ಪಿಜ್ಜಾ ಆಸೆ ತೋರಿಸಿ ಮನೆ ಮಾಲಿಕನ ಮಗನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್

ಪಿಜ್ಜಾವನ್ನು ಕೊಡಿಸುವುದಾಗಿ ಹೇಳಿ ನಂತರ ಹತ್ತನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.

Last Updated : Oct 15, 2018, 09:23 PM IST
ಪಿಜ್ಜಾ ಆಸೆ ತೋರಿಸಿ ಮನೆ ಮಾಲಿಕನ ಮಗನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್  title=

ನವದೆಹಲಿ: ಪಿಜ್ಜಾವನ್ನು ಕೊಡಿಸುವುದಾಗಿ ಹೇಳಿ ನಂತರ ಹತ್ತನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.

ಬಾಲಕಿಯ ಯಜಮಾನನ ಮಗನು ಈ ಕೃತ್ಯವನ್ನು ಎಸಗಿದ್ದು ಆತನ ಜೊತೆ ಸ್ನೇಹಿತರು ಕೂಡಿ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಶುಕ್ರವಾರ ಪಿಜ್ಜಾ ಕೊಡಿಸುವುದಾಗಿ ಹೇಳಿ ಆಕೆಯನ್ನು ಕೋಣೆಯ ಒಳಗಡೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿದೆ ಎಂದು  ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.ಆ ಬಾಲಕಿಗೆ ಈ ಬೆದರಿಕೆ ಹಾಕಿ ಇದನ್ನು ಯಾರಿಗೋ ತಿಳಿಸಬಾರದೆಂದು ಹೇಳಿದ್ದರು ಎನ್ನಲಾಗಿದೆ.

ಈ ಬಾಲಕಿ  ಕಲ್ಯಾಣ್ಪುರಿಯಲ್ಲಿ ಕಲ್ಯಾಣ್ ವಾಸ್ ಶಾಂತಿ ಉಳಿದುಕೊಂಡಿದ್ದು,ಕೃತ್ಯವೆಸಗಿರುವ ನಾಲ್ವರು ಆರೋಪಿಗಳು ಪೂರ್ವ ವಿನೋದ್ ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ಬಾಲಕಿಯ ತಾಯಿ ಕೆಲಸದಿಂದ ಹಿಂದಿರುಗಿದಾಗ, ಈ ಘಟನೆಯನ್ನು ವಿವರಿಸಲಾಗಿದೆ ಅನಂತರ ಇಬ್ಬರೂ ಪೊಲೀಸ್ ಠಾಣೆಗೆ ದೂರು ದಾಖಲಾಗಿಸಿದೆ.ಈಗ ಪೋಲಿಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

 

Trending News