ನವದೆಹಲಿ: ಭೂಪಾಲ್ ಜಿಲ್ಲಾ ಚುನಾವಣಾಧಿಕಾರಿ 2008 ರ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಜ್ಞಾ ಠಾಕೂರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬಾಬರಿ ಮಸೀದಿ ಧ್ವಂಸದ ಬಗ್ಗೆ ಅವರು ನೀಡಿದ ಹೇಳಿಕೆಗೆ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಹೇರಲಾಗಿತ್ತು.ಆದರೆ ಇದರ ಹೊರತಾಗಿಯೂ ಮತ್ತೆ ಪ್ರಚಾರ ಮುಂದುವರೆಸಿದ ಹಿನ್ನಲೆಯಲ್ಲಿ ಅವರಿಗೆ ಮತ್ತೆ ಆಯೋಗ ನೋಟಿಸ್ ಜಾರಿ ಮಾಡಿದೆ.72 ಗಂಟೆಗಳ ಕಾಲ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಮೆರವಣಿಗೆಗಳು, ರಸ್ತೆ ಪ್ರದರ್ಶನಗಳು ಮತ್ತು ಇಂಟರ್ವ್ಯೂಗಳಿಂದ ಮೂರು ದಿನಗಳ ಕಾಲ ಪ್ರಗ್ಯಾಗೆ ಆಯೋಗವು ನಿಷೇಧ ಹೇರಿತ್ತು.ಈಗ ಅದನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ತಮಗೆ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಿದ್ದಾರೆ.
ಏಪ್ರಿಲ್ 20 ರಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಠಾಕೂರ್ ಅವರು 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಬಗ್ಗೆ ಮಾತನಾಡುತ್ತಾ" ನಾವು ಭವ್ಯವಾದ ರಾಮ ಮಂದಿರವನ್ನು ನಿರ್ಮಿಸುತ್ತೇವೆ. ನಾವು ಮಸೀದಿಯನ್ನು ಕೆಡವಲು ಹೋಗಿದ್ದೇವು, ಅದರ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆಗೆ ಪ್ರಗ್ಯಾ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಮಧ್ಯಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಲ್ಲದೆ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಹೇರಿತ್ತು.