ನವದೆಹಲಿ: ಲಡಾಖ್ನ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಸೇವಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಚೀನಾ ಮತ್ತು ಭಾರತದ ಮಿಲಿಟರಿ ಹಾಗೂ ರಾಜತಾಂತ್ರಿಕದ ನಿರಂತರ ಮಾತುಕತೆ ಮೂಲಕ ಒಮ್ಮತದ ಸಂಧಾನ ನಡೆದ ನಂತರ ರಾಜನಾಥ್ ಸಿಂಗ್ ಅವರ ಸಭೆ ಬಂದಿದೆ.
ಇದನ್ನೂ ಓದಿ: ಮುಂದಿನ ವಾರ ಲಡಾಖ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಈ ವಾರದ ಆರಂಭದಲ್ಲಿ, ಪೂರ್ವ ಲಡಾಖ್ನಲ್ಲಿರುವ ಸ್ಪರ್ಧಾತ್ಮಕ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) - ಗಾಲ್ವಾನ್ ವ್ಯಾಲಿ, ಪೆಟ್ರೋಲಿಂಗ್ ಪಾಯಿಂಟ್ 15 ಮತ್ತು ಹಾಟ್ ಸ್ಪ್ರಿಂಗ್ಸ್ನ ಉದ್ದಕ್ಕೂ ಮೂರು ಹಾಟ್ಸ್ಪಾಟ್ಗಳಲ್ಲಿ ಭಾರತ ಮತ್ತು ಚೀನಾ "ಸೀಮಿತ ಮಿಲಿಟರಿ ನಿಷ್ಕ್ರಿಯತೆ ನಿಯಮವನ್ನು ಜಾರಿಗೆ ತರುವ ವಿಚಾರವಾಗಿ ಮಾತುಕತೆ ನಡೆಸಿದ್ದವು.
ಆದಾಗ್ಯೂ, ಕಳೆದ ತಿಂಗಳು ಪೂರ್ವ ಲಡಾಖ್ ಮತ್ತು ಉತ್ತರ ಸಿಕ್ಕಿಂನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಗಳು ಎಲ್ಎಸಿಯ ಎರಡೂ ಬದಿಗಳಲ್ಲಿ ಮಿಲಿಟರಿ ರಚನೆಗೆ ಕಾರಣವಾಯಿತು, ಅದು ಲಡಾಖ್ನಿಂದ ಉತ್ತರಾಖಂಡ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಕ್ಕೆ ವಿಸ್ತರಿಸಿದೆ ಎಂದು ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.