DICGC Amendment Bill 2021: ಬ್ಯಾಂಕ್ ದಿವಾಳಿಯಾಗಲಿ ಅಥವಾ ಬಂದ್ ಆಗಲಿ, 90 ದಿನಗಳೊಳಗೆ ಗ್ರಾಹಕರಿಗೆ 5 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ

DICGC Act: ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಅಥವಾ ಆರ್‌ಬಿಐ  (RBI) ಅದರ ಪರವಾನಗಿ ರದ್ದುಗೊಳಿಸಿದರೆ, ಗ್ರಾಹಕರು ಭಯಪಡಬೇಕಾಗಿಲ್ಲ. ಬ್ಯಾಂಕಿನ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ (Insurance) ಸಿಗಲಿದೆ. 

Written by - Nitin Tabib | Last Updated : Jul 28, 2021, 06:01 PM IST
  • ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದವರಿಗೊಂದು ಸಂತಸದ ಸುದ್ದಿ.
  • ಬ್ಯಾಂಕ್ ದಿವಾಳಿಯಾದರೆ ಇನ್ಮುಂದೆ ಗ್ರಾಹಕರಿಗೆ 1 ಲಕ್ಷ ಬದಲಿಗೆ 5 ಲಕ್ಷ ರೂ. ಪರಿಹಾರ ವಿಮೆ ಸಿಗಲಿದೆ .
  • ಈ ಮೊತ್ತ ಬ್ಯಾಂಕ್ ದಿವಾಳಿಯಾದ 90 ದಿನಗಳೊಳಗೆ ಗ್ರಾಹಕರಿಗೆ ಸಿಗಲಿದೆ.
DICGC Amendment Bill 2021: ಬ್ಯಾಂಕ್ ದಿವಾಳಿಯಾಗಲಿ ಅಥವಾ ಬಂದ್ ಆಗಲಿ, 90 ದಿನಗಳೊಳಗೆ ಗ್ರಾಹಕರಿಗೆ 5 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ title=
DICGC Act (Photo Courtesy-ANI)

DICGC Act: ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಅಥವಾ ಆರ್‌ಬಿಐ  (RBI) ಅದರ ಪರವಾನಗಿ ರದ್ದುಗೊಳಿಸಿದರೆ, ಗ್ರಾಹಕರು ಭಯಪಡಬೇಕಾಗಿಲ್ಲ. ಬ್ಯಾಂಕಿನ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ (Insurance) ಸಿಗಲಿದೆ. ಕೇಂದ್ರ ಸಚಿವ ಸಂಪುಟ ಬುಧವಾರ ನಡೆದ ಸಭೆಯಲ್ಲಿ DICGC ಕಾಯ್ದೆಯಲ್ಲಿನ ಬದಲಾವಣೆಗಳನ್ನು ಅನುಮೋದಿಸಿದೆ. ಈ ಬದಲಾವಣೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-ಕೊರೋನಾದಿಂದ ಕುಂಠಿತಗೊಂಡ ವಲಯಗಳಿಗೆ ಕೇಂದ್ರದಿಂದ 1.1 ಲಕ್ಷ ಸಾಲದ ನೆರವು

ಯಾರಿಗೆ ಸಿಗಲಿದೆ ಪರಿಹಾರ?
ಕೇಂದ್ರ ಹಣಕಾಸು ಸಚಿವಾಲಯ (Finance Ministery) ಮಾಡಿರುವ ಈ ಬದಲಾವಣೆಯ ಬಳಿಕ ಯಾವುದೇ ಓರ್ವ ಗ್ರಾಹಕನ ಹಣ ಯಾವುದೇ ಒಂದು ಕಾರಣದಿಂದ ಬಂದ್ ಆಗಿರುವ ಅಥವಾ ಲೈಸನ್ಸ್ ರದ್ದುಗೊಂಡಿರುವ ಬ್ಯಾಂಕ್ ನಲ್ಲಿ ಸಿಲುಕಿಕೊಂಡಿದ್ದರೆ, ಆ ಗ್ರಾಹಕರಿಗೆ ಇದರಿಂದ ಭಾರಿ ಪರಿಹಾರ ಸಿಗಲಿದೆ. ಈ ಮೊದಲು ವಿಮೆಯ ಮೊತ್ತವು ಒಂದು ಲಕ್ಷ ರೂಪಾಯಿಗಳಾಗಿತ್ತು ಆದರೆ 2020 ರಲ್ಲಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರಕಾರ (Modi Government) ಈ ಠೇವಣಿ ವಿಮೆಯ ಮಿತಿಯನ್ನು 5 ಪಟ್ಟು ನಿರ್ಧರಿಸಿದೆ.  ಇದರ ನಂತರ, ವಿಮೆಯ ಮೊತ್ತವನ್ನು ಪಾವತಿಸುವ ಅವಧಿಯನ್ನು ಸಹ ಇದೀಗ ನಿಗದಿಪಡಿಸಲಾಗಿದೆ.

ಇದನ್ನೂ ಓದಿ- PM Ujjwala Yojana 2021 : ಕೇಂದ್ರ ಸರ್ಕಾರದ 'ಉಚಿತ ಗ್ಯಾಸ್ ಸಂಪರ್ಕ' ಸೇವೆ : ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ನೋಡಿ

ಇದರರ್ಥ ಬ್ಯಾಂಕ್ ದಿವಾಳಿಯಾದ ಅಥವಾ ಯಾವುದೇ ಕಾರಣದಿಂದ ಬಂದ್ ಆದ ಬ್ಯಾಂಕ್ ಗ್ರಾಹಕರಿಗೆ 90 ದಿನಗಳೊಳಗೆ ವಿಮಾ ಮೊತ್ತ ಸಿಗಲಿದೆ. ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಳ್ಳಳಾಗಿರುವ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, DICGC (Deposit Insurance And Credit Guarantee Corporation) ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಮೂಲಕ ವಿಮಾ ಮೊತ್ತದ ಪರಿಧಿಯನ್ನು ಕೂಡ ಹೆಚ್ಚಿಸಲಾಗಿದೆ ಮತ್ತು ಇದರಿಂದ ಶೇ.98.3 ರಷ್ಟು ಬ್ಯಾಂಕ್ ಖಾತೆದಾರರಿಗೆ ಸಂಪೂರ್ಣ ಸುರಕ್ಷತೆ ಸಿಗೆಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News