Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ?

ವಿಶೇಷ ಪ್ಯಾಸೆಂಜರ್ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ರೈಲ್ವೆ ನಿಲ್ದಾಣಗಳಲ್ಲಿ ದೊಡ್ಡ ಪರೀಕ್ಷೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಯಾವ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸ್ಕ್ರೀನಿಂಗ್ ಮೂಲಕ ಹೋಗಬೇಕಾಗುತ್ತದೆ, ಆದರೆ ಅವರು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದಾಗ ಅವರಿಗೆ ನಿಜವಾದ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಅವರು ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವರು ಕ್ವಾರಂಟೀನ್ ಕೇಂದ್ರಗಳಲ್ಲಿಯೇ ಇರಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.

Last Updated : May 12, 2020, 11:11 AM IST
Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ? title=

ನವದೆಹಲಿ:ವಿಶೇಷ ಪ್ಯಾಸೆಂಜರ್ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ರೈಲ್ವೆ ನಿಲ್ದಾಣಗಳಲ್ಲಿ ದೊಡ್ಡ ಪರೀಕ್ಷೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಯಾವ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸ್ಕ್ರೀನಿಂಗ್ ಮೂಲಕ ಹೋಗಬೇಕಾಗುತ್ತದೆ, ಆದರೆ ಅವರು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದಾಗ ಅವರಿಗೆ ನಿಜವಾದ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಅವರು ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವರು ಕ್ವಾರಂಟೀನ್ ಕೇಂದ್ರಗಳಲ್ಲಿಯೇ ಇರಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.

ಹೆಲ್ತ್ ಪ್ರೋಟೋಕಾಲ್ ಪಾಲಿಸುವುದು ಅನಿವಾರ್ಯ
ಈ ವಿಶೇಷ ರೈಲುಗಳು ತಮ್ಮ ಅಂತಿಮ ಸ್ಟೇಷನ್ ತಲುಪಿದ ನಂತರ ಅದರಲ್ಲಿರುವ ಪ್ರಯಾಣಿಕರು ಆಯಾ ರಾಜ್ಯಗಳ ಆರೋಗ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕಾಗುತ್ತದೆ ಎಂದು ರೈಲ್ವೆ ಸಚಿವಾಲಯ ಈಗಾಗಲೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದೆ. ಈ ರೈಲುಗಳ ಮೂಲಕ ಸಂಚರಿಸುವ ಪ್ರಯಾಣಿಕರು ತಮ್ಮ-ತಮ್ಮ ರಾಜ್ಯಗಳ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಸಚಿವಾಲಯ ಟ್ವೀಟ್ ಮಾಡಿ ಪ್ರಯಾಣಿಕರಿಗೆ ಸಲಹೆ ನೀಡಿದೆ. ಆದರೆ, ವಿಶೇಷ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರಗಳು ಇನ್ನೂ ಯಾವುದೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿಲ್ಲ.

ದೇಶದ ವಿವಿಧ ರಾಜ್ಯಗಳ ಮೂಲಕ ಕಾರ್ಮಿಕ ಟ್ರೈನ್ ಗಳ ಮೂಲಕ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಕಾರ್ಮಿಕರು ಆರೋಗ್ಯ ತಪಾಸಣೆಯ ಬಳಿಕ ಟ್ರೈನ್ ನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಈ ಕಾರ್ಮಿಕರು ತಮ್ಮ-ತಮ್ಮ ರಾಜ್ಯಗಳಿಗೆ ತಲುಪಿದ ಬಳಿಕ ಅವರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ಮೂಲಕ ಕ್ವಾರಂಟೀನ್ ಕೇಂದ್ರಗಳಿಗೆ ಸಾಗಿಸಿ ಅವರನ್ನು ಆಯಾ ರಾಜ್ಯಸರ್ಕಾರಗಳ ನಿಯಮದ ಅನುಸಾರ ಕ್ವಾರಂಟೀನ್ ಕೇಂದ್ರಗಳಲ್ಲಿ ಇರಿಸಲಾಗುವುದು. ಉದಾಹರಣೆಗೆ ಬಿಹಾರ್ ತಲುಪಿರುವ ಕಾರ್ಮಿಕರು ರಾಜ್ಯ ಸರ್ಕಾರದ ನಿಯಮದ ಅನುಸಾರ 21 ದಿನಗಳ ಕಾಲ ಕ್ವಾರಂಟೀನ್ ಕೇಂದ್ರಗಳಲ್ಲಿ ಇರಬೇಕು. ಉತ್ತರ ಪ್ರದೇಶ ತಲುಪುವ ಕಾರ್ಮಿಕರು ಪರೀಕ್ಷೆಗೆ ಒಳಗಾಗಬೇಕು ಹಾಗೂ ಕೊರೊನಾ ಲಕ್ಷಣಗಳು ಕಂಡು ಬಂದರೆ ಅವರನ್ನು ಸರ್ಕಾರಿ ಕ್ವಾರಂಟೀನ್ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಮತ್ತು ರೋಗದ ಲಕ್ಷಣಗಳು ಕಂಡು ಬರದ ಕಾರ್ಮಿಕರನ್ನು ಹೋಮ್ ಕ್ವಾರಂಟೀನ್ ಗೆ ಒಳಗಾಗಬೇಕು. ಇದೆ ರೀತಿ ವಿವಿಧ ರಾಜ್ಯಗಳು ತಮ್ಮದೇ ಆದ ಮೆಡಿಕಲ್ ಪ್ರೋಟೋಕಾಲ್ ಗಳನ್ನು ಘೋಷಿಸಿವೆ.

ಗೃಹ ಸಚಿವಾಲಯದ ಸೂಚನೆಗಳ ಅನುಸಾರ ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಜನರು ಮಾಸ್ಕ್ ಧರಿಸಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಪ್ರಯಾಣಿಕರು ಪ್ರಯಾಣಕ್ಕೆ 90 ನಿಮಿಷಗಳ ಮೊದಲು ನಿಲ್ದಾಣಕ್ಕೆ ಬರಬೇಕು. ಕರೋನಾ ಸೋಂಕಿನ ಲಕ್ಷಣಗಳನ್ನು ಇಲ್ಲದೆ ಇರುವ ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದು. ಅಷ್ಟೇ ಅಲ್ಲ, ಪ್ರಯಾಣಿಕರು ತಮ್ಮ ತಮ್ಮ ಗಮ್ಯಸ್ಥಾನವನ್ನು ತಲುಪಿದ ಬಳಿಕ ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್ ಅನ್ನು ಅನುಸರಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಪ್ರಯಾಣಿಕರು ಯಾತ್ರೆಯ ವೇಳೆ ತಮ್ಮ ತಮ್ಮ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು. ಯಾತ್ರೆಯ ವೇಳೆ ಪ್ರಯಾಣಿಕರಿಗೆ ರೈಲು ವಿಭಾಗದ ವತಿಯಿದ ಹೊದಿಕೆ, ಟವೆಲ್ ಗಳನ್ನು ನೀಡಲಾಗುವುದಿಲ್ಲ. ಜೊತೆಗೆ ಕೇವಲ ಕನ್ಫರ್ಮ್ಡ್ ಟಿಕೆಟ್ ಇರುವವರಿಗೆ ಮಾತ್ರ ಸೂಕ್ತ ವೈದ್ಯಕೀಯ ಪರೀಕ್ಷೆಯ ಬಳಿಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು.

ಈ ಸ್ಪೆಷಲ್ ಟ್ರೈನ್ ಗಳಲ್ಲಿ ಪ್ರಯಾಣ ಬಯಸುವ ಯಾತ್ರಿಗಳು ಯಾತ್ರೆಯ ವೇಳೆ ಹಾಗೂ ಸ್ಟೇಷನ್ ಗಳಲ್ಲಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ.  ರೈಲಿನಲ್ಲಿ ಹಾಗೂ ಸ್ಟೇಷನ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ತಮ್ಮ ತಮ್ಮ ಗಮ್ಯಸ್ಥಾನ ತಲುಪಿದ ಬಳಿಕ ಯಾತ್ರಿಗಳು ಆಯಾ ರಾಜ್ಯಗಳ ಹೆಲ್ತ್ ಪ್ರೋಟೋಕಾಲ್ ಅನುಸರಿಸುವುದು ಅನಿವಾರ್ಯ.

ಕರೋನಾ ಲಾಕ್‌ಡೌನ್ ಮಧ್ಯೆ, ಕೇಂದ್ರ ರೈಲ್ವೆ ಸಚಿವಾಲಯವು ರಾಷ್ಟ್ರರಾಜಧಾನಿ ನವದೆಹಲಿಯಿಂದ  ದೇಶದ ವಿವಿಧ ಭಾಗಗಳ ಪ್ರಮುಖ ನಗರಗಳಿಗೆ 15 ಜೋಡಿ ರೈಲುಗಳನ್ನು ಇಂದಿನಿಂದ ಓಡಿಸಲಿದೆ. ಎಸಿ ವಿಶೇಷ ರೈಲುಗಳು ನವದೆಹಲಿಯಿಂದ ಪಾಟ್ನಾ, ರಾಂಚಿ, ಹೌರಾ, ದಿಬ್ರುಗರ್, ಮುಂಬೈ, ಜಮ್ಮು ತಾವಿ, ಅಹಮದಾಬಾದ್ ಸೇರಿದಂತೆ 15 ಮಾರ್ಗಗಳಲ್ಲಿ ಈ ವಿಶೇಷ ರೈಲುಗಳು ಚಲಿಸಲಿವೆ. ಈ ರೈಲುಗಳಲ್ಲಿ ಕೆಲವು ಪ್ರತಿದಿನ ಓಡಾಟ ನಡೆಸಲಿದ್ದರೆ, ಕೆಲವು ವಾರದಲ್ಲಿ ಎರಡು ದಿನಗಳು ಮತ್ತು ಕೆಲವು ವಾರಕ್ಕೊಮ್ಮೆ ಚಲಿಸಲಿವೆ.
 

Trending News