ಭಾರತೀಯ ಸೇನೆಗೆ ಸಿಗಲಿದೆ ಮತ್ತಷ್ಟು ಬಲ, 2290 ಕೋಟಿ ರೂ.ಗಳ ಸೈನ್ಯ ಉಪಕರಣಗಳ ಖರೀದಿಗೆ ಅನುಮೋದನೆ

"ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಎಸಿ 2,290 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಿದೆ" ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Last Updated : Sep 28, 2020, 10:48 PM IST
  • 2,290 ಕೋಟಿ ರೂ.ಗಳ ಶಸ್ತ್ರಾಸ್ತ್ರ ಹಾಗೂ ಸೈನ್ಯ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದ ರಕ್ಷಣಾ ಸಚಿವಾಲಯ.
  • ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಡಿಎಸಿಯಿಂದ ಈ ಅನುಮೋದನೆ.
  • ಲಡಾಖ್ ನಲ್ಲಿ ಚೀನಾ ಜೊತೆಗೆ ಏರ್ಪಟ್ಟ ಬಿಕ್ಕಟ್ಟಿನ ನಡುವೆ ಈ ಖರೀದಿ ನಿರ್ಣಯ ಭಾರಿ ಮಹತ್ವಪಡೆದುಕೊಂಡಿದೆ.
ಭಾರತೀಯ ಸೇನೆಗೆ ಸಿಗಲಿದೆ ಮತ್ತಷ್ಟು ಬಲ, 2290 ಕೋಟಿ ರೂ.ಗಳ ಸೈನ್ಯ ಉಪಕರಣಗಳ ಖರೀದಿಗೆ ಅನುಮೋದನೆ title=

ನವದೆಹಲಿ: ಯುಎಸ್ ನಿಂದ ಸುಮಾರು 72,000 ಸಿಗ್ ಸಾಯರ್ ಅಸಾಲ್ಟ್ ದಾಳಿ ರೈಫಲ್ಗಳನ್ನು ಖರೀದಿಸುವುದು ಸೇರಿದಂತೆ 2,290 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ (Defence Ministry) ಸೋಮವಾರ ಅನುಮೋದನೆ ನೀಡಿದೆ. ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಂಗ್ರಹಣೆಯ ನಿರ್ಧಾರಗಳನ್ನು ತೆಗೆದುಕೊಂಡ ರಕ್ಷಣಾ ಸಚಿವಾಲಯದ ಉನ್ನತ ಸಮಿತಿಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ ಖರೀದಿ ಪ್ರಸ್ತಾಪಗಳನ್ನು ಅನುಮೊದಿಸಲಾಗಿದೆ.

ಇದನ್ನು ಓದಿ- ಎರಡು ಮೂರು ತಿಂಗಳಲ್ಲಿ ರಷ್ಯಾದಿಂದ ಭಾರತಕ್ಕೆ ರಕ್ಷಣಾ ಸಾಮಗ್ರಿ ಹಸ್ತಾಂತರ

ಡಿಎಸಿ ಖರೀದಿಸಿದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳಲ್ಲಿ ರೈಫಲ್‌ಗಳಲ್ಲದೆ ವಾಯುಪಡೆ ಮತ್ತು ನೌಕಾಪಡೆಗೆ ಸುಮಾರು 970 ಕೋಟಿ ರೂ.ಗಳಿಗೆ ಆಂಟಿ ಐರ್ಫಿಎಲ್ದ ವೆಪನ್  (ಎಸ್ಎಎಡಬ್ಲ್ಯೂ) ವ್ಯವಸ್ಥೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಎಸಿ 2,290 ಕೋಟಿ ರೂ.ಗಳ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಿದೆ"  ಎಂದು ಹೇಳಿರುವ ಸೇನಾ ಅಧಿಕಾರಿಗಳು, ಮುಂಚೂಣಿಯಲ್ಲಿ ನಿಯೋಜಿಸಲಾಗಿರುವ ಸನಿಕರಿಗಾಗಿ ಸಿಗ ಸೌರ್ ರೈಫಲ್ ಗಳ ಖರೀದಿಗೆ 780 ಕೋಟಿ ರೂ.ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ- 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಭಂಧ ವಿಧಿಸಿದ ಕೇಂದ್ರ ರಕ್ಷಣಾ ಸಚಿವ Rajnath Singh

"ಸ್ಟಾಟಿಕ್ ಎಚ್ಎಫ್ ಟ್ರಾನ್ಸ್-ರಿಸಿವರ್ ಸೆಟ್'ಗಳ ಮೇಡ್ ಇನ್ ಇಂಡಿಯಾ ಶ್ರೇಣಿಯಲ್ಲಿ ಖರೀದಿಗಾಗಿ 540  ಕೋಟಿ ರೂ.ಗಳ ಖರೀದಿಗೆ ಅನುಮೋದನೆ ನೀಡಲಾಗಿದ್ದು , ಎಚ್ಎಫ್ ರೇಡಿಯೋ ಸೆಟ್ ಭೂ, ವಾಯುಸೇನೆಯ ಭೂಮಿಯ ಮೇಲಿನ ಯುನಿಟ್ ಗಳ ಅಡೆತಡೆ ಇಲ್ಲದ ಸಂಚಾರಕ್ಕೆ ಸಹಾಯ ಮಾಡಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ- Chinaಗೆ ಭಾರಿ ಪೆಟ್ಟು ನೀಡಿದ ಮಿತ್ರರಾಷ್ಟ್ರ Russia, S-400 ಮಿಸೈಲ್ ಡಿಲೇವರಿ ಮೇಲೆ ತಡೆ

ಪೂರ್ವ ಲಡಾಖ್ ನಲ್ಲಿ ಚೀನಾ ಜೊತೆಗೆ ಏರ್ಪಟ್ಟ ವೈಮನಸ್ಸಿನ ನಡುವೆ ಸೇನಾ ಸಾಮಗ್ರಿಗಳ ಈ ಖರೀದಿ ಭಾರಿ ಮಹತ್ವಪಡೆದುಕೊಂಡಿದೆ.

Trending News