ನವದೆಹಲಿ:ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ರವರ ನಿವಾಸವಾಗಿದ್ದ ತೀನ್ ಮೂರ್ತಿ ಭವನದ ಹತ್ತಿರದ ವೃತ್ತಕ್ಕೆ ಅಧಿಕೃತವಾಗಿ ಇಸ್ರೇಲ್ ನಗರದ ಹೈಫಾ ಹೆಸರನ್ನು ಇಡಲಾಗಿದೆ ಆ ಮೂಲಕ ಅದು ಇನ್ನು ಮುಂದೆ ತೀನ್ ಮೂರ್ತಿ-ಹೈಫಾ ಚೌಕ್ ಎಂದು ಕರೆಯಲಾಗುತ್ತದೆ.
This year we mark 100 years of the end of the First World War. We remember with pride, the Indian soldiers who fought valiantly in the war.
— Narendra Modi (@narendramodi) January 14, 2018
In the presence of PM @netanyahu, paid tributes to the brave Indian soldiers who fought at Haifa. The spot where we commemorate their sacrifice will now be called Teen Murti - Haifa Chowk. pic.twitter.com/WmXdS6pE7F
— Narendra Modi (@narendramodi) January 14, 2018
ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತಾನ್ಯಹು ಈ ತೀನ್ ಮೂರ್ತಿ-ಹೈಫಾ ಚೌಕ್ ಮರು ನಾಮಕರಣದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.1918 ರಲ್ಲಿ ಭಾರತ ಸೈನಿಕರು ಮೊದಲನೆಯ ಜಾಗತಿಕ ಯುದ್ದದ ಸಂದರ್ಭದಲ್ಲಿ ಇಸ್ರೇಲಿನ ಹೈಫಾದಲ್ಲಿ ಭಾಗವಹಿಸಿದ್ದರು, ಅದರ ನೂರನೆಯ ವರ್ಷ ಇದಾಗಿದ್ದರಿಂದ ಅದನ್ನು ಸ್ಮರಿಸುವ ನಿಟ್ಟಿನಲ್ಲಿ ಈಗ ಅದನ್ನು ತೀನ್ ಮೂರ್ತಿ-ಹೈಫಾ ಚೌಕ್ ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.