್ತಾನೆ. ಆದರೆ ಕೊನೆಯ 15 ನಿಮಿಷಗಳು ಅಗ್ನಿಪರೀಕ್ಷೆಗೆ ಸಮವಾಗಿರುತ್ತದೆ. ಈ ಸವಾಲನ್ನು ಎದುರಿಸಲು ಇಸ್ರೋ ಈ ಬಾರಿ ಸಂಪೂರ್ಣವಾಗಿ ಸಿದ್ಧವಾಗಿದೆ.

ಇದನ್ನೂ ಓದಿ: ಏಷ್ಯಾಕಪ್ 2023ಕ್ಕೆ ಪ್ಲೇಯಿಂಗ್ 11 ರೆಡಿ: ಕನ್ನಡಿಗ ಸೇರಿ 29ರ ಹರೆಯದ ಫಾಸ್ಟ್ ಬೌಲರ್ ಔಟ್!!

ಲ್ಯಾಂಡರ್ ವಿಕ್ರಮ್ ತನ್ನ ಸುರಕ್ಷಿತ ಮತ್ತು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌’ಗಾಗಿ ತನ್ನದೇ ಆದ ಕೆಲವು ಕೆಲಸವನ್ನು ಮಾಡಬೇಕಾಗುತ್ತದೆ, ಅಂದರೆ ಲ್ಯಾಂಡಿಂಗ್‌’ನ ಕೊನೆಯ 15 ನಿಮಿಷಗಳ ಅವಧಿಯಲ್ಲಿ, ಎಲ್ಲಾ ಜವಾಬ್ದಾರಿಯು ಲ್ಯಾಂಡರ್ ವಿಕ್ರಮ್‌’ನ ಹೆಗಲ ಮೇಲಿರುತ್ತದೆ. ಈ ಸಮಯದಲ್ಲಿ, ಇಳಿಯಲು ಸರಿಯಾದ ಎತ್ತರ, ಸರಿಯಾದ ಪ್ರಮಾಣದ ಇಂಧನವನ್ನು ಬಳಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News