ನೈನಿತಾಲ್ ಹೈಕೋರ್ಟ್ ತಲುಪಿದ ಡೆಂಗ್ಯೂ ಸಾವಿನ ಪ್ರಕರಣ!

Nainital High Court: ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಹಲ್ದ್ವಾನಿ ಮಹಾನಗರ ಪಾಲಿಕೆಯಿಂದ ಉತ್ತರ ಕೋರಿದೆ. ಈವರೆಗೂ ರಾಜ್ಯದಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ 4816 ತಲುಪಿದೆ. ಈ ಪ್ರಕರಣ ಕುರಿತಂತೆ ಮುಂದಿನ ವಿಚಾರಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ. 

Last Updated : Sep 26, 2019, 12:52 PM IST
ನೈನಿತಾಲ್ ಹೈಕೋರ್ಟ್ ತಲುಪಿದ  ಡೆಂಗ್ಯೂ ಸಾವಿನ ಪ್ರಕರಣ! title=

ನೈನಿತಾಲ್: ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಹಾನಿ ಪ್ರಕರಣ ಈಗ ನೈನಿತಾಲ್ ಹೈಕೋರ್ಟ್‌ಗೆ ತಲುಪಿದೆ. ಡೆಂಗ್ಯೂ ಸಾವಿನ ಬಗ್ಗೆ ಯೂತ್ ಬಾರ್ ಅಸೋಸಿಯೇಷನ್ ​​ಆಫ್ ಇಂಡಿಯಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಕುರಿತು ವಿಚಾರಣೆಯ ವೇಳೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ಡೆಂಗ್ಯೂ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.

ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಹಲ್ದ್ವಾನಿ ಮಹಾನಗರ ಪಾಲಿಕೆಯಿಂದ ಪ್ರಕರಣ ಕುರಿತು ಉತ್ತರ ಕೋರಿದೆ. ಈಗ ಈವರೆಗೂ ರಾಜ್ಯದಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ 4816 ತಲುಪಿದೆ. ಈ ಪ್ರಕರಣ ಕುರಿತಂತೆ ಮುಂದಿನ ವಿಚಾರಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ. 

ಆರಂಭದಲ್ಲಿ ಇಂತಹ ಪ್ರಕರಣಗಳು ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದಲ್ಲಿ ವರದಿಯಾಗಿವೆ. ಆದರೆ ಶೀಘ್ರದಲ್ಲೇ ಡೆಂಗ್ಯೂ ಅನೇಕ ಪ್ರದೇಶಗಳಲ್ಲಿ ಹರಡಿತು. ನಗರದ ಎಲ್ಲಾ ಆಸ್ಪತ್ರೆಗಳು ಡೆಂಗ್ಯೂ ರೋಗಿಗಳಿಂದ ತುಂಬಿದ್ದು, ಇತರ ಹಲವು ರೋಗಿಗಳು ತಮ್ಮ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ದೃಷ್ಟಿಯಿಂದ, ಡೆಹ್ರಾಡೂನ್‌ನ ಉನ್ನತ ಶಾಲೆಯನ್ನು ಸಹ ಸ್ವಲ್ಪ ಸಮಯದವರೆಗೆ ಮುಚ್ಚಲಾಗಿದೆ.
 

Trending News